ಬಳ್ಳಾರಿ –
ಪಂಚಪೀಠಗಳಲ್ಲಿ ಭಿನ್ನಮತ ಭುಗಿಲೆದ್ದಿದೆ ಎಂಬು ಮಾತುಗಳು ಕೇಳಿಬರುತ್ತಿದ್ದವು. ಇದಕ್ಕೇ ಈಗ ಮತ್ತೊರ್ವ ಸ್ವಾಮಿಜಿಯನ್ನು ನೇಮಕ ಮಾಡಿರುವುದೇ ಈ ಮಾತಿಗೆ ಪುಷ್ಟಿ ನೀಡಿದೆ.
ಹೌದು ಉಜ್ಜಿನಿ ಪೀಠಕ್ಕೆ ಏಕಾಏಕಿ ಮತ್ತೊರ್ವ ಸ್ವಾಮೀಜಿ ನೇಮಕ ಮಾಡೋದಾಗಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಈಗ ಭಿನ್ನಮತ ಆರಂಭವಾಗಿದೆ.ಅಲ್ಲದೇ ರಂಭಾಪೂರಿ ಶ್ರೀಗಳ ವಿರುದ್ಧ ಕೊಟ್ಟೂರು ಉಜ್ಜಿನಿ ಪೀಠದ ಭಕ್ತರ ಆಕ್ರೋಶಗೊಂಡಿದ್ದಾರೆ.ಒಂದು ಕಡೆ ಕೆಲವರು ಹಾಲಿ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಗಳನ್ನೇ ಮುಂದುವರೆಸುವಂತೆ ಭಕ್ತರ ಒತ್ತಾಯ ಮಾಡುತ್ತಿದ್ದಾರೆ. ಇತ್ತ ಪಂಚ ಪೀಠಗಳಾದ ಶ್ರೀಶೈಲ, ಕೇದಾರ, ರಂಭಾಪೂರಿ, ಕಾಶಿ ಪೀಠಗಳಲ್ಲಿ ಒಂದಾದ ಉಜ್ಜಿನಿ ಪೀಠಕ್ಕೆ 2011 ರಲ್ಲಿ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಪಟ್ಟಾಧಿಕಾರ ಮಾಡಲಾಗಿತ್ತು.ಅಂದು ಕೇದಾರ, ಶ್ರೀಶೈಲ, ರಂಭಾಪೂರಿ ಸ್ವಾಮಿಗಳೇ ಮುಂದಾಳತ್ವದಲ್ಲಿ ಪೀಠಾಧಿಪತಿಯಾಗಿದ್ರು.
ಉಜ್ಜಿನಿ ಪೀಠದ ಮೂಲ ಪೀಠ ಮಧ್ಯಪ್ರದೇಶದಲ್ಲಿದ್ರೂ ಬಳ್ಳಾರಿ ಜಿಲ್ಲೆಯ ಉಜ್ಜೈನಿ ಕ್ಷೇತ್ರ ಕೂಡ ಅಷ್ಟೇ ಮಹತ್ವದಾಗಿದೆ.ಇನ್ನೂ ಶ್ರೀಮದ್ ರಂಭಾಪುರಿ ಪೀಠಾಧ್ಯಕ್ಷರ ಸಮಕ್ಷಮದಲ್ಲಿ ಗದಗನ ಮುಕ್ತಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಹೇಳಿಕೆ ನೀಡಿ ಕೊಟ್ಟೂರು ಉಜ್ಜಯಿನಿ ಪೀಠಕ್ಕೆ ನೂತನವಾಗಿ ತ್ರಿಲೋಚನಾ ಸ್ವಾಮೀಜಿ ಅವರನ್ನು ಘೋಷಣೆ ಮಾಡಬೇಕೆನ್ನು ವುದಾಗಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ರು.
ಈ ಮಾತು ಕೇಳುತ್ತಿದ್ದಂತೆ ಉಜ್ಜನಿ ಪೀಠದ ಭಕ್ತರ ಆಕ್ರೋಶಗೊಂಡಿದ್ದಾರೆ.ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿದ್ದು ಈಗ ವೈರಲ್ ಆಗಿದ್ದು ರಂಭಾಪೂರ ಶ್ರೀಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಉಜ್ಜೈನಿ ಭಕ್ತರು.ಉಜ್ಜಯಿನಿ ಸದ್ದರ್ಮ ಪೀಠದಲ್ಲಿ ಮುಕ್ತಿ ಮಂದಿರದ ಘೋಷಣೆ ಹಿನ್ನಲೆಯಲ್ಲಿ ಭಕ್ತರು ಸಭೆ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು..ಆದ್ರೇ ಇದುವರೆಗೂ ಯಾವುದೇ ಸಭೆ ನಡೆಯಲಿಲ್ಲ.ಸ್ವಾಮೀಜಿಯವರ ಬೆಂಬಲಾರ್ಥ ಶೀಘ್ರದಲ್ಲೇ ಕೊಟ್ಟೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಯೋಜನೆ ಇದೆ ಎಂದು ಕೆಲ ಭಕ್ತರು ತಿಳಿಸಿದ್ದಾರೆ.
ಸಧ್ಯ ಕೊಟ್ಟೂರು ಪೊಲೀಸರಿಂದ ಮಠಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು ಈ ಮಧ್ಯೆ ನಿನ್ನೆ ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಉಜ್ಜಯಿನಿ ಸದ್ಧರ್ಮ ಪೀಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡದು ಇದ್ಯಾವ ವಿಚಾರದ ಬಗ್ಗೆ ಮಾತನಾಡಲಿಲ್ಲ. ಒಟ್ಟಾರೆ ಉಜ್ಜಯಿನಿ ಪೀಠಕ್ಕೆ ಹೊಸ ಸ್ವಾಮೀಜಿಯನ್ನು ರಂಭಾಪೂರಿ ಮಠದ ಸ್ವಾಮಿಜಿ ಸದ್ದಿಲ್ಲದೆ ನೇಮಕ ಮಾಡ್ತಾರ ಅಥವಾ ಉಜ್ಜಯಿನಿಯ ಈಗಿರುವ ಸ್ವಾಮಿಜಿ ಮುಂದುವರಿತಾರಾ ಇಲ್ಲವೇ ಭಕ್ತರು ಸ್ವಾಮಿಜಿಯ ಪರ ಹೋರಾಟ ಮಾಡ್ತಾರಾ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.