ಧಾರವಾಡ –
ಧಾರವಾಡ ತಾಲ್ಲೂಕಿನ ಮೂರು ದೇವಸ್ಥಾನಗಳಿಗೆ ವಿಶೇಷವಾದ ಅನುದಾನವನ್ನು ರಾಜ್ಯ ಸರ್ಕಾರ ದಿಂದ ತಗೆದುಕೊಂಡು ಬಂದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಅಮೃತ ದೇಸಾಯಿ ಅವರಿಗೆ ಧಾರವಾಡ ಗ್ರಾಮೀಣ 71 ಕ್ಷೇತ್ರದ ಅಭಿಮಾನಿಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೆಎಮ್ ಎಫ್ ನಿರ್ದೇಶರಾದ ಶಂಕರ ಮುಗದ, ಗ್ರಾಮ ಪಂಚಾಯತ ಸದಸ್ಯರಾದ ಮಡಿವಾಳಪ್ಪ ಶಿಂಧೋಗಿ ಮತ್ತು ಗಂಗನಗೌಡ ಬ ಪಾಟೀಲ ಇವರಿಂದ ಸನ್ಮಾನಿಸಿ ಗೌರವಿಸಲಾಯಿತು.
ಬೆಂಗಳೂರಿನ ಶಾಸಕರ ಭವನದಲ್ಲಿ ಶಾಸಕ ಅಮೃತ ದೇಸಾಯಿ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಧಾರವಾಡ ಗ್ರಾಮೀಣ 71 ನೇ ಕ್ಷೇತ್ರದ ಅಭಿಮಾನಿಗಳು ಜನತೆಯ ಪರವಾಗಿ ಇವರು ತಾಲ್ಲೂಕಿನ ಐತಿಹಾಸಿಕ ಮೂರು ದೇವಸ್ಥಾನಗಳಾದ ಗರಗ ಮಡಿವಾಳೇಶ್ವರ ಮಠ,ಉಪ್ಪಿನ ಬೆಟಗೇರಿ ವೀರುಪಾಕ್ಷೇಶ್ವರ ಮೂರು ಸಾವಿರ ವಿರಕ್ತಮಠ, ಮತ್ತು ಅಮ್ಮಿನಬಾವಿಯ ಶಾಂತೇಶ್ವರ ಪಂಚಗೃಹ ಹಿರೇಮಠ ಈ ಮೂರು ದೇವಸ್ಥಾನಗಳಿಗೆ ಶಾಸಕ ಅಮೃತ ದೇಸಾಯಿ ಅವರ ಪ್ರಯತ್ನದಿಂದಾಗಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಅವರಿಂದ ಬಿಡುಗಡೆ
ಮಾಡಿಕೊಂಡು ಬಂದಿದ್ದು ಈ ಒಂದು ಹಿನ್ನಲೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಕೆಎಮ್ ಎಫ್ ನಿರ್ದೇಶಕರಾದ ಶಂಕರ ಮುಗದ, ಗ್ರಾಮ ಪಂಚಾಯತ ಸದಸ್ಯ ಮಡಿವಾಳಪ್ಪ ಶಿಂಧೋಗಿ,ಗಂಗನಗೌಡ ಬ ಪಾಟೀಲ,ರೋಹಿತ ಐನಾಪೂರ,ಮಂಜು ಹೊಂಗಲ,ಸೇರಿದಂತೆ ಹಲವರು ಉಪಸ್ಥಿತರಿದ್ದರು.