ವಿಜಯಪುರ –
ಬ್ಲಾಕ್ ಫಂಗಸ್ ಗೆ ರಾಜ್ಯದಲ್ಲಿ ಶಿಕ್ಷಣ ಇಲಾಖೆಯಲ್ಲಿ ಮೊದಲ ಪ್ರಕರಣದಲ್ಲಿ ಅಧಿಕಾರಿಯೊಬ್ಬರು ಮೃತ ರಾಗಿದ್ದಾರೆ.ಹೌದು ಮೊದಲು ಕೋವಿಡ್ ಕಾಣಿಸಿ ಕೊಂಡು ಆಸ್ಪತ್ರೆಗೆ ದಾಖಲಾಗಿ ನೆಗೆಟಿವ್ ವರದಿ ಬಂದು ಮತ್ತೆ ಪಾಸಿಟಿವ್ ಬಂದ ನಂತರ ಆಸ್ಪತ್ರೆಗೆ ದಾಖಲಾದ ಮೇಲೆ ಬ್ಲಾಕ್ ಫಂಗಸ್ ಕಾಣಿಸಿಕೊಂ ಡು ಈ ಒಂದು ಮಹಾಮಾರಿಗೆ ವಿಜಯಪುರ ಜಿಲ್ಲಾ DDPI ಕಚೇರಿಯ ಅಧೀಕ್ಷಕ ಅರವಿಂದ ಅಂಕದ ನಿಧನರಾಗಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ಇವರಿಗೆ ಕರ್ತವ್ಯದ ಮೇಲಿದ್ದಾಗ ಇವರಿಗೆ ಸೋಂಕು ಕಾಣಿಸಿಕೊಂಡಿತ್ತು ನಂತರ ಚಿಕಿತ್ಸೆಗಾಗಿ ಬೇರೆ ಬೇರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.ನಂತರ ಕರೋನಾ ನೆಗೆಟಿವ್ ಬಂದು ನಂತರ ಮತ್ತೆ ಪಾಸಿಟಿವ್ ಬಂದ ಮೇಲೆ ಬ್ಲಾಕ್ ಫಂಗಸ್ ಅಟ್ಯಾಕ್ ಆಗಿ ಚಿಕಿತ್ಸೆಗೆ ಸ್ಪಂದಿಸುತ್ತಿ ದ್ದ ಇವರು ಇನ್ನೇನು ಗುಣಮುಖರಾಗುತ್ತಾರೆಂದು ಕೊಳ್ಳಲಾಗಿತ್ತು.
ಎಲ್ಲರ ಹಾರೈಕೆ ಪ್ರಾರ್ಥನೆಯಿಂದಾಗಿ ಅರವಿಂದ ಅವರು ಇನ್ನೇನು ಗುಣಮುಖರಾಗುತ್ತಾರೆ ಎಂದು ಕೊಳ್ಳಲಾಗಿತ್ತು ಆದರೆ ಆಗಿದ್ದೇ ಬೇರೆ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಉಂಟಾಗಿ ಗುಣಮುಖರಾಗುತ್ತಿದ್ದ ಅರವಿಂದ ಅಂಕದ ಅವರು ಚಿಕಿತ್ಸೆ ಫಲಿಸದೇ ಘಟ ಪ್ರಭಾದ ಜಿಜೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇಲಾಖೆಯಲ್ಲಿ ಬ್ಲಾಕ್ ಫಂಗಸ್ ಗೆ ಬಲಿಯಾದ ಮೊದಲ ಅಧಿಕಾರಿಯಾಗಿದ್ದಾರೆ ಇವರು.ಶಿಕ್ಷಕರಿಗೆ ಇತರರಿಗೆ ಕಚೇರಿಯಲ್ಲಿ ಸದಾ ಯಾವಾಗಲೂ ಉತ್ಸಾಹಿ ಸ್ನೇಹಪರವಾಗಿದ್ದ ಇವರ ನಿಧನಕ್ಕೆ ಜಿಲ್ಲೆ ಯ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ ಭಾವಪೂರ್ಣ ನಮನ ಸಲ್ಲಿಸಿದ್ದಾರೆ
ವಿಜಯಪುರ ಉಪನಿರ್ದೇಶಕರು ಎನ್ ವ್ಹಿ ಹೊಸೂ ರ, ಜಿ ಎ ದಾಸರ, ಇಓ ಮುಜಾವರ, ಬಿ ವೈ ಪಿಸಿ, ಆರೀಫ್ ಬಿರಾದರ, ಬಿ ಟಿ ಗೌಡರ, ಸುರೇಶ ಶಡಶ್ಯಾ ಳ, ಜುಬೇರ ಕೆರೂರ, ಜಗದೀಶ ಬೊಳಸೂರ, ಪವಾಡೆಪ್ಪ, ಗುರು ತಿಗಡಿ, ಎಸ್ ವಾಯ್ ಸೊರಟಿ, ಚಂದ್ರಶೇಖರ್ ಶೆಟ್ರು, ಅಶೋಕ ಸಜ್ಜನ, ಎಲ್ ಐ ಲಕ್ಕಮ್ಮನವರ, ಶಂಕರ ಘಟ್ಟಿ, ಶರಣಪ್ಪಗೌಡ ಆರ್ ಕೆ, ಎಸ್ ಎಫ್ ಪಾಟೀಲ, ಹನುಮಂತಪ್ಪ ಮೇಟಿ ಮಲ್ಲಿಕಾರ್ಜುನ ಉಪ್ಪಿನ, ಶರಣಬಸವ ಬನ್ನಿಗೋಳ, ಹನುಮಂತಪ್ಪ ಬೂದಿಹಾಳ, ಎಂ ವಿ ಕುಸುಮ ಜಿ, ಟಿ, ಲಕ್ಷ್ಮೀದೇವಮ್ಮ, ಕೆ ನಾಗರಾಜ, ರಾಮಪ್ಪ ಹಂಡಿ, ಸಂಗಮೇಶ ಖನ್ನಿನಾಯ್ಕರ, ಜೆ ಟಿ ಮಂಜುಳಾ, ಗೋವಿಂದ ಜುಜಾರೆ, ದಾವಣಗೆರೆ ಸಿದ್ದೇಶ,ನಾಗರಾಜ ಕಾಮನಹಳ್ಳಿ, ಹೊಂಬರಡಿ ಆರ್,ಡಿ, ಅಕ್ಬರಲಿ ಸೋಲಾಪುರ, ರಾಜೀವಸಿಂಗ ಹಲವಾಯಿ, ಕಾಶಪ್ಪ ದೊಡವಾಡ, ಸಿದ್ದಣ್ಣ ಉಕ್ಕಲಿ, ಕಿರಣ ರಘುಪತಿ ಚಂದ್ರಶೇಖರ್ ತಿಗಡಿ, ಎಂ ಐ ಮುನವಳ್ಳಿ, ಆರ್ ನಾರಾಯಣಸ್ವಾಮಿ ಚಿಂತಾಮ ಣಿ, ಫನೀಂದ್ರನಾಥ, ಡಿ ಎಸ್ ಭಜಂತ್ರಿ, ಬಿ ಎಸ್ ಮಂಜುನಾಥ, ರೇವಣ್ಣ ಎಸ್, ಎಸ್ ಆರ್ ಎಮ್ಮಿಮ ಠ, ತುಮಕೂರು ರವೀಶ, ಟಗರು ಪಂಡಿತ, ಕಲ್ಪನ ಚಂದನಕರ ರಾಜಶ್ರೀ ಪ್ರಭಾಕರ ಶಿವಲೀಲಾ ಪೂಜಾ ರ, ಶಿವಮೊಗ್ಗ ಸೋಮಶೇಖರ್,ಕೊಡಗು ರೋಜಿ, ಸುರೇಶ ಅರಳಿ ಅಶೋಕ ಬಿಸೆರೊಟ್ಟಿ, ಮಧುಗಿರಿ ದೇವರಾಜ ಲೀಲಾ ಮಹೇಶ್ವರ ಆರ್ ಐ ಹನಗಿ, ಕೋಲಾರ ಶ್ರೀನಿವಾಸ ಸೇರಿದಂತೆ ಹಲವರು ಮೃತ ರಾದ ಅಧಿಕಾರಿಗೆ ಭಾವಪೂರ್ಣ ನಮನ ಸಲ್ಲಿಸಿ ಸಂತಾಪ ಸೂಚಿಸಿದ್ದಾರೆ.