ಚಾಮರಾಜನಗರ –
ಗೆಳೆಯನೊಬ್ಬನಿಗೆ ಲಾಡ್ಜ್ ನಲ್ಲಿ ರೂಮ್ ಕೊಡದಿದ್ದಕ್ಕೆ ಪೊಲೀಸ್ ಪೇದೆಯೊಬ್ಬರು ಲಾಡ್ಜ್ ಮ್ಯಾನೇಜರ್ ಗೆ ಧಮ್ಕಿ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಗುಂಡ್ಲುಪೇಟೆಯ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಪೊಲೀಸ್ ಜೀಪ್ ಚಾಲಕನು ಕಂಠಪೂರ್ತಿ ಕುಡಿದು ಲಾಡ್ಜ್ ಮುಂದೆ ದಾಂದಲೆ ಮಾಡಿದ್ದಾರೆ.
ಅಲ್ಲದೇ ದಬ್ಬಾಳಿಕೆ ಮಾಡಿದ್ದು ವಿಡಿಯೋ ಸಾಮಾಜಿಕ ಜಾಲ ತಾಣಗಲ್ಲಿ ವೈರಲ್ ಆಗಿದೆ. ಬೇಗೂರು ಪೊಲೀಸ್ ಠಾಣೆಯ ಪೊಲೀಸ್ ಜೀಪ್ ಚಾಲಕ ನಾಗೇಶ್ ನ ಗೆಳೆಯನೊಬ್ಬನಿಗೆ ರೂಮ್ ಬೇಕಾಗಿದೆ. ಹೀಗಾಗಿ ಪಟ್ಟಣದಲ್ಲಿರುವ ಲಾಡ್ಜ್ ವೊಂದಕ್ಕೆ ಹೋಗಿ ರೂಮ್ ಕೇಳಿದ್ದಾರೆ.
ರೂಮ್ ನೀಡಲು ಮ್ಯಾನೇಜರ್ ಹಿಂದೆಟು ಹಾಕಿದ್ದಾರೆ. ಇದರಿಂದ ಆಕ್ರೋಶಗೊಂಡ ನಾಗೇಶ್ ಕುಡಿದು ಲಾಡ್ಜ್ ಮ್ಯಾನೇಜರ್ ಗೆ ಆವಾಜ್ ಹಾಕಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಪೊಲೀಸ್ ಠಾಣೆಯ ಜೀಪ್ ಡ್ರೈವರ್ ಆಗಿರುವ ಇವರ ರಂಪಾಟದ ವಿಡಿಯೋ ವೈರಲ್ ಆಗಿದೆ.
ಗೆಳೆಯನಿಗೆ ಲಾಡ್ಜ್ ನಲ್ಲಿ ರೂಂ ಕೊಡದಿದ್ದರಿಂದ ರೊಚ್ವಿಗೆದ್ದ ಪೊಲೀಸ್ ಜೀಪ್ ಚಾಲಕ ನಾಗೇಶ್ ಲಾಡ್ಜ್ ಮುಂದೆ ರಂಪಾಟ ಮಾಡಿದ್ದಾರೆ. ನಾನಿರಬೇಕು ಇಲ್ಲ ಲಾಡ್ಜ್ ಇರಬೇಕು ದಮ್ಕಿ ಹಾಕಿದ್ದಾರೆ.
ಈ ಕುರಿತಂತೆ ಪೊಲೀಸ್ ಜೀಪ್ ಚಾಲಕ ನಾಗೇಶ್ ಮೇಲೆ ದೂರು ದಾಖಲಾಗಿದೆ. ಪ್ರಕರಣ ದಾಖಲು ಮಾಡಿಕೊಂಡಿದ್ದು ಇತ್ತ ಹೀಗೆ ದಾಂದಲೇ ಮಾಡಿದ ನಾಗೇಶ್ ನನ್ನು ಅಮಾನತು ಮಾಡಿ ಆದೇಶವನ್ನು ಹೊರಡಿಸಲಾಗಿದೆ.