ಕಾರವಾರ –
ಮನುಷ್ಯ ಎಷ್ಟು ಕೆಟ್ಟವ ಮನುಷ್ಯ ಎಷ್ಟು ವಿಕೃತಿ ಮನಸ್ಸು ಎನ್ನೊದಕ್ಕೇ ಈ ಸ್ಟೋರಿನೇ ಸಾಕ್ಷಿ. ಹೌದು ಸಾಮಾನ್ಯವಾಗಿ ಯಾವುದೇ ಪ್ರಾಣಿ ಪಕ್ಷಿಗಳು ನಮಗೆ ಯಾವ ತೊಂದರೆಯನ್ನು ಮಾಡದೇ ತಮ್ಮಷ್ಟಕ್ಕೇ ತಾವುಗಳಿರುತ್ತವೆ. ತಾವು ಆಯಿತು ತಮ್ಮ ವಾಸಸ್ಥಳವಾಯಿತೆಂದು ನಮ್ಮ ನಡುವೆ ಪ್ರಾಣಿ ಪಕ್ಷಿಗಳು ಇರುತ್ತವೆ.ಇದು ಒಂದೆಡೆಯಾದ್ರೆ ಇನ್ನೂ ನದಿ ಹಳ್ಳ ಕೊಳ್ಳ ಸಮುದ್ರಗಳಲ್ಲಿರುವ ಮೀನುಗಳು ನಮಗೆ ಯಾವ ತೊಂದರೆಯನ್ನು ಕೊಡೊದಿಲ್ಲ ನಮಗೇನು ಮಾಡೊದಿಲ್ಲ. ನಾವೇ ಅವುಗಳನ್ನು ಹಿಡಿದು ಒಂದಿಷ್ಟು ಮಸಾಲೆ ಹಾಕಿ ಎಣ್ಣೆಯಲ್ಲಿ ಪ್ರೈ ಮಾಡಿಕೊಂಡು ಬಾಯಿ ಚಪ್ಪಿರಿಸಿಕೊಂಡು ತಿನ್ನುತ್ತೆವೆ. ಹೀಗಿರುವಾಗ ಕಾರವಾರದಲ್ಲೊಂದು ಮೀನುಗಳ ಮೇಲೆ ಬೋಟ್ ಕಾರ್ಮಿಕರು ವಿಕೃತಿಯನ್ನು ಮೆರೆದಿದ್ದಾರೆ.
ಹೌದು ಸಮುದ್ರದ ದಂಡೆಯ ಮೇಲಿರುವ ಬೋಟ್ ಕಾರ್ಮಿಕರು ಮೀನಿನಿಂದ ಬೀಡಿ ಸೇಯಿಸಿ ವಿಕೃತಿಯನ್ನು ಮಾಡಿದ್ದಾರೆ. ಕಾರವಾರದ ಬೈತಖೋಲ ಮೀನುಗಾರಿಕಾ ಬಂದರಿನಲ್ಲಿ ಈ ಒಂದು ವಿಕೃತವಾದ ಘಟನೆಯೊಂದು ನಡೆದಿದೆ.
ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರ ಚೊಂಚಿ ಎಂದು ಕರೆಯಲ್ಪಡುವ ಮೀನು ನೀರಿನಿಂದ ಹೊರತೆಗೆದಾಗ ಉಸಿರಾಡಲು ಬಾಯಿ ತೆಗೆದುಕೊಳ್ಳುತ್ತಿದ್ದಂತೆ ಈ ಒಂದು ಸಮಯದಲ್ಲಿ ಬಾಯಿಯನ್ನು ತಗೆದುಕೊಂಡಿದ್ದ ಮೀನುಗಳು ಮೀನಿನ ಬಾಯಿಗೆ ಬೀಡಿ ಇಟ್ಟ ಕಾರ್ಮಿಕರು ವಿಕೃತಿ ಮೆರೆದಿದ್ದಾರೆ.
ಬೋಟ್ ಕಾರ್ಮಿಕರು ಹೀಗೆ ಮಾಡಿರುವ ವಿಕೃತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹೀಗೆ ಮಾಡಿರುವ ಬೋಟ್ ಕಾರ್ಮಿಕರ ವಿಕೃತಿಯ ವೀಡಿಯೋ ನೋಡಿದ ಸಾರ್ವಜನಿಕರು ಕಾರ್ಮಿಕರ ವಿರುದ್ದ ಅಸಮಾಧಾನಗೊಂಡಿದ್ದಾರೆ.