ಕೋಲಾರ –
ಬೇಸಿಗೆ ರಜೆ ಅವಧಿ ಮುಗಿಸಿ ಶಾಲೆಯ ಪ್ರಾರಂಭದ ದಿನ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು.ತಳಿರು ತೋರಣದೊಂದಿಗೆ ಶಾಲೆಯನ್ನು ಸಿಂಗರಿಸಲಾಗಿತ್ತು.ಶಾಲಾ ಆವರಣ ಸ್ವಚ್ಚಗೊ ಳಿಸಲಾಗಿತ್ತು ಇದನ್ನು ಕಂಡ ವಿದ್ಯಾರ್ಥಿ ಮೊಗದಲ್ಲಿ ಸಂತಸ ಮನೆ ಮಾಡಿತ್ತು.ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮ ಟ್ಟದ ಶಿಕ್ಷಣ ದೊರೆಯುತ್ತಿದ್ದು ಪೋಷಕರು ಸರ್ಕಾರಿ ಶಾಲೆ ಗಳಿಗೆ ತಮ್ಮ ಮಕ್ಕಳನ್ನು ಸೇರಿಸಲು ಕೋಲಾರ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಸಂಜೀವಪ್ಪ ಕರೆ ನೀಡಿದರು.
ಕೋಲಾರ ತಾಲೂಕು ವೇಮಗಲ್ ಹೋಬಳಿಯ ಕ್ಯಾಲಾ ನೂರಿನ ಕರ್ನಾಟಕ ಪಬ್ಲಿಕ್ ಶಾಲೆಗೆ ಶಾಲೆಗೆ ಅನಿರೀಕ್ಷಿತ ಭೇಟಿ ನೀಡಿ ಶಾಲಾ ಪ್ರಾರಂಬೊತ್ಸವದ ಪರಿಶೀಲನೆ ನಡೆಸಿ ಮಾತನಾಡಿದರು.ವಿದ್ಯಾರ್ಥಿಗಳು ಕಲಿಕಾ ಚೇತರಿಕೆ, ಮಳೆ ಬಿಲ್ಲು ಕಾರ್ಯಕ್ರಮದ ಸದುಪಯೋಗ ಪಡೆಯುವಂತೆ ತಿಳಿಸಿದ ಅವರು ಶಾಲಾ ಸ್ವಚ್ಛತೆ,ಶಾಲಾ ಪರಿಸರ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಗೆ ಆಗಮಿಸಿದ ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ೨೦೨೨-೨೩ನೇ ಸಾಲಿಗೆ ಸ್ವಾಗತ ಕೋರಿದರು.
ಶಾಲಾ ಕೊಠಡಿ ನಿರ್ಮಿಸುವ ಬಗ್ಗೆ ಎಸ್.ಡಿ.ಎಂ.ಸಿ. ಅಧ್ಯಕ್ಷರು,ಉಪಾಧ್ಯಕ್ಷರು,ಸದಸ್ಯರು ಗಮನ ಸೆಳೆದರು ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕ್ರಮ ವಹಿಸುವಂತೆ ಸೂಚನೆ ನೀಡಿದರು ಹಾಗೂ ಶಾಲಾ ಮುಖ್ಯ ಶಿಕ್ಷಕರಾದ ಓ. ಮಲ್ಲಿಕಾರ್ಜುನ,ಸಂಜೀವಪ್ಪ ರವರಿಗೆ ಅಭಿನಂದಿಸಿ ಸನ್ಮಾನಿಸಿದರು.ಇದೇ ಸಂಧರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರು,ಉಪಾಧ್ಯಕ್ಷರು,ಹಾಗೂ ಸದಸ್ಯರು,ಶಾಲೆಯ ಶಿಕ್ಷಕರಾದ ರಾಮಲಿಂಗಪ್ಪ,ಜ್ಯೋತಿ, ಧನ್ಯಕುಮಾರ್,ರಾಮಾಂಜಪ್ಪ,ಶಿವಪ್ಪ,ಸೌಮ್ಯ, ಸಾಯೀ ದುನ್ನೀಸ,ರಾಜೇಶ್,ಭಾಗ್ಯಶ್ರೀ,ರಾಧಿಕಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.