ರಾಯಚೂರು: ವಿಷ ಸೇವನೆ ಮಾಡಿ ಪ್ರೇಮಿಗಳಿಬ್ಬರು ಸಾವಿಗಿಡಾದ ಹೃದಯ ವಿದ್ರಾವಕ ಘಟನೆ ರಾಯಚೂರಿನಲ್ಲಿ ನಡೆದಿದೆ.ರಾಯಚೂರಿನ ಸಿರಿವಾರ ತಾಲ್ಲೂಕಿನ ಮಲ್ಲಟ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಇನ್ನೂ ಕಳೆದ ಹಲವಾರು ವರುಷಗಳಿಂದ ಪರಸ್ಪರವಾಗಿ ಪ್ರೀತಿಸುತ್ತಿದ್ದ ಇಬ್ಬರೂ ಪ್ರೇಮಿಗಳಿಬ್ಬರೂ ವಿಷ ಸೇವನೆ ಮಾಡಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಲ್ಲಟ ಗ್ರಾಮದ ಮಹೇಶ(೨೦) ಮತ್ತು ಅಕ್ಷಿತಾ(೧೮) ಇಬ್ಬರೂ ಆತ್ಮಹತ್ಯೆ ಮಾಡಿಕೊಂಡು ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಇವರಿಬ್ಬರು ಅನೇಕ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಇನ್ನೇನು ಇಬ್ಬರು ಪ್ರೇಮಿಗಳು ಜೋಡಿಯಾಗಿ ಮದುವೆಯಾಗಬೇಕು ಎನ್ನುವಷ್ಟರಲ್ಲಿ ಇವರಿಬ್ಬರ ಪ್ರೀತಿಗೆ ಜಾತಿ ಎಂಬ ವಿಷ ಬೀಜ ಅಡ್ಡವಾಗಿತ್ತಂತೆ.ಹೀಗಾಗಿ ಮದುವೆಗೆ ಮನೆಯಲ್ಲಿ ವಿರೋಧ ಮತ್ತು ಜಾತಿ ಅಡ್ಡ ಬಂದ ಹಿನ್ನಲೆಯಲ್ಲಿ ಮನೆಯವರ ಜೊತೆಯಲ್ಲಿ ಕುಳಿತುಕೊಂಡು ಮಾತನಾಡದೇ ಮದುವೆಯನ್ನು ಜೊತೆಯಲ್ಲಿ ಆಗುವ ಭಾಗ್ಯ ಇಲ್ಲವೆಂದುಕೊಂಡು ತಾವೇ ಆತ್ಮಹತ್ಯೆ ನಿರ್ಧಾರ ಕೈಗೊಂಡು ಇಬ್ಬರು ಗ್ರಾಮದ ಹೊರವಲಯದ ಜಮೀನಿನಲ್ಲಿ ವಿಷ ಸೇವನೆ ಮಾಡಿ ಅತ್ಯಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ವಿಷಯ ತಿಳಿದ ಘಟನಾ ಸ್ಥಳಕ್ಕೆ ಸಿರವಾರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು.ಅತ್ತ ಹುಡುಗ ಮತ್ತು ಹುಡುಗಿ ಕಡೆಯವರು ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದರು.ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.