ದಾವಣಗೆರೆ –
ಇಂದಿನಿಂದ ಶಾಲೆಗಳು ಆರಂಭವಾಗಿದ್ದು ದಾವಣಗೇರಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಯವರು ವಿಶೇಷವಾಗಿ ಮಕ್ಕಳಿಗೆ ಪಾಠ ಮಾಡುವ ಮೂಲಕ ವಿದ್ಯಾಗಮಕ್ಕೆ ಚಾಲನೆ ನೀಡಿದ್ದಾರೆ.

ಹೌದು ದಾವಣಗೆರೆಯ ನಿಟುವಳ್ಳಿಯ ಸರ್ಕಾರಿ ಪ್ರಾಥಮಿಕ ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಜಿಲ್ಲಾಧಿಕಾರಿಗಳು ಪಾಠ ಮಾಡುವ ಮೂಲಕ ವಿದ್ಯಾಗಮಕ್ಕೆ ಚಾಲನೆ ನೀಡಿದರು.

ಶಾಲೆಗೆ ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿಯವರನ್ನು ಶಾಲೆಯ ಶಿಕ್ಷಕರು ಆಡಳಿತ ಮಂಡಳಿಯವರು ವಿಶೇಷವಾಗಿ ಬರಮಾಡಿಕೊಂಡರು. ಜಿಲ್ಲಾಧಿಕಾರಿಗಳಿಗೆ ಸ್ಯಾನೆಟೈಜರ್ ಹಾಕಿ ಹೂಗುಚ್ಚವನ್ನು ನೀಡಿ ಸ್ವಾಗತಿಸಲಾಯಿತು.
ಇದೇ ವೇಳೆ ಡಿಸಿ ಯವರು ಶಾಲೆಯಲ್ಲಿನ ಕೊಠಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಡಿಸಿ. ನಂತರ ಮಕ್ಕಳಿಗೆ ಪಾಠ ಮಾಡುವ ಮೂಲಕ ವಿದ್ಯಾಗಮಕ್ಕೆ ಚಾಲನೆ ನೀಡಿದರು. ಜ್ಞಾನಕ್ಕಿಂತ ದೊಡ್ಡ ಆಸ್ತಿ ಯಾವುದು ಇಲ್ಲ ಸಂಸ್ಕೃತ ಶ್ಲೋಕದ ಮೂಲಕ ಮಕ್ಕಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಲ್ಲರ ಗಮನ ಸೆಳೆದು ಮಕ್ಕಳಿಗೆ ಭೋಧನೆಯನ್ನು ಮಾಡಿದರು.ಎಪಿಜೆ ಅಬ್ಧುಲ್ ಕಲಾಂರಂತೆ ದೇಶದ ಆಸ್ತಿಯಾಗುವಂತೆ ಮಕ್ಕಳಿಗೆ ಡಿಸಿ ತಿಳುವಳಿಕೆಯನ್ನು ನೀಡಿದರು.