ಬೆಂಗಳೂರು –
ಶಾಸಕರ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರದ ಪಟ್ಟಿಯನ್ನು ಜೂನ್ 30 ರೊಳಗೆ ಲೋಕಾಯು ಕ್ತಕ್ಕೆ ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿದೆ.ಹೌದು ಈ ಹಿಂದೆ ಹಲವು ಬಾರಿ ಇದೇ ವಿಚಾರ ಕುರಿತಂತೆ ಹೇಳಿ ದರು ಕೂಡಾ ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಶಾಸಕರು ಸ್ಪಂದಿಸಿಲ್ಲ ಆಸ್ತಿ ವಿವರವನ್ನು ಸಲ್ಲಿಸಿಲ್ಲ ಹೀಗಾಗಿ ಸಧ್ಯ ಹದಿನೈದನೇ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರು 2021-22ನೇ ಸಾಲಿಗೆ ಸಂಬಂಧಿಸಿದ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ಲೋಕಾಯು ಕ್ತರಿಗೆ ಸಲ್ಲಿಸುವಂತೆ ಅಧಿಕೃತ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 8 ರಂದು ಲೋಕಾಯುಕ್ತ ನಿಬಂಧಕರು ವಿಧಾನ ಸಭೆ ಸಚಿವಾಲಯಕ್ಕೆ ಪತ್ರ ಬರೆದು ಶಾಸಕರು ಆಸ್ತಿ ವಿವರ ಸಲ್ಲಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರತಿಯೊಬ್ಬ ಶಾಸವಕರು ಆಯಾ ವರ್ಷದ ಜೂ.30ರೊಳಗಾಗಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ವಿವರವನ್ನು ಲೋಕಾಯುಕ್ತ ಕಾಯ್ದೆ ಪ್ರಕಾರ ಸಲ್ಲಿಸಬೇಕಾಗಿದೆ ಎಂದು ಉಲ್ಲೇಖವನ್ನು ಮಾಡಿ ಗಡುವನ್ನು ನೀಡಿದ್ದಾರೆ.