ಧಾರವಾಡ –
ಹೌದು ಜಯ ಕರ್ನಾಟಕ ಜನಪರ ವೇದಿಕೆಯಿಂದ
ಧಾರವಾಡದ ಶಹರದಲ್ಲಿ ಸುಮಾರು 20 – 30 ವರ್ಷಗಳಿಂದ ಹೊಟ್ಟೆಯ ಪಾಡಿಗಾಗಿ ಬಡ ಜನರು ಕೆಲವೊಂದು ರಸ್ತೆಯ ಪಕ್ಕದಲ್ಲಿ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ
ಈ ಬಡ ಜನರ ದಿನ ನಿತ್ಯದ ಜೀವನ ಇದರಿಂದಲೇ ನಡೆಯುತ್ತಿದೆ ಆದರೆ ಈಗ ಏಕಾಏಕಿಯಾಗಿ ಯಾವುದೇ ರೀತಿಯ ಸಮಯ ಅವಕಾಶ ನೀಡದೆ ಸದರಿ ಡಬ್ಬಾ ಅಂಗಡಿಗಳನ್ನು ತೆರೆವುಗೊಳಿಸಲು ಪಾಲಿಕೆಯ ಅಧಿಕಾರಿಗಳು ನಿರ್ಧರಿಸಿದ್ದು ವಿಷಾದ ನೀಯ ಇದರಿಂದ ಈ ಬಡ ಜನರಿಗೆ ದಿಕ್ಕು ತೋಚ ದಂತಾಗಿ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯಾಗಿದೆ
ಕಾರಣ ಈ ಡಬ್ಬಾ ಅಂಗಡಿಗಳನ್ನು ತೆರವುಗೊಳಿ ಸುವಲ್ಲಿ ಕೆಲ ಕಾಲ ಸಮಯ ಅವಕಾಶದೊಂದಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಧಾರವಾಡ ಪಶ್ಚಿಮ 74 ಕ್ಷೇತ್ರದ ಶಾಸಕರಾದ ಅರವಿಂದ್ ಬೆಲ್ಲದವರಿಗೆ, ಹಾಗೂ ಆಯುಕ್ತರು ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಹಾಗೂ ಸಹಾಯಕ ಆಯುಕ್ತರು ವಲಯ ಕಚೇರಿ ಇವರಿಗೆ ಮನವಿ ಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗ ಳಾದ ಜಗದೀಶ ಜಾಧವ, ಸೋಮು ಬೈಲವಾಡ, ಮಲ್ಲಿಕಾರ್ಜುನ ಅಸುಂಡಿ, ಅನ್ವರ ನದಾಫ, ಹರ್ಷದ ಪಠಾಣ, ಅಶೋಕ ಭಂಡಾರಿ ಮಂಜು ನಾಥ ಅಂಗಡಿ, ಶಿವಾನಂದ ಎಲಿಗಾರ, ಗುರು ಸುಣಗದ, ಕಲ್ಲಪ್ಪ ಕುಂದರಗಿ, ತನ್ವೀರ್ ಪಠಾಣ, ಪ್ರಕಾಶ ಪಾಟೀಲ, ಶೇಖರ ಶೆಟ್ಟಿ, ಮೌಲಾ ಪೆಂಡಾರಿ,ಪರಶರಾಮ ಶಿರಹಟ್ಟಿ, ಇರ್ಷಾದ ಧಾರವಾಡಕರ, ವಿದ್ಯಾನಂದ ಅಂಗಡಿ, ಶ್ಯಾಮ ಮುಲ್ಲಾ, ಅನಿಲ ಶಿಂಧೆ, ಮುಂತಾದವರು ಉಪಸ್ಥಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ …..