ಹುಬ್ಬಳ್ಳಿ –
ಸುಧಾರಣೆ ಮಾಡೊದು ಬಿಟ್ಟು ಮಾಧ್ಯಮ ದವರಿಗೆ ಸುದ್ದಿ ಯಾರ ಕೊಟ್ಟಿದ್ದಾರೆಂದು ಚೇಕ್ ಮಾಡುತ್ತಿರುವ ಡಿಸಿ ಸಾಹೇಬ್ರು – ಮಾಡಲು ಸಾಕಷ್ಟು ಕೆಲಸಗಳಿಗೆ ಸಾಹೇಬ್ರೆ ಮೊದಲು ಚಿಗರಿ ಬಸ್ ಹೇಗಿವೆ ಒಮ್ಮೆ ನೋಡಿ ಆ ಮೇಲೆ ಸುದ್ದಿ ಯಾರು ಹೇಳ್ತಾ ಇದ್ದಾರೆ ಕೇಳಿ…..
ಹುಬ್ಬಳ್ಳಿ ಧಾರವಾಡ ನಗರದ ಮಧ್ಯೆ ಸಂಚಾರ ಮಾಡುತ್ತಿರುವ ಬರು ನೀರಿಕ್ಷಿತ ಚಿಗರಿ ಬಸ್ ನಲ್ಲಿನ ಅವ್ಯವಸ್ಥೆ ಕುರಿತಂತೆ ನಿಮ್ಮ ಸುದ್ದಿ ಸಂತೆ ಕಳೆದ ಮೂರು ನಾಲ್ಕು ದಿನಗಳಿಂದ ನಿರಂತರ ವಾಗಿ ಸುದ್ದಿಗಳನ್ನು ವಸ್ತು ನಿಷ್ಠವಾಗಿ ಪ್ರಕಟ ಮಾಡುತ್ತಿದೆ.ಈ ಒಂದು ವ್ಯವಸ್ಥೆ ಮತ್ತು ಅಧಿಕಾರಿ ಗಳ ಕುರಿತಂತೆ ನಿರಂತರವಾಗಿ ವರದಿಗಳನ್ನು ಪ್ರಕಟ ಮಾಡುತ್ತಿದ್ದು
ವರದಿಯಿಂದಾಗಿ ಎಚ್ಚೇತ್ತು ಕೊಂಡು ಚಿಗರಿ ಬಸ್ ಗಳ ಸುಧಾರಣೆಗೆ ಸಮಸ್ಯೆಗಳಿಗೆ ಮುಕ್ತಿ ನೀಡಲು ಮುಂದಾಗಬೇಕಾದ ಡಿಸಿ ಸಾಹೇಬ್ರು ಅದನ್ನೇಲ್ಲ ಬಿಟ್ಟು ಚಿಗರಿ ಅವ್ಯವಸ್ಥೆಯ ಕುರಿತಂತೆ ಮಾಧ್ಯಮ ದವರಿಗೆ ಅದರಲ್ಲೂ ಸುದ್ದಿ ಸಂತೆಯವರಿಗೆ ಸುದ್ದಿ ನೀಡುತ್ತಿರುವವರು ಯಾರು ಮಾಹಿತಿಯನ್ನು ಯಾರು ನೀಡುತ್ತಿದ್ದಾರೆ ಇಂಚಿಂಚೂ ನಿಖರವಾದ ಮಾಹಿತಿ ಹೇಗೆ ಹೋಗುತ್ತಿದೆ ಹೀಗೆ ಎಲ್ಲವನ್ನೂ ಚೇಕ್ ಮಾಡುತ್ತಿದ್ದಾರೆ.
ಡಿಸಿ ಸಾಹೇಬ್ರೆ ಚಿಗರಿ ಬಸ್ ಸಾರಿಗೆ ಯಲ್ಲಿ ಈ ಹಿಂದೆ ಇದ್ದ ಅಧಿಕಾರಿಗಳು ಚಾಲಕರ ಮೆಚ್ಚುಗೆಗೆ ಪಾತ್ರವಾಗಿ ಕೆಲಸಗಳನ್ನು ಮಾಡಿದ್ದಾರೆ ಅವರ ಹೆಸರನ್ನು ಅವರು ಮಾಡಿದ ಸೇವೆಯನ್ನು ಈಗಲೂ ಚಾಲಕರು ಮುಕ್ತವಾಗಿ ಹೇಳುತ್ತಿದ್ದಾರೆ ಹೀಗೆ ಕೆಲಸ ಮಾಡಿ ಅದನ್ನೇಲ್ಲವನ್ನು ಬಿಟ್ಟು ಚಾಲಕರಿಗೆ ಅಮಾನತು ಶಿಕ್ಷೆ ಏನಾದರು ಒಂದಿಷ್ಟು ಹೆಚ್ಚು ಕಡಿಮೆಯಾದರೆ ವರ್ಗಾವಣೆ ವರದಿ ಕೇಳೊದು ಯಾರು ಮಾಡಿಲ್ಲ
ಈ ಒಂದು ಕುರಿತಂತೆ ನಾವು ಕೂಡಾ ಧ್ವನಿ ಎತ್ತಿದ್ದು ಇನ್ನಾದರೂ ಈ ಒಂದು ಕುರಿತಂತೆ ಆತ್ಮಾವಲೋಕನ ಮಾಡಿಕೊಳ್ಳಿ ಅದನ್ನು ಬಿಟ್ಟು ಸುದ್ದಿ ಯಾರು ಕೊಡುತ್ತಿದ್ದಾರೆ ಮಾಹಿತಿ ಯಾರು ನೀಡುತ್ತಿದ್ದಾರೆ ಎಂಬ ಬಗ್ಗೆ ಶೋಧನೆ ಮಾಡಿದರೆ ನಿಮಗೆ ಸಿಗೊದು ಮತ್ತೊಂದು ವಸ್ತುನಿಷ್ಠ ವರದಿ
ಬಸ್ ಗಳನ್ನು ಸುಧಾರಣೆ ಮಾಡಿ ಬೆಂಗಳೂರಿ ನಿಂದ ಬಂದಿರುವ ನಿಮ್ಮಿಂದ ಇನ್ನಷ್ಟು ಇಲಾಖೆ ಅಭಿವೃದ್ದಿಯಾಗಲಿ ಆ ಒಂದು ನಿರೀಕ್ಷೆಯಲ್ಲಿ ಹುಬ್ಬಳ್ಳಿ ಧಾರವಾಡ ಎರಡು ಡಿಪೋ ಗಳ ಚಿಗರಿ ಬಸ್ ಚಾಲಕರು ಇದ್ದಾರೆ ಅದನ್ನು ಮಾಡುತ್ತಿರಾ ಎಂಬೊದನ್ನು ನಾವು ಕೂಡಾ ಕಾದು ನೋಡು ತ್ತೇವೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..