ಬೆಂಗಳೂರು –
ಬಿಗ್ ಬಾಸ್ ಸೀಸನ್ 8 ಕಾರ್ಯಕ್ರಮ ಆರಂಭವಾಗಿದೆ.ಕೊನೆಗೂ ಧಾರವಾಡದ ಯುವ ಗಾಯಕ ವಿಶ್ವನಾಥ್ ಹಾವೇರಿ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದಾರೆ.ಇಂದಿನಿಂದ ರಿಯಾಲಿಟಿ ಶೋ ಆರಂಭವಾಗಿದ್ದು ಮೊದಲ ಸ್ಫರ್ಧಿಯಾಗಿ ಧನುಶ್ರೀ ಮನೆಯೊಳಗೆ ಕಾಲಿಟ್ಟರು. ಇನ್ನೂ ಎರಡನೇಯ ಸ್ಪರ್ಧಿಯಾಗಿ ಶುಭಪೂಂಜಾ ಹಾಗೂ ಮೂರನೇ ಸ್ಪರ್ಧಿಯಾಗಿ ಹಿರಿಯ ನಟ ಅಶ್ವತ್ ಅವರು ಮನೆಯೊಳಗೆ ಕಾಲಿಟ್ಟರು.ಇನ್ನೂ ನಾಲ್ಕನೆಯ ಸ್ಪರ್ಧೆ ಯಾಗಿ ಧಾರವಾಡದ ಯುವ ಗಾಯಕ ವಿಶ್ವನಾಥ್ ಹಾವೇರಿ ಪ್ರವೇಶ ಮಾಡಿದರು.

ಇನ್ನೂ ಮನೆಯಲ್ಲಿರುವ ಸ್ಪರ್ಧಿಗಳಿಗೆ ಈಗಾಗಲೇ ಟಾಸ್ಕ್ ಅನ್ನು ನೀಡಲಾಗಿದ್ದು, ವಿಶೇಷ ಬಾಲ್ ಗಳನ್ನು ಹುಡುಕುತ್ತಾ ರಿಯಾಲಿಟಿ ಶೋ ನಲ್ಲಿ ಪಾಲ್ಗೊಂಡಿದ್ದಾರೆ.ಧಾರವಾಡದ ಯುವ ಗಾಯಕನಿಗೆ ನಮ್ಮ ಧಾರವಾಡ ಜಿಲ್ಲೆಯ ಜನತೆಯ ಪರವಾಗಿ ಶುಭವಾಗಲಿ.