ಧಾರವಾಡ –
ಡಿಸೆಂಬರ್ 21 ರಿಂದ ಆರಂಭವಾಗಲಿದೆ ಧಣಿಯ ಮತ್ತೊಂದು ಉಳವಿ ಪಾದಯಾತ್ರೆ – ಗರಗ ದಿಂದ ಹೊರಡಲಿದೆ ಉಳವಿಯತ್ತ ಮಾಜಿ ಶಾಸಕ ಅಮೃತ ದೇಸಾಯಿ 7ನೇ ವರ್ಷದ ಪಾದಯಾತ್ರೆ
ಗರಗ ಮಡಿವಾಳೇಶ್ವರ ಇಚ್ಚೇಯಂತೆ ಪ್ರತಿವರ್ಷ ಮಾಜಿ ಶಾಸಕ ಅಮೃತ ದೇಸಾಯಿ ಮಾಡಿ ಕೊಂಡು ಬರುತ್ತಿರುವ ಉಳವಿ ಪಾದಯಾತ್ರೆ ಕಾರ್ಯಕ್ರಮ ಮುಂದುವರೆದಿದೆ.ಹೌದು ಕಳೆದ 6 ವರ್ಷಗಳಿಂದ ಯಶಶ್ವಿಯಾಗಿ ನಡೆದುಕೊಂಡು ಬರುತ್ತಿರುವ ಈ ಒಂದು ಪಾದಯಾತ್ರೆ ಈ ಒಂದು ಕಾರ್ಯಕ್ರಮವು 7ನೇ ವರ್ಷಕ್ಕೆ ಕಾಲಿಟ್ಟಿದ್ದು ಡಿಸೆಂಬರ್ 21 ರಿಂದ 7ನೇ ವರ್ಷದ ಪಾದ ಯಾತ್ರೆ ಆರಂಭವಾಗಲಿದೆ.
ಹೌದು ಮಾಜಿ ಶಾಸಕ ಅಮೃತ ದೇಸಾಯಿ ಯವರ ಮತ್ತೊಂದು ಉಳವಿ ಪಾದಯಾತ್ರೆಗೆ ಗರಗ ದಿಂದ ಆರಂಭವಾಗಲಿದೆ. ಡಿಸೆಂಬರ್ 21 ರಿಂದ ಈ ಒಂದು ಯಾತ್ರೆ ನಡೆಯಲಿದ್ದು 7ನೇ ವರ್ಷದ ಉಳವಿ ಪಾದಯಾತ್ರೆ ಗರಗ ಮಡಿವಾ ಳೇಶ್ವರ ಮಠದಿಂದ ಆರಂಭವಾಗಲಿದ್ದು ಧಣಿ ಯೊಂದಿಗೆ ಪ್ರತಿ ವರ್ಷ ಅವರೊಂದಿಗೆ ಹೆಜ್ಜೆ ಹಾಕುತ್ತಿರುವ ಆಪ್ತರು ಕುಟುಂಬದ ಸದಸ್ಯರು ಸೇರಿದಂತೆ ಸಾರ್ವಜನಿಕರು ಸಿದ್ದರಾಗುತ್ತಿದ್ದಾರೆ
ಗರಗದ ಜಗದ್ಗುರು ಮಡಿವಾಳೇಶ್ವರ ಕಲ್ಮಠದ ಉತ್ತರಾಧಿಕಾರಿಗಳಾದ ಪರಮಪೂಜ್ಯ ಪ್ರಶಾಂತ ದೇವರು ಈ ಒಂದು ಪಾದಯಾತ್ರೆಗೆ ಈ ಬಾರಿ ಚಾಲನೆಯನ್ನು ನೀಡಲಿದ್ದಾರೆ.ಇವರ ನೇತೃತ್ವದಲ್ಲಿ 7 ನೇ ವರ್ಷದ ಉಳವಿ ಪಾದಯಾತ್ರೆ ಗರಗದ ಗುರು ಮಡಿವಾಳೇಶ್ವರ ಕಲ್ಮಠದಿಂದ ಆರಂಭ ಗೊಂಡು ನಾಲ್ಕು ದಿನಗಳ ಕಾಲ ಪಾದಯಾತ್ರೆಯ ಮೂಲಕ ಉಳವಿಯ ಚನ್ನಬಸವೆಶ್ವರ ಸನ್ನಿದಿ ಯವರೆಗೆ ಸಾಗಲಿದೆ.
ಮಾಜಿ ಶಾಸಕ ಅಮೃತ ದೇಸಾಯಿ ಅವರ ಪತ್ನಿ ಪ್ರೀಯಾ ದೇಸಾಯಿ ಮತ್ತು ಕುಟುಂಬದ ಸದಸ್ಯ ರೊಂದಿಗೆ ಆಪ್ತರು ಪಕ್ಷಧ ಕಾರ್ಯಕರ್ತರು ಮುಖಂಡರು ಸಾರ್ವಜನಿಕರು ಕೂಡಾ ಅಮೃತ ದೇಸಾಯಿ ಯವರೊಂದಿಗೆ ಪಾದಯಾತ್ರೆಯಲ್ಲಿ ಹೆಜ್ಜೆಯನ್ನು ಹಾಕಲಿದ್ದಾರೆ.
ಅನಿಲಕುಮಾರ ಉಳವನ್ನವರ ಸುದ್ದಿ ಸಂತೆ ನ್ಯೂಸ್ ಗರಗ……