ಧಾರವಾಡ –
ನೂತನ DC ಯವರನ್ನು ಬರಮಾಡಿಕೊಂಡ ಜಿಲ್ಲಾ ಸರ್ಕಾರಿ ನೌಕರರ ಸಂಘ – ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡ್ರ ನೇತ್ರತ್ವದಲ್ಲಿ ಸ್ವಾಗತ…..ನೌಕರರ ಸಂಘದ ನಿಯೋಗದ ಸದಸ್ಯರು ಉಪಸ್ಥಿತಿ
ಧಾರವಾಡ ಜಿಲ್ಲೆಗೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ಸ್ನೇಹಲ್ ಆರ್ ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ.ಆದೇಶದ ಬೆನ್ನಲ್ಲೇ ಇಂದು ಅಧಿಕಾರವನ್ನು ವಹಿಸಿಕೊಂಡಿದ್ದು ಇನ್ನೂ ಜಿಲ್ಲೆಗೆ ಹೊಸದಾಗಿ ಜಿಲ್ಲಾಧಿಕಾರಿಯಾಗಿ ಬಂದಿರುವ ಇವರನ್ನು ಜಿಲ್ಲಾ ನೌಕರರ ಸಂಘ ಬರಮಾಡಿಕೊಂಡಿದೆ ಹೌದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್ ಎಫ್ ಸಿದ್ದನಗೌಡ್ರ ನೇತ್ರತ್ವದಲ್ಲಿನ ನಿಯೋಗವು ಧಾರವಾಡ ಜಿಲ್ಲಾಧಿಕಾರಿಯಾಗಿ ಬಂದಿರುವ ಇವರನ್ನು ಸ್ವಾಗತ ಮಾಡಿಕೊಂಡರು
ಜಿಲ್ಲಾಧಿಕಾರಿ ಕಚೇರಿಯ್ಲಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಶ್ರೀಮತಿ ಸ್ನೇಹಲ್ ಆರ್ ಅವರನ್ನು ಸ್ವಾಗತಿಸಿದರು.ಇದೇ ವೇಳೆ ಅಭಿನಂದಿಸಿ ಶುಭವನ್ನು ಹಾರೈಸ ಲಾಯಿತು ಈ ಒಂದು ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಎಸ್ ಎಫ್ ಸಿದ್ದನಗೌಡ್ರು ಅವರೊಂದಿಗೆ ಆರ್ ಬಿ ಲಿಂಗದಾಳ,ಪ್ರಕಾಶ ಹಳಪೇಟ,ಮಲ್ಲಿಕಾರ್ಜುನ ಸೋಲಗಿ,ರಾಜಶೇಖರ ಹೊನ್ನಪ್ಪನ ವರ,ಗಿರೀಶ ಚೌಡಕಿ,ಎಮ್ ಎಮ್ ನಾಯಕ,ಶಾಂತಾ ಶೀಲವಂತರ,
ವೀಣಾ ಹೊಸಮನಿ,ಲಕ್ಷ್ಮಣ ರಜಪೂತ,ಪ್ರಾಣೇಶ ಜಮಖಂಡಿ, ಗಂಗಾಧರ ಕತ್ತಿ,ಪರಮಾನಂದ ಶಿವಳ್ಳಿಮಠ,ರವಿ ಕಟ್ಟಿ,ಉಮೇಶ ಕುರುಬರ,ರಾಮು ಪಾಟೀಲ,ಗಣಪತಿ ದೇಶಪಾಂಡೆ,ಮಂಜುನಾಥ ಚೌರಡ್ಡಿ ಸೇರಿದಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿ ಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..



