ಬೆಂಗಳೂರು –
ಯೊಗೇಶಗೌಡ ಕೊಲೆ ಪ್ರಕರಣದಲ್ಲಿ ಬಂಧನ ವಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಜಾಮೀನು ಅರ್ಜಿಯ ವಿಚಾರಣೆಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಮಾರ್ಚ್ 17 ಕ್ಕೆ ಮುಂದೂಡಿದೆ. ಈ ಕುರಿತಂತೆ ಇಂದು ಮತ್ತೆ ಬೆಳಿಗ್ಗೆ ಅರ್ಜಿಯ ವಿಚಾರಣೆಯನ್ನು ಕೈಗೆ ತಗೆದುಕೊಂಡ ಜನಪ್ರತಿನಿಧಿಗಳ ನ್ಯಾಯ ಮೂರ್ತಿಗಳು ಮೊದಲು ಸಿಬಿಐ ಪರವಾಗಿ ವಾದವನ್ನು ಆಲಿಸಿದರು. ಸಿಬಿಐ ಪರವಾಗಿ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಎಸ್ ವಿ ರಾಜು ವಾದವನ್ನು ಮಂಡನೆ ಮಾಡಿದರು.ಇನ್ನೂ ಇತ್ತ ಮಾಜಿ ಸಚಿವ ವಿನಯ ಕುಲಕರ್ಣಿ ಪರವಾಗಿ ಶಶಿಕಿರಣ ಶೆಟ್ಟಿ ಹಾಜರಾಗಿ ದ್ದರು.ಇನ್ನೂ ಈಗಾಗಲೇ ನಿನ್ನೇ ಸಿಬಿಐ ನಿಂದ ವಾದವನ್ನು ಮುಗಿಸಿದ್ದು ಇವತ್ತು ವಿನಯ ಕುಲಕರ್ಣಿ ಪರವಾಗಿ ವಾದ ಮಂಡನೆ ನಡೆಯಿತು ಎರಡು ಕಡೆಗಳಿಂದ ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಾಧೀಶರು ಜಾಮೀನಿನ ತೀರ್ಪನ್ನು ಮಾರ್ಚ್ 17 ಕ್ಕೆ ಮುಂದೂಡಿದರು. ಮಾರ್ಚ್ 17 ಕ್ಕೆ ಜಾಮೀನಿನ ವಿಚಾರ ಕುರಿತಂತೆ ವಿನಯ ಕುಲಕರ್ಣಿ ಭವಿಷ್ಯ ನಿರ್ಧಾರವಾಗಲಿದ್ದು ಏನಾಗಲಿದೆ ಎಂಬ ಕುರಿತಂತೆ ಉತ್ತರ ಸಿಗಲಿದ್ದು ಜನಪ್ರತಿನಿಧಿಗಳ ನ್ಯಾಯಾಲಯ ಮಾಜಿ ಸಚಿವರ ಭವಿಷ್ಯವನ್ನು ನಿರ್ಧಾರ ಮಾಡಲಿದೆ