ಬೆಂಗಳೂರು –
ಧಾರವಾಡದ ಹೊರವಲಯದ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದ ಕುರಿತು ಕಿಡಗೇಡಿಗಳು ತಪ್ಪು ಸಂದೇಶವನ್ನು ಹರಡುತ್ತಿದ್ದಾರೆ. ಹಳೆಯ ವಿದ್ಯಾರ್ಥಿಗಳು ವಾರ್ಷಿಕ ಪ್ರವಾಸಕ್ಕೆಂದು ಗೋವಾಗೆ ತೆರಳಿದ್ದ ವೇಳೆ ಧಾರವಾಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಮೃತಪಟ್ಟಿದ್ದರು. ಇದೀಗ ಅಪಘಾತ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶವೊಂದು ಹರಿದಾಡುತ್ತಿದೆ.

ಹೌದು. ಫೇಸ್ಬುಕ್ ಬಳಕೆದಾರನೊಬ್ಬ ಅಪಘಾತದ ಫೋಟೋಗಳನ್ನು ಶೇರ್ ಮಾಡಿ, ಮೃತರ ಆತ್ಮಕ್ಕೆ ಶಾಂತಿ (RIP) ಕೋರಿದ್ದಾನೆ. 17 ಮಹಿಳಾ ವೈದ್ಯರು ದಾವಣಗೆರೆಯಿಂದ ಗೋವಾ ಪ್ರವಾಸಕ್ಕೆ ತೆರಳಿದ್ದ ಮಿನಿಬಸ್ ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಮರಳು ತುಂಬಿದ ಟಿಪ್ಪರ್ಗೆ ಡಿಕ್ಕಿ ಹೊಡೆದು ಎಲ್ಲರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಕರ್ನಾಟಕದ ದಾವಣಗೆರೆ ಜೆಜೆಎಂಎಂ ಕಾಲೇಜಿನ ಸ್ತ್ರೀರೋಗತಜ್ಞ ಪ್ರಾಧ್ಯಾಪಕರು. ಧಾರವಾಡದಲ್ಲಿ ಶುಕ್ರವಾರ ಬೆಳಗ್ಗೆ 7.30ಕ್ಕೆ ಅಪಘಾತ ಸಂಭವಿಸಿದೆ ಎಂದು ಬರೆದು ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.

ರಸ್ತೆ ಅಪಘಾತದಲ್ಲಿ 17 ಮಂದಿ ಮಹಿಳಾ ವೈದ್ಯರು ಮೃತಪಟ್ಟಿದ್ದಾರೆ ಎಂದು ವೈರಲ್ ಮಾಡಿರುವ ಪೋಸ್ಟ್ ಸುಳ್ಳೆಂಬುದು ಫ್ಯಾಕ್ಟ್ಚೆಕ್ನಿಂದ ಬಯಲಾಗಿದೆ.

ಆದರೆ, ಫೇಸ್ಬುಕ್ ಬಳಕೆದಾರ ಹೇಳಿರುವುದು ಸುಳ್ಳು ಎಂಬುದು ನ್ಯೂಸ್ಮೀಟರ್ ವೆಬ್ಸೈಟ್ ನಡೆಸಿದ ಫ್ಯಾಕ್ಟ್ಚೆಕ್ನಲ್ಲಿ ಬಹಿರಂಗವಾಗಿದೆ.