ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ವೇತನ ಸೌಲಭ್ಯಗಳ ಪರಿಷ್ಕರಣೆಗೆ ಹೈಕೋರ್ಟ್ ನಿವೃತ್ತ ನ್ಯಾಯ ಮೂರ್ತಿಗಳ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಂ.ಎಸ್ ಬಿಲ್ಡಿಂಗ್ (ಬಹುಮಹಡಿ ಕಟ್ಟಡ) ಮುಂಭಾಗದಲ್ಲಿ ರಾಜ್ಯ ಸರ್ಕಾರಿ ನೌಕರರ ವಿವಿಧ ಸಂಘಟನೆಗಳ ಮತ್ತು ಇಲಾಖಾ ಹಾಗೂ ವೃಂದ ಸಂಘಗಳ ಜಂಟಿ ಕ್ರಿಯಾ ಸಮಿತಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಳಿಗ್ಗೆ 10.30ರಿಂದ 5 ಗಂಟೆಯವರೆಗೆ ಈ ಧರಣಿ ನಡೆಯಲಿದೆ. ಎಲ್ಲ ನೌಕರರು ಸಾಮೂಹಿಕವಾಗಿ ರಜೆ ಹಾಕಿ ಈ ಪ್ರತಿಭಟನೆಯಲ್ಲಿ ಭಾಗವಹಿಸು ವಂತೆ ಕರೆ ನೀಡಲಾಗಿದೆ ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಎಂದು ಪಿ. ಗುರುಸ್ವಾಮಿ ತಿಳಿಸಿದ್ದಾರೆ
ಕೋವಿಡ್ ಅವಧಿಯಲ್ಲಿ ಮುಟ್ಟಗೋಲು ಹಾಕಿಕೊಂಡಿರುವ ನೌಕರರ ಮತ್ತು ಪಿಂಚಣಿ ದಾರರ 18 ತಿಂಗಳ ತುಟ್ಟಿಭತ್ಯೆ ತಕ್ಷಣ ಬಿಡುಗಡೆ ಮಾಡಬೇಕು 2022ರ ಜುಲೈನಿಂದ ಜಾರಿಗೆ ಬರುವಂತೆ ಶೇ 25ರಷ್ಟು ಮಧ್ಯಂತರ ಪರಿಹಾರ ವನ್ನೂ ಕೂಡಲೇ ಘೋಷಿಸಬೇಕು ನೂತನ ಪಿಂಚಣಿ ಪದ್ಧತಿಯನ್ನು ರದ್ದುಪಡಿಸಿ ನಿಶ್ಚಿತ ಪಿಂಚಣಿ ಪದ್ಧತಿ ಮತ್ತೆ ಆರಂಭಿಸಬೇಕು ಆಡಳಿತ ಸುಧಾರಣಾ ಆಯೋಗ-2 ರ ವರದಿಯಲ್ಲಿರುವ ನೌಕರ ವಿರೋಧಿ ಶಿಫಾರಸುಗಳನ್ನು ಕೈಬಿಡ ಬೇಕು, ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದೂ ಕ್ರಿಯಾ ಸಮಿತಿ ಬೇಡಿಕೆ ಮುಂದಿಟ್ಟಿದೆ.
ಇನ್ನೂ ಇತ್ತ ರಾಜ್ಯದ ಎಲ್ಲಾ ಜಿಲ್ಲೆಗಳ ಸರ್ಕಾರಿ ನೌಕರರು ಈ ಒಂದು ಪ್ರತಿಭಟನೆಗೆ ಬೆಂಬಲ ನೀಡದಿರಲು ನಿರ್ಧಾರವನ್ನು ಕೈಗೊಂಡಿದ್ದು ಬೆಂಬಲವನ್ನು ನೀಡೊದಿಲ್ಲ ಪ್ರತಿಭಟನೆ ಮಾಡೊ ದಿಲ್ಲ ಎಂದು ರಾಜ್ಯದ ಎಲ್ಲಾ ಜಿಲ್ಲಾ ಸರ್ಕಾರಿ ನೌಕರರ ಸಂಘಟನೆ ಗಳು ಹೇಳಿದ್ದು ನಮಗೆ ಷಡಾಕ್ಷರಿ ಅವರ ಮೇಲೆ ರಾಜ್ಯ ಸರ್ಕಾರ ದ ಮೇಲೆ ವಿಶ್ವಾಸವಿದೆ ಎಂದಿದ್ದಾರೆ.