ಬೆಂಗಳೂರು –
ಐರನ್ ಮ್ಯಾನ್ ಇನ್ಸ್ಪೆಕ್ಟರ್ ಮುರಗೇಶ ಚೆನ್ನಣ್ಣವರ ಅವರಿಗೆ ಜಯಕರ್ನಾಟಕ ಜನಪರ ವೇದಿಕೆಯಿಂದ ಧಾರವಾಡದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಹುಬ್ಬಳ್ಳಿಯ ಹೆಸ್ಕಾಂ ಜಾಗೃತದಳದ ಇನ್ಸ್ಪೆಕ್ಟರ್ ಮುರುಗೇಶ ಚೆನ್ನಣ್ಣವರ ಒರಿಸ್ಸಾದ ದಲ್ಲಿ ನಡೆದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ, 42,2 ಕಿಲೋ ಮೀಟರ್ ರನ್ನಿಂಗ್, 18೦ ಕೀ ಮೀ ಸೈಕ್ಲಿಂಗ್,ಮತ್ತು 4,ಕೀ ಮೀ ಈಜು ಅನ್ನು ಕೇವಲ 15, ಗಂಟೆಯಲ್ಲಿ ಪೂರೈಸಿ ಐರನ್ ಮ್ಯಾನ ಪಡೆದು ವಿಜೇತರಾಗಿದ್ದು ರಾಜ್ಯಕ್ಕೆ ಹೊಸ ಕೀರ್ತಿಯನ್ನು ತಂದುಕೊಟ್ಟ ಹಿನ್ನೆಲೆಯಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ, ನೇತೃತ್ವ ದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ತುಕರಾಂ ಮೋಹಿತೆ, ವೀರಣ್ಣ ಅಣ್ಣಿಗೇರಿ, ಜಗದೀಶ್ ಜಾದವ್, ಹರ್ಷದ್ ಪಠಾಣ್,ಕೃಷ್ಣ ಹುಬ್ಬಳ್ಳಿ, ಸೇೂಮು ಬೈಲವಾಡ, ನಾಗರಾಜ್ ಮುಮ್ಮಿಗಟ್ಟಿ, ಉಮೇಶ್ ಶಿಂಧೆ, ರಹಿಮಾನ್ ನೀಲಿ, ಮುತ್ತು ಬಡಿಗೇರ,ನಾಗರಾಜ ಧುಮ್ಮವಾಡ,ಸಮೀರ್ ಬೆಳಗಾಂವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು