ಚುರುಕುಗೊಂಡ ಪಾಲಿಕೆಯ ಚುನಾವಣೆ – ಇದೇ 19 ರಂದು ಜಿಲ್ಲಾಧಿಕಾರಿ ಗಳೊಂದಿಗೆ ಚುನಾವಣಾ ಆಯುಕ್ತರ ಸಭೆ ಸಿದ್ದತೆ ಕುರಿತು ಚರ್ಚೆ…..

Suddi Sante Desk

ಬೆಂಗಳೂರು –

ಈಗಾಗಲೇ ಅವಧಿ ಮುಕ್ತಾಯಗೊಂಡಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆ ಕುರಿತು ಶೀಘ್ರದಲ್ಲೇ ಚುನಾವಣೆ ದಿನಾಂಕ ಘೋಷಣೆಯಾಗುವ ಬಹುತೇಕ ಲಕ್ಷಣಗಳು ಕಾಣುತ್ತಿದ್ದು ಚುನಾವಣೆ ಕುರಿತು ಈವರೆಗೆ ಮಾಡಿರುವ ಸಿದ್ದತೆ ಗಳ ಕುರಿತು ರಾಜ್ಯ ಚುನಾವಣೆಯ ಅಧೀನ ಕಾರ್ಯದರ್ಶಿ ಅವರು ಪಾಲಿಕೆಯ ವ್ಯಾಪ್ತಿಯ ಜಿಲ್ಲಾಧಿಕಾರಿ ಗಳೊಂದಿಗೆ ಸಭೆಯನ್ನು ಕರೆದಿದ್ದಾರೆ. ಹೌದು ಇದೇ 19 ರಂದು ಜಿಲ್ಲಾಧಿಕಾರಿ ಗಳೊಂದಿಗೆ ಚುನಾವಣಾ ಆಯುಕ್ತರ ಸಭೆ ಸಿದ್ದತೆ ಕುರಿತು ವಿಡಿಯೋ ಕಾನ್ಪರನ್ಸ್ ಕರೆದಿದ್ದಾರೆ.

ಈಗಾಗಲೇ ಅವಧಿ ಮುಗಿದಿರುವ ಬೆಳಗಾವಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ, ಕಲಬುರಗಿ, ದೊಡ್ಡಬಳ್ಳಾಪುರ ನಗರಸಭೆ,ತರಿಕೇರಿ ಪುರಸಭೆ ಗಳ ಚುನಾವಣೆ ಮಾಡುವ ಕುರಿತು ಚರ್ಚೆ ಮಾಡಲು ಈ ಜಿಲ್ಲಾಧಿಕಾರಿ ಗಳೊಂದಿಗೆ ಸಭೆಯನ್ನು ಕರೆದಿದ್ದಾರೆ

ರಾಜ್ಯ ಚುನಾವಣೆ ಆಯೋಗದ ಪ್ರಧಾನ ಕಾರ್ಯದರ್ಶಿ ಈ ಒಂದು ಸಭೆಯನ್ನು ಕರೆದಿದ್ದಾರೆ ಪ್ರಮುಖವಾಗಿ ಸಭೆಯಲ್ಲಿ ಚುನಾವಣೆಯ ಕುರಿತು ಮಾಡಿರುವ ಸಿದ್ದತೆ ಗಳ ಬಗ್ಗೆ ಚರ್ಚೆ ಯನ್ನು ಮಾಡಿ ಅಧಿಕಾರಿಗಳೊಂದಿಗೆ ಮಾಹಿತಿಯನ್ನು ಪಡೆದು ಕೊಳ್ಳಲಿದ್ದಾರೆ

ಈ ಒಂದು ಸಭೆಯನ್ನು ನೋಡಿದರೆ ಇನ್ನೇನು ಚುನಾವಣೆಯ ಕುರಿತು ಗೊಂದಲದ ನಡುವೆ ಚುರುಕುಗೊಂಡಂತೆ ಪಾಲಿಕೆಯ ಚುನಾವಣೆಯ ಚಟುವಟಿಕೆಗಳು ಕಂಡು ಬರುತ್ತಿದ್ದು ಇನ್ನೇನು ಸಿದ್ದತೆಯ ಈ ಒಂದು ಪರಿಶೀಲನೆಯ ಸಭೆಯ ನಂತರ ದಿನಾಂಕ ಘೋಷಣೆಯಾಗುವ ಬಹುತೇಕ ಅಂತಿಮವಾಗಿದ್ದು ಯಾವಾಗ ಮುಹೂರ್ತ ಎಂಬುದಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.