ಗಾಂಜಾ ಪೆಡ್ಲರ್ ಗೆ ಹೆಡೆಮುರಿ ಕಟ್ಟಿದ ಧಾರವಾಡ ಉಪನಗರ ಪೊಲೀಸರು – ಮೊಬೈಲ್ ನಲ್ಲಿಯೇ ಧಾರವಾಡ ದಲ್ಲಿ ಗಾಂಜಾ ಗುಂಗು ಹಿಡಿಸಿದನಿಗೆ ಜೈಲು ದಾರಿ ತೋರಿಸಿದ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಆಂಡ್ ಟೀಮ್…..

Suddi Sante Desk
ಗಾಂಜಾ ಪೆಡ್ಲರ್ ಗೆ ಹೆಡೆಮುರಿ ಕಟ್ಟಿದ ಧಾರವಾಡ ಉಪನಗರ ಪೊಲೀಸರು – ಮೊಬೈಲ್ ನಲ್ಲಿಯೇ ಧಾರವಾಡ ದಲ್ಲಿ ಗಾಂಜಾ ಗುಂಗು ಹಿಡಿಸಿದನಿಗೆ ಜೈಲು ದಾರಿ ತೋರಿಸಿದ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಆಂಡ್ ಟೀಮ್…..

ಧಾರವಾಡ

ಗಾಂಜಾ ಪೆಡ್ಲರ್ ಗೆ ಹೆಡೆಮುರಿ ಕಟ್ಟಿದ ಧಾರವಾಡ ಉಪನಗರ ಪೊಲೀಸರು – ಮೊಬೈಲ್ ನಲ್ಲಿಯೇ ಧಾರವಾಡ ದಲ್ಲಿ ಗಾಂಜಾ ಗುಂಗು ಹಿಡಿಸಿದನಿಗೆ ಜೈಲು ದಾರಿ ತೋರಿಸಿದ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಆಂಡ್ ಟೀಮ್

ಧಾರವಾಡ ಉಪನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.ಹೌದು ಬೇರೆ ಕಡೆಗಳಿಂದ ಗಾಂಜಾವನ್ನು ತಗೆದುಕೊಂಡು ಬಂದು ನಗರದಲ್ಲಿ ಸಪ್ಲೈ ಮಾಡುತ್ತಿದ್ದ ಪೆಡ್ಲರ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ. ಖಚಿತ ವಾದ ಮಾಹಿತಿಯನ್ನು ಪಡೆದುಕೊಂಡು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಎಸಿಪಿ ಪ್ರಶಾಂತ್ ಸಿದ್ದನಗೌಡರ ಮಾರ್ಗದರ್ಶನ ದಲ್ಲಿ ಕಾರ್ಯಾಚರಣೆಗಿಳಿದ ಉಪನಗರ ಪೊಲೀಸರು

ಗಾಂಜಾ ಮಾರಾಟ ಜಾಲವನ್ನು ಪತ್ತೆ ಮಾಡಿದ್ದಾರೆ ಬೇರೆ ಕಡೆಗಳಿಂದ ಸದ್ದಿಲ್ಲದೇ ಗಾಂಜಾವನ್ನು ತಗೆದುಕೊಂಡು ಧಾರವಾಡದಲ್ಲಿ ಮೊಬೈಲ್‌ ಲಿಂಕ್ ಮೂಲಕ ಮಾರಾಟ ಮಾಡುತ್ತಿದ್ದ ಸಾಗರ ಎಂಬ ಯುವಕ, ಸಣ್ಣ ವಯಸ್ಸಿನಲ್ಲಿ ಮೊಬೈಲ್ ನಲ್ಲಿಯೇ ಲಿಂಕ್ ಮೂಲಕ ಮಾರಾಟ ಮಾಡು ತ್ತಿದ್ದ ಈ ಒಂದು ಮಾಹಿತಿಯನ್ನು ಪಡೆದುಕೊಂಡು ಭರ್ಜರಿ ಕಾರ್ಯಾಚರಣೆ ಮಾಡಿ ಬಂಧನ ಮಾಡಿ ದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಗೆ,ಇಂಜನಿಯರ್ ಗಳಿಗೆ ಸೇರಿದಂತೆ ಬೇರೆ ಬೇರೆ ಯವರಿಗೆ ಸಪ್ಲೈ ಮಾಡು ತ್ತಿದ್ದನಂತೆ ಈ ಸಾಗರ್,ಬಂಧಿತನಿಂದ 840 ಗ್ರಾಂ ಗಾಂಜಾವನ್ನು ಹಾಗೇ ಪ್ಯಾಕಿಂಗ್ ಪೇಪರ್ ಇದರೊಂದಿಗೆ ಪ್ಯಾಕೇಟ್ ಗಳನ್ನು ತೂಕದ ಯಂತ್ರಗಳನ್ನು ಉಪನಗರ ಪೊಲೀಸರು ವಶಪ ಡಿಸಿಕೊಂಡಿದ್ದಾರೆ.ಆರೋಪಿ ಸಾಗರ ನಗರದ ಮದಾರಮಡ್ಡಿಯ ನಿವಾಸಿಯಾಗಿದ್ದು

22ನೇ ವಯಸ್ಸಿನಲ್ಲಿಯೇ ಈ ಒಂದು ದಂಧೆಯಲ್ಲಿ ತೊಡಗಿದ್ದವನಿಗೆ ಉಪನಗರ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಈ ಒಂದು ಕಾರ್ಯಾಚರಣೆಯಲ್ಲಿ ಇನಸ್ಪೇಕ್ಟರ್ ದಯಾನಂದ ಶೇಗುಣಸಿ,ಪಿಎಸ್ಐ ಸಚಿನ ದಾಸರಡ್ಡಿ,ಲಕ್ಷ್ಮೀ ಕೋಡಬಾಳ, ಸಿಬ್ಬಂದಿಗ ಳಾದ ಪ್ರದೀಪ ಕುಂದಗೋಳ,ಮೆಹಬೂಬ ನದಾಫ್ ,ರವಿ ದೊಡಮನಿ,ಶಿವು ದೊಡಮನಿ, ಭರತ್ ದೇವಪ್ಪಗೊಳ,ಮಂಜು ಅಸುಂಡಿ,ಅದೃಶ್ಯ ಕಲಭಾವಿ, ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇತ್ತೀಚಿಗಷ್ಟೇ ನಗರಕ್ಕೆ ಗೃಹ ಸಚಿವರು ಭೇಟಿ ನೀಡಿದ ಬೆನ್ನಲ್ಲೇ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರ ಖಡಕ್ ಸೂಚನೆಯಿಂದಾಗಿ ಅವಳಿ ನಗರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಗಾಂಜಾ ಮುಕ್ತ ಮಾಡಲು ಕರೆ ನೀಡಿದ್ದಾರೆ ಹೀಗಾಗಿ ಪೊಲೀಸರು ಗಾಂಜಾ ಪ್ರಕರಣಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಪಣ ತೋಟ್ಟಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.