ಕಲಬುರಗಿ –
ಅಜೀಮ್ ಪ್ರೇಮಜೀ ಫೌಡೇಷನ್ ಕಲಬುರ್ಗಿ ಘಟಕದಿಂದ ಆದಶ೯ನಗರ ಕ್ಲಸ್ಟರ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದು೯ಸರಕಾರಿ ಪ್ರಾಥಮಿಕ ಶಾಲೆಗಳ ಬಡತನ ರೇಖೆಗಿಂತ ಕೆಳಗಿನ ಮಕ್ಕಳ ಪೋಷಕರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ ಮಾಡಲಾಯಿತು.
ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಶ್ಶಿವಶರಣಪ್ಪ ಬನ್ನಿಕಟ್ಟಿಯವರು ಸರಕಾರಿ ಉದು೯ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಸೋನಿಯಾ ಗಾಂಧಿ ಕಾಲೋನಿಯಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಜೀಮ್ ಪ್ರೇಮಜೀ ಫೌಂಡೇ ಷನ್ ನ ಮೊಹಮ್ಮದ್ ಶಫೀ ಮತ್ತು ಸಹೋದ್ಯೋಗಿ ಮಿತ್ರರು ಶಿಕ್ಷಣ ಸಂಯೋಜಕರಾಗಿರುವ ಅಜು೯ನ ಹತ್ತಿ ಉದು೯ ಶಿಕ್ಷಣ ಸಂಯೋಜಕರಾಗಿರುವ ಎ.ಡಿ.ಬಾಷಾ,
ಮೋಹ್ಮದ್ ಖಾಜಾ ಗೇಸುದರಾಜ್ ಮುಖ್ಯೋಪಾ ಧ್ಯಾಯರು ಉದು೯ ಶಾಲೆ ನಾಗೂರ,ಆದಶ೯ನಗರ ಸಿ.ಆರ್.ಪಿ.ಯವರಾದ
ಮಹಬೂಬ,ಪಾಲಕರು ಪೋಷಕರು ಉಪಸ್ಥಿತರಿದ್ದು ಫೌಂಡೇಶನ್ ನಿಂದ ಕಿಟ್ ಗಳನ್ನು ಸ್ವೀಕರಿಸಿದರು. ಶಾಲಾ ಮುಖ್ಯೋಪಧ್ಯಾಯರಾಗಿರುವ ಶ್ರೀಮತಿ, ಹನೀಫಾ ಬೇಗಂ ಮತ್ತು ಅವರ ಸಿಬ್ಬಂದಿ ಉಪಸ್ಥಿತ ರಿದ್ದರು.