ಚಿಕ್ಕಬಳ್ಳಾಪೂರ –
ನೂತವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರೊಬ್ಬರು ಸಾವಿಗೀಡಾಗಿದ್ದಾರೆ.

ಮೊನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿದ್ದ ಅಭ್ಯರ್ಥಿ ಚಂದ್ರಶೇಖರ್ ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.

ರಮಾಪುರ ಗ್ರಾಮ ಪಂಚಾಯಿತಿ 2 ನೇ ವಾರ್ಡ್ ಗೆ ಸ್ಪರ್ಧೆ ಮಾಡಿ ಗ್ರಾಮ ಪಂಚಾಯತ್ ಗೆ ಸದಸ್ಯರಾಗಿ ಆಯ್ಕೆಯಾಗಿದ್ದರು ಆರ್ ಇ ಚಂದ್ರಶೇಖರ್.

ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲ್ಲೂಕಿನ ರಮಾಪುರದ ನಿವಾಸಿಯಾಗಿದ್ದರು. ಮೊಣಕಾಲು ಸಮಸ್ಯೆಯಿಂದ ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡು ನಂತರ ಆಸ್ಪತ್ರೆ ಸೇರಿದ್ದರು ಚಂದ್ರಶೇಖರ್.