ಬೆಂಗಳೂರು –
KSRTC ಬಸ್ ನಲ್ಲಿ ಕರ್ತವ್ಯದ ಮೇಲೆ ಬೆಂಗಳೂ ರಿಗೆ ಬಂದಿದ್ದ ನಿರ್ವಾಹಕರೊಬ್ಬರು ಹೃದಯಾಘಾ ತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿ ನಲ್ಲಿ ನಡೆದಿದೆ. ಬೆಂಗಳೂರಿನ ಕೆಂಪೇ ಗೌಡ ಬಸ್ ನಿಲ್ದಾಣದ ಟರ್ಮಿನಲ್ ವೊಂದ ರಲ್ಲಿ ಈ ಪ್ರಕರಣ ನಡೆದಿದೆ. ಬಾಗಲಕೋಟೆ ಜಿಲ್ಲೆಯ ವಿದ್ಯಾಗಿರಿಯ ರವೀಂದ್ರ ಪಡೆಯನ್ನವರ್ (49) ಮೃತಪಟ್ಟ ಕಂಡಕ್ಟರ್ ಆಗಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಬೀಳಗಿ ಡಿಪೋಗೆ ಸೇರಿದ ಬಸ್ ನಲ್ಲಿ ರವೀಂದ್ರ ನಿರ್ವಾಹಕರಾಗಿದ್ದರು. KA 29, F 1462ರಲ್ಲಿ ಕರ್ತವ್ಯದಲ್ಲಿದ್ದ ಅವರು ಇಂದು ಬೆಳಗ್ಗೆ ಬೆಂಗಳೂರು ತಲುಪಿದ ಬಳಿಕ ಉಪಾಹಾರ ಕ್ಕಾಗಿ ತೆರಳಿದ್ದರು.ಪಾರ್ಕಿಂಗ್ ನಲ್ಲಿ ಬಸ್ ನಿಲ್ಲಿಸಿದ ಬಳಿಕ ತಿಂಡಿ ತಿನ್ನುತ್ತಿದ್ದ ಅವರಿಗೆ ಹೃದಯಾಘಾತ ವಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾ ಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.