ಧಾರವಾಡ –
ಬಾಲಕಿಯರ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ವಿಶೇಷ ಸಾಧನೆ ಮಾಡಿದ ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವಸತಿ ಶಾಲೆಯ ಕ್ರೀಡಾಪಟುಗಳು ಹೌದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯ ವಿದ್ಯಾರ್ಥಿಗಳು ವಿಶೇಷ ಸಾಧನೆ ಯನ್ನು ಮಾಡಿ ದ್ದಾರೆ.
ರಾಷ್ಟ್ರ ಮಟ್ಟದ ಶಾಲಾ ಬಾಲಕರ ಹಾಗೂ ಬಾಲಕಿಯರ ಕುಸ್ತಿ ಪಂದ್ಯವಳಿ ಪ್ರಶಸ್ತಿ ವಿಜೇತ ರಾಗಿದ್ದಾರೆ. ಮಧ್ಯಪ್ರದೇಶ ರಾಜ್ಯದ ವಿದೇಶಾ ಜಿಲ್ಲೆಯ ಪಟ್ಟಣದಲ್ಲಿ ಸೆಪ್ಟೆಂಬರ್ 28, 2023 ರಿಂದ ಅಕ್ಟೋಬರ್ 03, 2023 ರವರೆಗೆ ನಡೆದ ರಾಷ್ಟ್ರಮಟ್ಟದ ಶಾಲಾ ಬಾಲಕರ ಹಾಗೂ ಬಾಲಕಿ ಯರ ಕುಸ್ತಿ ಚಾಂಪಿಯನಷಿಪ್‍ದಲ್ಲಿ
14 ರಿಂದ 17 ವಯೋಮೀತಿ ಒಳಗಿನ ವಿಭಾಗ ದಲ್ಲಿ ಧಾರವಾಡ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧೀನದ ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳು ಕುಸ್ತಿ ಪಂದ್ಯಾವಳಿ ಯಲ್ಲಿ ಭಾಗವಹಿಸಿ, ಪ್ರಶಸ್ತಿ ವಿಜೇತರಾಗಿದ್ದಾರೆ.
33 ಕೆ.ಜಿಯಲ್ಲಿ ಕುಮಾರಿ ಪ್ರಭಾವತಿ ಲಂಗೋಟಿ, 39 ಕೆ.ಜಿಯಲ್ಲಿ ಜಾನ್ವಿ ಕೆ. ಇವರು ದ್ವಿತೀಯ ಸ್ಥಾನ ಹಾಗೂ 42 ಕೆ.ಜಿಯಲ್ಲಿ ಪುಷ್ಪ ನಾಯಕ ತೃತೀಯ ಸ್ಥಾನ ಪಡೆದಿದ್ದಾರೆ. ಮತ್ತು ಬಜರಂಗಿ ದೊಡ್ಡ ಮನಿ,ಯಂಕಪ್ಪ ಕೂಡಿಗಿ ಈ ಇಬ್ಬರು ಕುಸ್ತಿಪಟು ಗಳು ಭಾಗವಹಿಸಿದ್ದರು.
ಕ್ರೀಡಾ ಇಲಾಖೆಯ ಕುಸ್ತಿ ತರಬೇತುದಾರ ಶಿವಪ್ಪ ಎಸ್ ಪಾಟೀಲ್ ತರಬೇತಿ ನೀಡಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..