ಬೆಂಗಳೂರು –
ರಾಜ್ಯದಲ್ಲಿ ಬೆಳ್ಳಂ ಬೆಳಿಗ್ಗೆ ಐದು ಶಿಕ್ಷಕರು ಸಾವಿಗೀ ಡಾದ ಬೆನ್ನಲ್ಲೆ ಮತ್ತೆ ರಾಜ್ಯದಲ್ಲಿ ನಾಲ್ಕು ಜನ ಶಿಕ್ಷಕ ರು ಮಹಾಮಾರಿ ಕೋವಿಡ್ ಗೆ ಬಲಿಯಾಗಿದ್ದಾರೆ. ಹೌದು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಕರೋನಾ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದ ಕೆಲ ಶಿಕ್ಷಕರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಕಳೆದ ಹದಿನೈದು ದಿನಗಳಿಂದ ರಾಜ್ಯದಲ್ಲಿ ಕೋವಿ ಡ್ ನಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಸಾವಿ ಗೀಡಾದ ವರದಿಯಾಗಿದ್ದು ರಾಜ್ಯದಲ್ಲಿ ಕಳೆದ ಹದಿ ನೈದು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ಸಾವಿಗೀಡಾಗಿದ್ದರು ಇನ್ನೂ ಶಿಕ್ಷಣ ಸಚಿವರು ಇಲಾ ಖೆಯ ಅಧಿಕಾರಿಗಳು ಮಾತ್ರ ಕಣ್ತೇರೆದು ನೋಡು ತ್ತಿಲ್ಲ ಸ್ಪಂದಿಸುತ್ತಿಲ್ಲ.ಹೀಗಾಗಿ ರಾಜ್ಯದಲ್ಲಿ ಮಹಾಮಾ ರಿಯ ನಡುವೆ ನಮ್ಮ ಶಿಕ್ಷಕರು ಭಯದಿಂದ ಬದುಕು ತ್ತಿದ್ದಾರೆ.ಇನ್ನೂ ಇವೆಲ್ಲದರ ನಡುವೆ ಇಂದು ಬೆಳಿಗ್ಗೆ ಐದು ಜನ ಶಿಕ್ಷಕರು ಸಾವಿಗೀಡಾದ ಬೆನ್ನಲ್ಲೇ ಈಗ ಮತ್ತೇ ನಾಲ್ಕು ಜನ ಶಿಕ್ಷಕರು ಕೋವಿಡ್ ನಿಂದಾಗಿ ಮೃತರಾಗಿದ್ದಾರೆ.

ಮಂಜುನಾಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ. ಹಾಸನ ಜಿಲ್ಲೆಯ ಈ ಶಿಕ್ಷಕನಿಗೆ ಕಳೆದ ವಾರ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ಬಿ ಎಮ್ ಅಗಸಿಬಾಗಿಲ ಸರ್ಕಾರಿ ಹಿರಿಯ ಪ್ರಾಥಮಿ ಕ ಶಾಲೆಯ ಬಬಲೇಶ್ವರ ಇವರಿಗೂ ಕೂಡಾ ಸೋಂಕು ಕಾಣಿಸಿಕೊಂಡು ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.

ಸುಭಾಸ್ ಎಸ್ ಪಾಟೀಲ್ ಶಿಕ್ಷಣ ಇಲಾಖೆಯ ಅಧಿ ಕಾರಿಯಾಗಿರುವ ಇವರು ಕೂಡಾ ಕೋವಿಡ್ ನಿಂದಾ ಗಿ ಮೃತರಾಗಿದ್ದಾರೆ.ಇವರಿಗೂ ಕೂಡಾ ಕಳೆದ ವಾರ ಸೋಂಕು ಕಾಣಸಿಕೊಂಡು ನಂತರ ಆಸ್ಪತ್ರೆಗೆ ದಾಖ ಲಾಗಿದ್ದರು.ಚಿಕಿತ್ಸೆ ಫಲಿಸದೇ ಇವರು ಕೂಡಾ ನಿಧನ ರಾಗಿದ್ದಾರೆ.

ಇನ್ನೂ ರಾಜ್ಯದಲ್ಲಿ ಹೀಗೆ ಸರಣಿ ರೂಪದಲ್ಲಿ ಶಿಕ್ಷಕರು ಸಾಯುತ್ತಿದ್ದರೂ ಕೂಡಾ ಶಿಕ್ಷಣ ಇಲಾಖೆ ಮಾತ್ರ ಎಚ್ಚೇತ್ತುಕೊಳ್ಳುತ್ತಿಲ್ಲ ಕೋವಿಡ್ ಕರ್ತವ್ಯಕ್ಕೆ ಶಿಕ್ಷಕ ರನ್ನು ನಿಯೋಜನೆ ಮಾಡಿದ್ದು ಇನ್ನಾದರೂ ಕೈಬಿಡು ವಂತೆ ಆಗ್ರಹವನ್ನು ನಾಡಿನ ಶಿಕ್ಷಕರು ಮಾಡಿದ್ದಾರೆ. ಇನ್ನೂ ನಾಡಿನ ತುಂಬೆಲ್ಲಾ ಮೃತರಾದ ಶಿಕ್ಷಕರಿಗೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ, ಹನಮಂತಪ್ಪ ಬೂದಿಹಾಳ ಎಲ್ ಐ ಲಕ್ಕಮ್ಮನವರ,ಶರಣಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್,ಎಸ್ ಎಫ್ ಪಾಟೀಲ, ರವಿ ಬಂಗೇನವರ,ಅಕ್ಬರಅಲಿ ಸೋಲಾ ಪೂರ, ರಾಜುಸಿಂಗ್ ಹಲವಾಯಿ,ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,.ಸೀಮಾ ನಾಯಕ, ಭಾರತಿ ಭಂಡಾರಿ, ಮಂಜುಳಾ ಬಾಗಲೂರು, ನಾಗವೇಣಿ, ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ, ಲಕ್ಷ್ಮೀದೇ ವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನ ವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಅಶೋಕ ಸಜ್ಜನ ಸೇರಿದಂತೆ ಹಲವರು ಸಂತಾಪವ ನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಘೋಷಣೆ ಮಾಡಿ ಸೂಕ್ತ ಪರಿಹಾರ ನೀಡು ವಂತೆ ಒತ್ತಾಯವನ್ನು ಮಾಡಿದ್ದಾರೆ