ಕರ್ತವ್ಯ ಲೋಪ – ಶಾಲೆಯ ಮುಖ್ಯೋಪಾಧ್ಯಾಯಿನಿ ಎತ್ತಂಗಡಿ ದೂರುಗಳ ಹಿನ್ನೆಲೆಯಲ್ಲಿ ವರ್ಗಾ ವಣೆ ಮಾಡಿ ಆದೇಶ…..

Suddi Sante Desk

HD ಕೋಟೆ –

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಹಾಗೇ ಕರ್ತವ್ಯ ಲೋಪ ಮಾಡಿದ ಆರೋಪದ ಮೇಲೆ ವಸತಿ ಶಾಲೆಯ ಮುಖ್ಯೋಪಾಧ್ಯಾಯಿನಿ ಯೊಬ್ಬರ ನ್ನು ವರ್ಗಾವಣೆ ಮಾಡಲಾಗಿದೆ.ಹೌದು ಎಚ್.ಡಿ. ಕೋಟೆ: ತಾಲ್ಲೂಕಿನ ಕೆ.ಬೆಳತೂರು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀದೇವಿ ಅವರನ್ನು ಕರ್ತವ್ಯಲೋಪದ ಆಧಾರದ ಮೇಲೆ ಮತ್ತು ಅನೇಕ ಪೋಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮೇಲಧಿಕಾರಿಗಳು ಕೊನೆಗೂ ವರ್ಗಾವಣೆ ಮಾಡಿದ್ದಾರೆ.

ಹುಣಸೂರು ತಾಲ್ಲೂಕಿನ ಹನಗೋಡು ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀದೇವಿ ಅವರನ್ನು ಕಳೆದ 3. ವರ್ಷಗಳ ಹಿಂದೆ ತಾಲ್ಲೂಕಿನ ಕೆ.ಬೆಳತೂರು ಮೊರಾರ್ಜಿ ವಸತಿ ಶಾಲೆಗೆ ಪ್ರಭಾರ ಪ್ರಾಂಶುಪಾಲ ರಾಗಿ ಕರ್ನಾಟಕ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆ ಮುಖ್ಯಸ್ಥರಾದ ಸಿದ್ದೇಶ್ವರನ್ ಅವರು ನೇಮಕ ಮಾಡಿದ್ದರು.ಅಂದಿನಿಂದ ಇಂದಿನವರೆಗೂ ಮೊರಾರ್ಜಿ ವಸತಿ ಶಾಲೆಯಲ್ಲಿ ಶ್ರೀದೇವಿ ಅವರ ಆಡಳಿತದ ಬಗ್ಗೆ ಪರ ಮತ್ತು ವಿರೋಧವಾಗಿ ಅನೇಕ ಸಂಘಟನೆಗಳು ಪ್ರತಿಭಟನೆಗಳನ್ನು ನಡೆಸಿದ್ದವು. ಜನಪ್ರತಿನಿಗಳು ಸಹಾ ಶಾಲೆಗೆ ಭೇಟಿ ನೀಡಿ ವಿಚಾರಿ ಸಿದ್ದರು. ಮೇಲಧಿಕಾರಿಗಳು ತನಿಖೆ ಕೂಡ ನಡೆಸಿ ದ್ದರು. ಇವೆಲ್ಲಾ ಅಧಿಕಾರಿಗಳಿಗೆ ದೊಡ್ಡ ತಲೆನೋ ವಾಗಿ ಪರಿಣಮಿಸಿತ್ತು.

ಕರ್ನಾಟಕ ವಸತಿ ಶಾಲೆಗಳ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಶಾಲೆಯ ಸಮಗ್ರ ವರದಿ ನೀಡುವಂತೆ ಹಿಂದೆ ಇದ್ದ ಗಿರಿಜನ ಅಭಿವೃದ್ಧಿ ಯೋಜನಾ ಅಧಿಕಾರಿ ಪಿಸಿಒ ಪ್ರಕಾಶ್ ಅವರಿಗೆ ಆದೇಶಿಸಿದ್ದರು. ಅವರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈಗಿನ ಪಿಸಿಒ ಅಧಿಕಾರಿ ಪ್ರಭಾ ಅವರು ತನಿಖೆ ಮಾಡಿ ಸಮಗ್ರ ವರದಿಯನ್ನು ಮೇಲಧಿಕಾರಿಗೆ ಸಲ್ಲಿಸಿದ್ದರು.

ಶ್ರೀದೇವಿ ಅವರನ್ನು ತಕ್ಷಣ ವರ್ಗಾವಣೆ ಮಾಡಿ ಮೂಲ ವೃತ್ತಿಯಾಗಿದ್ದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೆಲಸ ನಿರ್ವಹಿಸುವಂತೆ ಆದೇಶಿಸಿ ಏಕಲವ್ಯ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಅವರನ್ನು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾ ಲರಾಗಿ ಅಧಿಕಾರ ವಹಿಸಿಕೊಳ್ಳುವಂತೆ ಆದೇಶಿಸಿ ದ್ದರು.ಆದರೆ ಶ್ರೀದೇವಿ ವರ್ಗಾವಣೆಯಾಗಲು ವಿರೋಧ ವ್ಯಕ್ತಪಡಿಸಿ ಶ್ರೀನಿವಾಸ್ ಅವರಿಗೂ ಅಧಿಕಾರ ಹಸ್ತಾಂತರಿಸದೆ ಇದ್ದ ಹಿನ್ನೆಲೆಯಲ್ಲಿ ಶಾಲೆಗೆ ತೆರಳಿದ ಪಿಸಿಒ ಪ್ರಭಾ ಅವರು ದಾಖಲಾತಿ ಗಳಲ್ಲಿ ಶ್ರೀನಿವಾಸ್ ಅವರೇ ಆದೇಶದಂತೆ ಪ್ರಾಂಶು ಪಾಲರಾಗಿ ಆಡಳಿತ ನಡೆಸಲಿದ್ದಾರೆ ಎಂದು ನಮೂ ದಿಸಿದ ನಂತರ ಶ್ರೀದೇವಿ ತಮ್ಮ ಸ್ಥಾನವನ್ನು ತೆರವು ಗೊಳಿಸಿ ಶಾಲೆಯಿಂದ ಹೊರನಡೆದಿದ್ದಾರೆ.

ಪ್ರಾಂಶುಪಾಲರಾದ ಶ್ರೀದೇವಿ ಅವರ ಕರ್ತವ್ಯ ಲೋಪ, ಶೈಕ್ಷಣಿಕ ಚಟುವಟಿಕೆ ವಿಳಂಬ ಶಾಲೆಯಲ್ಲಿ ಪದೇ ಪದೇ ಅಹಿತಕರ ಘಟನೆ,ಸಿಬ್ಬಂದಿಗಳ ಬದಲಾವಣೆ ಶಾಲೆಯಲ್ಲಿ ಅಸಮರ್ಪಕ ನಿರ್ವಹಣೆ ಮುಂತಾದ ಹಲವಾರು ಸಮಸ್ಯೆಗಳು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಈ ಶಾಲೆಯಿಂದ ವರ್ಗಾವಣೆ ಮಾಡಲಾಗಿದೆ ವರ್ಗಾವಣೆ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲಿಸಿ ಶ್ರೀದೇವಿ ಅವರು ಶಿಕ್ಷಕಿಯಾಗಿ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೆಲಸ ನಿರ್ವಹಿಸ ಬೇಕೆಂದು ಸೂಚಿಸಿದ್ದೇನೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.