ದೂರು ಕೊಟ್ಟು ಈಗ ಉಲ್ಟಾ ಹೊಡೆದ ದಿನೇಶ್ ಕಲ್ಲಹಳ್ಳಿ – ಕೊಟ್ಟ ದೂರನ್ನು ವಾಪಸ್

Suddi Sante Desk

ಬೆಂಗಳೂರು –

ಸೆಕ್ಸ್ ಸಿಡಿ ಬಿಡುಗಡೆ ಮಾಡಿ ರಾಜ್ಯ ರಾಜಕಾರಣ ದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಈಗ ಯುಟರ್ನ್ ಹೊಡೆದಿದ್ದಾರೆ.

ಹೌದು…ಕಬ್ಬನ್ ಪಾರ್ಕ್ ಠಾಣೆಯಲ್ಲಿ ಮಾರ್ಚ್ 2 ರಂದು ನೀಡಿದ್ದ ದೂರನ್ನು ದಿನೇಶ್ ಕಲ್ಲಹಳ್ಳಿ ಹಿಂಪಡೆದಿದ್ದಾರೆ‌.ಈ ಮೂಲಕ ಪ್ರಕರಣದಲ್ಲಿ ಉಲ್ಟಾ ಹೊಡೆದಿದ್ದಾರೆ. ವಕೀಲ ಕುಮಾರ್ ಪಾಟೀಲ್ ಮೂಲಕ ಕೊಟ್ಟ ದೂರನ್ನು ಹಿಂಪಡೆಯುವ ಪತ್ರವನ್ನು ದಿನೇಶ್ ಕಲ್ಲಹಳ್ಳಿ ಪೊಲೀಸ್ ಠಾಣೆಗೆ ರವಾನಿಸಿದ್ದಾರೆ.

ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ವಾಪಸ್ ಪಡೆದುಕೊಂಡಿದ್ದು ಅಚ್ಚರಿಗೆ ಕಾರಣ ವಾಗಿದೆ. ಅಲ್ಲದೇ ಹಲವು ಪ್ರಶ್ನೆಗಳ ಜೊತೆ ಅನುಮಾನಗಳು ಸಹ ಉದ್ಭವಿಸಿವೆ.ಇನ್ನು ಈ ಕೇಸ್ ವಾಪಸ್ ಪಡೆಯುವ ಬಗ್ಗೆ ದಿನೇಶ್ ಕಲ್ಲಹಳ್ಳಿ ಬರೆದಿರುವ ತಮ್ಮ ಪತ್ರದಲ್ಲಿ 5 ಪ್ರಮುಖ ಕಾರಣಗಳನ್ನು ವಿವರವಾಗಿ ಉಲ್ಲೇಖಿಸಿದ್ದಾರೆ

ಪತ್ರದಲ್ಲಿ ಉಲ್ಲೇಖ ಮಾಡಿರುವ ಕಾರಣಗಳು

1.ದೂರುದಾರರನ್ನೇ ಟಾರ್ಗೆಟ್ ಮಾಡಲಾಗ್ತಿರೋದು
2.ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ 5 ಕೋಟಿ ರೂ. ಡೀಲ್ ಆರೋಪ.
3.ಯುವತಿಯ ಚಾರಿತ್ರ್ಯ ಹರಣ
4.ಸಂತ್ರಸ್ತೆಯನ್ನೇ ಅಪರಾಧಿ ಎಂದು ಬಿಂಬಿಸುತ್ತಿರೋದು
5.ರಾಜಕೀಯ ಪ್ರಭಾವದ ಬಗ್ಗೆ ಚರ್ಚಿಸದೇ, ದೂರುದಾರರ ಪ್ರಾಮಾಣಿಕತೆ ಪ್ರಶ್ನಿಸುತ್ತಿರೋದು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.