ಬೆಂಗಳೂರು –
ನಿವೃತ್ತ ನೌಕರರ ಹೋರಾಟಕ್ಕೆ ಬೆಂಬಲ ಘೋಷಣೆ ಯಶಸ್ವಿಯಾಗಿ ನಡೆಯಿತು ಹೋರಾಟ ದೊಂದಿಗೆ ಸಮಾವೇಶ……ಹೌದು
ಕರ್ನಾಟಕ ನಿವೃತ್ತ ನೌಕರರ ವೇದಿಕೆ ವತಿಯಿಂದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ನಿವೃತ್ತ ನೌಕರರ ರಾಜ್ಯ ಮಟ್ಟದ ಬೃಹತ್ ಪ್ರತಿಭಟನಾ ಸಮಾವೇಶ ವನ್ನು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಗಳು ಹಾಗೂ ಕರ್ನಾಟಕ ಮಾಜಿ ಲೋಕಾಯುಕ್ತರು ಆದ ಸಂತೋಷ್ ಹೆಗಡೆ ರವರು ಉದ್ಘಾಟಿಸಿದರು, ನಿಮ್ಮ ಹೋರಾಟ ನ್ಯಾಯಯುತ ಆಗಿದ್ದು ನನ್ನ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕ್ರೀಯಾಶೀಲ ರಾಜ್ಯಾಧ್ಯಕ್ಷರಾದ ಶ್ರೀ ಸಿ.ಎಸ್. ಷಡಕ್ಷರಿ ರವರು ಮತ್ತು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಕ್ರೀಯಾಶೀಲ ರಾಜ್ಯಾಧ್ಯಕ್ಷ ರಾದ ಎಲ್.ಬೈರಪ್ಪ ನವರು ಮಾತನಾಡಿ ಹೋರಾಟಕ್ಕೇ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕರ್ನಾಟಕ ನಿವೃತ್ತ ನೌಕರರ ವೇದಿಕೆ ರಾಜ್ಯ ಪ್ರಧಾನ ಸಂಚಾಲಕರಾದ ಎಂ.ಪಿ.ಎಂ.ಷಣ್ಮುಖಯ್ಯಾ , ಸಂಸ್ಥಾಪಕ ರಾಜ್ಯ ಸಂಚಾಲಕರುಗಳಾದ ಗುರು ತಿಗಡಿ, ಅಶೋಕ ಸಜ್ಜನ ,ಎಸ್.ಜಿ.ಬಿಸಿರೊಟ್ಟಿ , ಶಂಕರಪ್ಪ ರಾಯಚೂರ, ಶಂಕ್ರಯ್ಯ ಸುಬ್ಬಾಪೂರಮಠ,ಗುರು ಪೋಳ,ನಾರಾಯಣಸ್ವಾಮಿ ಸೇರಿದಂತೆ ವಿವಿಧ ಜಿಲ್ಲೆಗಳ ನಿವೃತ್ತ ನೌಕರರ ನಾಯಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ನಿವೃತ್ತ ನೌಕರರ ಬೇಡಿಕೆಗಳು ನ್ಯಾಯ ಸಮ್ಮತ ವಾಗಿದ್ದು ,ಈ ಹೋರಾಟಕ್ಕೆ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ ಯವರು ಮತ್ತು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ರಾಜ್ಯಾಧ್ಯಕ್ಷರು ಮತ್ತು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ರಾಜ್ಯಾಧ್ಯಕ್ಷರು ಬೆಂಬಲ ಷೋಷಿಸಿದರು.ಮತ್ತು ಮಂಬರುವ ದಿನಗಳಲ್ಲಿ ಮುಖ್ಯ ಮಂತ್ರಿಗಳ ದಿನಾಂಕ ಪಡೆದು ಎರಡು ಲಕ್ಷ ನಿವೃತ್ತ ನೌಕರರನ್ನು ಸೇರಿಸಿ ಬೃಹತ್ ಸಮಾವೇಶ ಏರ್ಪಡಿಸಿ, ಏಳನೇಯ ವೇತನ ಪರಿಷ್ಕರಣೆಯಂತೆ ಅರ್ಥಿಕ ಸೌಲಭ್ಯ ಪಡೆಯಲು ಮತ್ತು ನಿವೃತ್ತ ನೌಕರರಿಗೂ ಉಚಿತ ಆರೋಗ್ಯ ಯೋಜನೆ cash less treatment ಜಾರಿಗೆ ತರಲು ಹೋರಾಟ ಮಾಡೋಣ ಎಂದು ತಿಳಿಸಿದರು.
ಗುರು ತಿಗಡಿ ರಾಜ್ಯ ಸಂಚಾಲಕರು
ಕರ್ನಾಟಕ ನಿವೃತ್ತ ನೌಕರರ ವೇದಿಕೆ
ಧಾರವಾಡ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..