ಕೊಡಗು –
ಕೊಡಗು ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಎರಡು ಕಡೆ ರಸ್ತೆ ಅಪಘಾತಗಳು ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ ಹೌದು ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದರೆ ಮತ್ತೊಂದು ಅಪಘಾತ ದಲ್ಲಿ ಶಿಕ್ಷಕಿ ಯೊಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಹುಲುಸೆ ಹೆಬ್ಬಾಲೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿ ಸಾವನ್ನಪ್ಪಿದ್ದಾರೆ.ಜಿಲ್ಲೆಯ ಮರೂರು ಗ್ರಾಮದ ಅಶ್ವಿನಿ ಚೇತನಾ(45) ಮೃತ ಶಿಕ್ಷಕಿ ಕುಶಾಲನಗರ ಸಮೀಪದ ಅಶ್ವಿನಿ ನೇರುಗಳಲೆ ಪ್ರಾಥಮಿಕ ಶಾಲೆಯ ಶಿಕ್ಷಕಿ ಕರ್ತವ್ಯ ನಿರ್ವಹಿಸುತ್ತಿದ್ದು.ಶಾಲೆ ಮುಗಿಸಿ ಮುಗಿಸಿ ಮನೆಗೆ ತೆರಳುತ್ತಿ ದ್ದಾಗ ಈ ಒಂದು ಅಪಘಾತ ಸಂಭವಿಸಿದೆ
ಪಿಕಪ್ ಮತ್ತು ಸ್ಕೂಟರ್ ನಡೆವೆ ಡಿಕ್ಕಿಯಾಗಿ ಸ್ಥಳದಲ್ಲಿ ಶಿಕ್ಷಕಿ ಮೃತಪಟ್ಟಿದ್ದಾರೆ.ಡಿಕ್ಕಿ ಮಾಡಿದ ಪಿಕಪ್ ವಾಹನ ಚಾಲಕನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಿದ್ದಾರೆ.ಇನ್ನೂ ಅಪಘಾತ ದ ಸುದ್ದಿ ತಿಳಿದ ಶಿಕ್ಷಕರು ಸೇರಿದಂತೆ ಹಲವರು ಆಸ್ಪತ್ರೆಗೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.