ಕಲಬುರಗಿ –
ಕಟ್ಟಿಗೆಯಿಂದ ಹೊಡೆದು ಪತ್ನಿ ಮತ್ತು ಮಗಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಯಲ್ಲಿ ನಡೆದಿದೆ.ಕಲಬುರಗಿಯ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ಈ ಒಂದು ಘಟನೆ ನಡೆದಿದೆ.
ದಿಗಂಬರ್ ಎಂಬಾತನೇ ತನ್ನ ಪತ್ನಿ ಮತ್ತು ಮಗಳನ್ನು ಕೊಲೆ ಮಾಡಿದ ಪಾಪಿಯಾಗಿದ್ದಾನೆ.ಜಗದೀಶ್ವರಿ 45, ಪ್ರಿಯಾಂಕಾ 11 ಕೊಲೆಯಾದ ದುರ್ದೈವಿಗಳಾಗಿ ದ್ದಾರೆ.
ಮಧ್ಯರಾತ್ರಿ ಮನೆಯಲ್ಲಿ ಕೊಲೆ ಮಾಡಿದ್ದಾನೆ ದಿಗಂಬರ್.ಪತ್ನಿಯ ಶೀಲವನ್ನು ಶಂಕಿಸಿ ಕೊಲೆ ಮಾಡಿರೋ ಶಂಕೆಯನ್ನು ಪೊಲೀಸರು ವ್ಯಕ್ತಪಡಿ ಸಿದ್ದಾರೆ.ಆರೋಪಿ ದಿಗಂಬರ್ ನನ್ನು ಈಗಾಗಲೇ ಪೊಲೀಸರ ವಶಕ್ಕೆ ತೆಗೆದುಕೊಂಡಿದ್ದಾರೆ.ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ