ಕಲಬುರಗಿ –
ಲೋಕಾಯುಕ್ತ ಬಲೆಗೆ ಬಿದ್ದ ಉಪನಿರ್ದೇಶಕ ಪ್ರವೀಣ ಜಾಧವ್ – ಕೈ ತುಂಬಾ ಸಂಬಳವಿದ್ದರೂ ಒಂದೂವರೆ ಲಕ್ಷ ಲಂಚ ತಗೆದುಕೊಳ್ಳುವಾಗ ಟ್ರ್ಯಾಪ್ ಹೌದು
ಜಮೀನು ಪೋಡಿ ಮಾಡಿಕೊಡಲು ₹1.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಹಣವನ್ನು ಪಡೆಯುವಾಗ ಭೂದಾಖಲೆಗಳ ಉಪನಿರ್ದೇಶಕ ಸೇರಿ ಇಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕಲಬುರಗಿ ಯಲ್ಲಿ ನಡಿದಿದ್ದು ಬಂಧನ ಮಾಡಿದ್ದು ತನಿಖೆ ಯನ್ನು ಮಾಡ್ತಾ ಇದ್ದಾರೆ.
ನಗರದ ಬ್ರಹ್ಮಪುರದಲ್ಲಿನ ಭೂಮಿಯನ್ನು ಪೋಡಿ ಮಾಡಿಕೊಡಲು ₹3.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.ಮುಂಗಡವಾಗಿ ₹ 1.5 ಲಕ್ಷ ಲಂಚ ಪಡೆಯುತ್ತಿದ್ದಾಗ ದಾಳಿಯನ್ನು ಮಾಡಿದ ಲೋಕಾಯುಕ್ತ ಪೊಲೀಸರು ಜಿಲ್ಲಾ ಭೂದಾಖಲೆ ಗಳ ಇಲಾಖೆ ಉಪನಿರ್ದೇಶಕ (ಡಿಡಿಎಲ್‌ಆರ್) ಪ್ರವೀಣ ಜಾಧವ್ ಹಾಗೂ ಸರ್ವೇಯರ್ ಶರಣಗೌಡ ಅವರನ್ನು ಬಂಧಿಸಿದ್ದಾರೆ.
ಪ್ರವೀಣ ಜಾಧವ್ ಅವರು ಕೆಳಹಂತದ ಅಧಿಕಾರಿ ಗಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರಲ್ಲದೇ ಪ್ರತಿ ಕಡತಕ್ಕೆ ಸಹಿ ಹಾಕಲು ಇಂತಿಷ್ಟು ಹಣ ನೀಡಬೇಕು ಎಂದು ತಾಕೀತು ಮಾಡಿದ್ದರುವ ಆರೋಪವು ಕೂಡಾ ತನಿಖೆಯಿಂದ ಕೇಳಿ ಬಂದಿದೆ.ನಗರದಲ್ಲಿನ ಬ್ರಹ್ಮಪೂರ ಸರ್ವೆ ನಂ 89/4ನ 12.7 ಎಕರೆ ಭೂಮಿಯ ಪೈಕಿ 25 ಗುಂಟೆ ಜಮೀನನ್ನು ಪೋಡಿ ಮಾಡಲು ₹ 3.5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.
₹ 1.5 ಲಕ್ಷ ಪಡೆಯುತ್ತಿದ್ದಾಗ ಲೋಕಾಯುಕ್ತ ಎಸ್ಪಿ ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ದಾಳಿ ನಡೆಸಿದ ಡಿವೈಎಸ್‌ಪಿ ಗೀತಾ ಬೇನಾಳ, ಪಿಐ ರಾಜಶೇಖರ ಹಳಗೋದಿ, ಪ್ರದೀಪ್ ಅವರು ಇಬ್ಬರನ್ನೂ ಬಂಧಿಸಿದರು.ಡಿಡಿಎಲ್‌ಆರ್ ಪ್ರವೀಣ ಜಾಧವ್ ಹಾಗೂ ಶರಣಗೌಡ ಕೆಳ ಹಂತದ ಸಿಬ್ಬಂದಿಗೆ ಕಿರುಕುಳ ನೀಡುತ್ತಿದ್ದರು.
ಅಮಾನತು ಮಾಡುವುದಾಗಿ ಹೆದರಿಸುತ್ತಿದ್ದರು ಎಂದು ಭೂಮಾಪಕ ರೇವಣಸಿದ್ದ ಮೂಲಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದು ಸಧ್ಯ ಇಬ್ಬರನ್ನು ವಶಕ್ಕೆ ತಗೆದುಕೊಂಡಿರುವ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಕಲಬುರಗಿ…..