ಮೈ ಮರೆತು ಕುಣಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು
ಬೀದರ್ –
ಕೊರೊನಾ ನಿಯಮ ಉಲ್ಲಂಘಿಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮೈಮರೆತು ಕುಣಿದ ಕುಪ್ಪಳಿಸಿದ ಘಟನೆ ಬೀದರ್ ನಲ್ಲಿ ನಡೆದಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ಡ್ಯಾನ್ಸ್ ಮಾಡಿ ಸುದ್ದಿಯಾಗಿದ್ದಾರೆ. ನಿನ್ನೆ ಮಧ್ಯರಾತ್ರಿ ದಿ. ಗುರುಪಾದಪ್ಪ ನಾಗಮಾರಪಳ್ಳಿ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಆರ್ಥಿಕ ಸ್ಪಂದನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಿಸಿಸಿ ಬ್ಯಾಂಕ್ ಹಣದಲ್ಲಿ ದಿ ನಾಗಮರಾಪಳ್ಳಿ ಹುಟ್ಟು ಆಚರಣೆ ಮತ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇಂಥಹ ಒಂದು ಕಾರ್ಯಕ್ರಮದಲ್ಲಿ ವೇದಿಕೆಯ ಕಾರ್ಯಕ್ರಮ ಮುಗಿದ ನಂತರ ತಡರಾತ್ರಿ ಅಧ್ಯಕ್ಷರು ಡ್ಯಾನ್ಸ್ ಮಾಡಿದ್ದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಾಗಮರಾಪಳ್ಳಿ ಕುಟುಂಬ ಇನ್ನೊಂದು ಕಡೆ ಕಾರ್ಯಕ್ರಮ ಮುಗಿದ ಮೇಲೆ ಮದ್ಯ ರಾತ್ರಿ ಡ್ಯಾನ್ಸ್ ಕಾರ್ಯಕ್ರಮ ಮುಗಿದ ನಂತರ ರಾತ್ರಿ ವೇಳೆ ಜನ ಸೇರಿಸಿಕೊಂಡು ಡಿಜೆ ಸಾಂಗ್ ಗೆ ಸ್ಟೆಪ್ ಹಾಕಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಕುಣಿದು ಸುದ್ದಿಯಾಗಿದ್ದಾರೆ.
ದಿ.ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಉಮಾಕಾಂತ ನಾಗಮಾರಪಳ್ಳಿ ಮಧ್ಯರಾತ್ರಿ ಜನಜಂಗುಳಿ ಸೇರಿಸಿಕೊಂಡು ಕುಣಿದು ಕುಪಳ್ಳಿಸಿದ್ದು ಒಂದೆಡೆಯಾದರೆ ಮತ್ತೊಂದೆಡೆ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಕಾರ್ಯಕ್ರಮದಲ್ಲಿ ಯುವಕರು ಮಧ್ಯಮ ವರ್ಗದವರು, ವೃದ್ಧರು ಭಾಗಿಯಾಗಿದ್ದರು ತಂದೆ ಹುಟ್ಟುಹಬ್ಬದ ನಿಮಿತ್ಯಕ್ಕೆ ಆರ್ಥಿಕ ಸ್ಪಂದನ ಕಾರ್ಯಕ್ರಮ ಯಶಸ್ವಿಯಾದ ಖುಷಿಯಲ್ಲಿ ಕೊರೊನಾ ನಿಯಮ ಮರೆತು ಕುಣಿದ ನಾಗಮಾರಪಳ್ಳಿ ವಿರುದ್ದ ಪ್ರಜ್ಞಾವಂತ ನಾಗರೀಕರು ಬೇಸರಗೊಂಡಿದ್ದಾರೆ. ಇವೆಲ್ಲದರ ನಡುವೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಮಾಡಿದ ನೃತ್ಯದ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಸಖತ್ ವೈರಲ್ ಆಗಿವೆ.