ಶಿವಮೊಗ್ಗ –
ಕಳೆದ ಕೆಲ ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ.ಮಳೆಯಿಂದಾಗಿ ಸಾಗರ ತಾಲೂಕಿನ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು.ನಾಳೆ ರಜೆಯೋ ಅಥವಾ ಶಾಲೆಗಳು ನಡೆಯಲಿದೆಯೋ ಎಂಬ ಮಾಹಿತಿಗಾಗಿ ಬಿಇಓಗೆ ಕರೆ ಮಾಡಿದ್ರೇ ಯಾರೊಬ್ಬರ ಕರೆಯನ್ನು ಬಿಇಓ ರಿಸೀವ್ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಈ ಸಂಬಂಧ ಸಾಗರ ತಾಲೂಕಿನ ಮಕ್ಕಳು ಪೋಷಕರು ಅನೇಕರ ಪತ್ರಕರ್ತರನ್ನು ಸಂಪರ್ಕಿಸಿ,ನಾಳೆ ಶಾಲೆಗಳಿಗೆ ರಜೆ ಇದ್ಯಾ ಅಥವಾ ತರಗತಿಗಳು ನಡೆಯಲಿದ್ಯಾ ಎನ್ನುವ ಮಾಹಿತಿ ಯನ್ನು ಕೇಳುತ್ತಿದ್ದಾರೆ.ಪತ್ರಕರ್ತರು,ಶಾಲಾ ಮುಖ್ಯಸ್ಥರು, ಪೋಷಕರು ಸಾಗರ ತಾಲೂಕು ಬಿಇಓ ಬಿಂಬಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ರೇ ಯಾವುದೇ ಪೋನ್ ಕಾಲ್ ಪಿಕ್ ಮಾಡಿ,ಉತ್ತರಿಸದೇ ಇರುವುದು ಮತ್ತಷ್ಟು ಗೊಂದಲ ದ್ವಂದ್ವಕ್ಕೆ ಸಿಲುಕುವಂತೆ ಮಾಡಿದೆ.
ಸರಿ ಇನ್ನೂ ಮಾಹಿತಿ ನೀಡುವವರು ಯಾರು ಪೋಷಕರು ಶಾಲಾ ಆಡಳಿತ ಮಂಡಳಿಗೆ ನಾಳೆ ಶಾಲೆ ತೆರೆಯೋ ಬಗ್ಗೆ ಮಾಹಿತಿ ನೀಡುವವರು ಯಾರು ಯಾಕೆ ಹೀಗೆ ಪೋನ್ ಪಿಕ್ ಮಾಡುತ್ತಿಲ್ಲ ಎಂಬುದು ಹಲವರ ಪ್ರಶ್ನೆಯಾಗಿದೆ. ಅಲ್ಲದೇ ಸಾಗರ ತಾಲೂಕು ಬಿಇಓ ಬಿಂಬಾ ನಡೆಗೆ ಸಾರ್ವ ಜನಿಕರು ಕಿಡಿಕಾರಿದ್ದಾರೆ.ಈ ಕೂಡಲೇ ನಾಳೆ ಶಾಲೆಗಳು ತೆರೆಯಲಿವೆಯೋ ಅಥವಾ ರಜೆ ಇರಲಿದೆಯೋ ಎನ್ನುವ ಬಗ್ಗೆ ಮೇಲಧಿಕಾರಿಗಳಾದರೂ ಮಾಹಿತಿ ನೀಡುವಂತೆ ಸಾಗರ ತಾಲೂಕು ಜನತೆ ಒತ್ತಾಯಿಸಿದ್ದಾರೆ.
ಇನ್ನೂ ಸಾಗರ ತಾಲೂಕು ಜನತೆ ಸೋಷಿಯಲ್ ಮೀಡಿ ಯಾಗಳಲ್ಲಿ ಬಿಇಓ,ಜಿಲ್ಲಾಧಿಕಾರಿಗಳು,ಉಪ ನಿರ್ದೇಶಕರೇ ಉತ್ತರಿಸಿ ಎಂಬುದಾಗಿ ಪೋಸ್ಟ್ ಮಾಡಿ ಕೇಳುತ್ತಿದ್ದಾರೆ. ಈಗ ಸಾಗರ ತಾಲೂಕಿನಾಧ್ಯಂತ ಬಿಇಓ ಕರೆ ಸ್ವೀಕರಿಸದ ಕಾರಣ,ನಾಳೆ ಶಾಲೆಯ ರಜೆಯ ಗೊಂದಲದಲ್ಲಿದ್ದಾರೆ. ಆ ಬಗ್ಗೆ ಉತ್ತರಿಸುತ್ತಾರಾ ಎನ್ನುವ ಬಗ್ಗೆ ಕಾದು ನೋಡಬೇಕಿದೆ.