ಬೆಂಗಳೂರು –
ಸರಕಾರಿ ನೌಕರರ ದುರ್ನಡತೆ, ಕರ್ತವ್ಯಲೋಪ ಮುಂತಾದ ಆರೋಪಗಳಿಗೆ ಸಂಬಂಧಿಸಿ ನಡೆಯುವ ಇಲಾಖಾ ವಿಚಾರಣೆ ಹಾಗೂ ಶಿಸ್ತು ಕ್ರಮ ವಿಳಂಬವಾಗು ವುದನ್ನು ತಡೆಯಲು ಸರಕಾರ ಇದೇ ಮೊದಲ ಬಾರಿಗೆ ಇಲಾಖಾ ವಿಚಾರಣ ಅದಾಲತ್ ನಡೆಸಲು ನಿರ್ಧರಿಸಿದೆ. ಸರಕಾರಿ ನೌಕರರ ಮೇಲಿನ ಆರೋಪಗಳಿಗೆ ಸಂಬಂಧಿಸಿದ ಇಲಾಖಾ ವಿಚಾರಣೆ ಪ್ರಕ್ರಿಯೆ ವಿಳಂಬ ತಡೆಯಲು ಜಿಲ್ಲಾ ಧಿಕಾರಿಗಳು,ಜಿಪಂ ಸಿಇಒ ಹಾಗೂ ಇಲಾಖಾ ಮುಖ್ಯಸ್ಥರು ಪ್ರತಿ ತಿಂಗಳು ಒಂದು ದಿನ ಇಲಾಖಾ ವಿಚಾರಣ ಅದಾಲತ್ ನಡೆಸಲು ಸಿಬಂದಿ ಮತ್ತು ಆಡಳಿತ ಸುಧಾರಣ ಇಲಾಖೆ ಯ(ಸೇವಾ ನಿಯಮಾವಳಿ)ಅಧೀನ ಕಾರ್ಯದರ್ಶಿ ನಾಗರತ್ನಾ ವಿ. ಪಾಟೀಲ್ ಸುತ್ತೋಲೆ ಮೂಲಕ ಎಲ್ಲ ಜಿಲ್ಲಾ ಮುಖ್ಯಸ್ಥರಿಗೆ ನಿರ್ದೇಶಿಸಿದ್ದಾರೆ.
ಸರಕಾರಿ ನೌಕರರ ಮೇಲಿನ ಆಪಾದಿತ ದುರ್ನಡತೆಗೆ ಸಂಬಂಧಿಸಿದ ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 11ರಡಿ ವಿಚಾರಣೆ ನಡೆಸಿ ಶಿಸ್ತು ಕ್ರಮ ವಹಿಸಲು ಕಾಲಮಿತಿ ನಿಗದಿಪಡಿಸಲಾಗಿದೆ.ಆದರೂ ಇಲಾಖಾ ವಿಚಾರಣೆ ಪ್ರಕ್ರಿಯೆ ವಿಳಂಬವಾಗುತ್ತಿರುವುದನ್ನು ಗಮನಿಸಿದ ಸರಕಾರ ಇದರಿಂದ ನೌಕರರ ಕರ್ತವ್ಯ ನಿರ್ವಹ ಣೆಗೆ ತೊಡಕಾಗಬಾರದೆಂದು ಅದಾಲತ್ ಮೂಲಕ ವಿಚಾ ರಣೆ ಕ್ಷಿಪ್ರಗೊಳಿಸಲು ತೀರ್ಮಾನಿಸಿದೆ.
ಕಾಲಮಿತಿಯಲ್ಲಿ ವಿಚಾರಣೆ ನಡೆಯಲಿದ್ದು ವಿಚಾರಣ ಅದಾಲತ್’ನಲ್ಲಿ ಇಲಾಖೆಗಳಲ್ಲಿ ನಡೆಯುತ್ತಿರುವ ವಿಚಾ ರಣೆ ವಿಳಂಬವಾಗುತ್ತಿದೆಯೇ,ಹೌದಾಗಿದ್ದಲ್ಲಿ ಕಾರಣಗ ಳೇನು ಎಂಬುದನ್ನು ಪರಿಶೀಲಿಸಬೇಕು.ಸಾಮಾನ್ಯವಾಗಿ ಮಂಡನಾಧಿಕಾರಿಗಳು ಸರಕಾರಿ ನೌಕರರೇ ಆಗಿರುವುದ ರಿಂದ ನಿಗದಿತ ಮಾದರಿಯಲ್ಲಿ ವಿವರ ಪಡೆದು ವಿಳಂಬ ಸರಿ ಪಡಿಸಲು ಸೂಚಿಸಬೇಕು.ಅಗತ್ಯ ಬಿದ್ದಲ್ಲಿ ವಿಚಾರಣಾ ಧಿಕಾರಿ,ಮಂಡನಾಧಿಕಾರಿ,ಆಪಾದಿತ ಹಾಗೂ ಸರಕಾರಿ ನೌಕರರಿಗೆ ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿ ಸಲು ನಿರ್ದೇಶಿಸಲು ತಿಳಿಸಲಾಗಿದೆ.