ಮಂಗಳೂರು –
ಕರ್ತವ್ಯನಿರತ ಪೊಲೀಸ್ ಮುಖ್ಯಪೇದೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿ ನಲ್ಲಿ ನಡೆದಿದೆ.36 ವರ್ಷದ ಸಂತೋಷ್ ಮೃತ ಸಿಬ್ಬಂದಿ ಯಾಗಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದ ಸಂತೋಷ್ ಅಪರಾಧ ಪ್ರಕರಣವೊಂದರ ತನಿಖೆ ಹಿನ್ನೆಲೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಹೋಗಿದ್ದರು.ಡ್ಯೂಟಿ ಯಲ್ಲಿದ್ದ ಸಂತೋಷ ಗೆಎದೆನೋವು ಕಾಣಿಸಿಕೊಂಡಿತ್ತು.
ಕೂಡಲೇ ಸಂತೋಷ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯ ಲಾಯಿತಾದರೂ ಬದುಕಲಿಲ್ಲ.ಸೊರಬ ಮೂಲದ ಸಂತೋಷ್ ಮಂಗಳೂರಿನಲ್ಲಿ 12 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು