ಬೆಂಗಳೂರು –
ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ವಿತರಣೆ – ವಾರದಲ್ಲಿ ಮೂರು ದಿನಗಳ ರಾಗಿ ಮಾಲ್ಟ್ ವಿತರಣೆ ಚಾಲನೆ ನೀಡಲಿದ್ದಾರೆ CM
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಇನ್ನೂ ಮುಂದೆ ವಾರದಲ್ಲಿ ಮೂರು ದಿನಗಳಲ್ಲಿ ರಾಗಿ ಮಾಲ್ಟ್ ಸಿಗಲಿದ್ದು ಫೆಬ್ರುವರಿ 22 ರಿಂದ ವಿತರಣೆ ಆರಂಭ ವಾಗಲಿದೆ ಹೌದು ಈ ಒಂದು ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾತನಾಡಿ ಶಾಲಾ ಮಕ್ಕಳಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ್ ವಿತರಣೆ ಮಾಡಲಾಗುವುದು ಎಂದರು.
ರಾಜ್ಯ ಸರ್ಕಾರವು 60 ಲಕ್ಷ ಶಾಲಾ ಮಕ್ಕಳಿಗೆ ರಾಗಿ ಮಾಲ್ಟ್ ನೀಡಲು ನಿರ್ಧರಿಸಿದೆ.ನಾಳೆ ಬೆಂಗಳೂರಿನಲ್ಲಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು ರಾಜ್ಯಾ ಧ್ಯಂತ ಈ ಒಂದು ಹೊಸ ಯೋಜನೆಯನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭ ಮಾಡಲಾಗು ವುದು ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..