ಬೆಂಗಳೂರು –
ಹೌದು 2012 ಮತ್ತು 2015 ನೇ ಸಾಲಿನಲ್ಲಿ ನಡೆದ ಶಿಕ್ಷಕರ ಅಕ್ರಮ ನೇಮಕಾತಿಯ ಪ್ರಕರಣ ಕುರಿತು ಸಿಐಡಿ ಪೊಲೀಸರು ಮತ್ತಷ್ಟು ಶಿಕ್ಷಕರನ್ನು ಬಂಧನ ಮಾಡಿದ್ದಾರೆ.ಮತ್ತೆ 8 ಸಹ ಶಿಕ್ಷಕರನ್ನು ಬಂಧನ ಮಾಡಿದ್ದು ಈವರೆಂಗೆ ಶಿಕ್ಷಕರ ನೇಮಕಾತಿ ಅಕ್ರಮ ಕೇಸ್ ನಲ್ಲಿ ಬಂಧಿತರ ಸಂಖ್ಯೆ 69 ಕ್ಕೆ ಏರಿಕೆಯಾದಂತಾಗಿದೆ.
2012 -15 ನೇ ಸಾಲಿನ ಶಿಕ್ಷಕರ ನೇಮಕಾತಿ ಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ ಸಂಬಂಧ ಸಿಐಡಿ ಪೊಲೀಸರು ಮತ್ತೆ 8 ಸಹ ಶಿಕ್ಷಕರನ್ನು ಬಂಧಿಸಿದ್ದು ಹೀಗಾಗಿ ಈ ಒಂದು ಪ್ರಕರಣದ ತನಿಖೆ ಕಾರ್ಯ ಚುರುಕುಗೊಂಡಿದೆ. ಹೀಗಾಗಿ ಇದುವರೆಗೆ 69 ಆರೋಪಿತ ಶಿಕ್ಷಕರನ್ನು ಸಿಐಡಿ ಪೊಲೀಸರು ಬಂಧಿಸಿದಂತಾಗಿದೆ.
2012 -13 ನೇ ಸಾಲಿನಲ್ಲಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಮದನ ಬಾವಿ ಶಾಲೆಯ ಶಿಕ್ಷಕ ಶ್ರೀಕಾಂತ್, ಬಸವನಬಾಗೇ ವಾಡಿ ಕೊಲ್ಹಾರ ಪ್ರೌಢಶಾಲೆಯ ಶಿಕ್ಷಕ ನಾಯಕ ಪ್ರಕಾಶ್ ರತ್ನು,ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಮರೂರು ಸರ್ಕಾರಿ ಶಾಲೆ ಸಹ ಶಿಕ್ಷಕ ಮಹಬೂಬ್ ಬಾಷಾ,ಉತ್ತರ ಕನ್ನಡ ಜಿಲ್ಲೆ ಮುಂಡಗೋಡು ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕಿ ಸುಜಾತ ಭಂಡಾರಿ ಅವರನ್ನು ಬಂಧಿಸಲಾಗಿದೆ.
2014 – 15ನೇ ಸಾಲಿನಲ್ಲಿ ನೇಮಕಾತಿಗೆ ಸಂಬಂಧಿಸಿದಂತೆ ಮತ್ತೆ ಹೊಸದಾಗಿ ನಾಲ್ವರು ಶಿಕ್ಷಕರನ್ನು ಬಂಧಿಸಲಾಗಿದೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಕೊರಟಗೆರೆ ತಾಲೂಕಿನ ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕಿ ದೀಪಾರಾಣಿ, ಮಧುಗಿರಿ ಶೈಕ್ಷಣಿಕ ಜಿಲ್ಲೆ ಪಾವಗಡ ತಾಲೂಕಿನ ನಾಗಲಮಡಿಕೆ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಮೋಹನ್ ಕುಮಾರ್,ಚಿತ್ರದುರ್ಗ ಜಿಲ್ಲೆ ಹಿರಿಯೂರು ಸರ್ಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಶಾಂತಿಲಾಲ್ ಚೌಹಾಣ್ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು ಸಿಐಡಿ ಪೊಲೀಸರು ತನಿಖಾ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……