ತುಮಕೂರು –
ಸದ್ಯ ಎಲ್ಲೇಡೆ ಕೊರೋನಾ ವ್ಯಾಕ್ಸಿನ್ ಲಸಿಕೆ ಕುರಿತಂತೆ ಅಭಿಯಾನದೊಂದಿಗೆ ಆರಂಭದಲ್ಲಿ ಮೊದಲು ಕೊರೋನಾ ವಾರಿಯರ್ಸ್ ಗೆ ಹಾಕಲಾಗುತ್ತಿದೆ.
ದೇಶವ್ಯಾಪಿ ಈ ಒಂದು ಆಂದೋಲನ ಆರಂಭವಾಗಿದ್ದು ಇನ್ನೂ ರಾಜ್ಯದ ತುಮಕೂರು ನಲ್ಲೂ ಆರಂಭವಾಗಿದೆ.ಇನ್ನೂ ಕೊರೋನಾ ವ್ಯಾಕ್ಸಿನ್ ತೆಗೆದುಕೊಂಡಂತೆ ನಾಟಕವನ್ನು ಜಿಲ್ಲಾ ವೈಧ್ಯಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಮಾಡಿದ್ದಾರೆ.
ಕೊವ್ಯಾಕ್ಸಿನ್ ಚುಚ್ಚುಮದ್ದು ಅಭಿಯಾನ ಚಾಲನೆ ನೀಡುವಾಗ ಈ ಒಂದು ನಟನೆ ಕಂಡು ಬಂದಿದೆ. ಕೇವಲ ವಿಡಿಯೋಗೆ ಪೋಸ್ ನ್ನು ಡಿಎಚ್‌ಓ ನಾಗೇಂದ್ರಪ್ಪ, ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ನೀಡಿದ್ದಾರೆ.
ಕೊವ್ಯಾಕ್ಸಿನ್ ತೆಗೆದುಕೊಂಡಂತೆ ಕ್ಯಾಮೆರಾ ಮುಂದೆ ಪೋಸ್ ನೀಡಿದ್ದಾರೆ ಇಲಾಖೆಯಲ್ಲಿನ ಈ ಇಬ್ಬರು ಅರೋಗ್ಯಾಧಿಕಾರಿಗಳು. ಜಿಲ್ಲೆಯಲ್ಲಿ ಮೊದಲು ವ್ಯಾಕ್ಸಿನ್ ಪಡೆದಿದ್ದ ಡಿಎಸ್ ವೀರಭದ್ರಯ್ಯ ಬಳಿಕ ಡಿಹೆಚ್‌ಓ,ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಯಿಂದ ಚುಚ್ಚುಮದ್ದು ತೆಗೆದುಕೊಂಡಂತೆ ನಾಟಕ ಕಂಡು ಬಂದಿದೆ.
ಸೂಜಿ ಚುಚ್ಚದಯೇ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ ನರ್ಸ್ ಗಳು. ಇದನ್ನೇಲ್ಲವನ್ನು ನೋಡಿದರೆ ಲಸಿಕೆಯನ್ನು ಪಡೆದುಕೊಳ್ಳಲು ಹಿಂಜರಿದರಾ ತುಮಕೂರು ಆರೋಗ್ಯಾಧಿಕಾರಿಗಳು ಎಂಬ ಅನುಮಾನ ಈ ಒಂದು ವಿಡಿಯೋ ದಿಂದ ಕಂಡು ಬರುತ್ತಿದೆ. ಸಾಕಷ್ಟು ಚರ್ಚೆಯನ್ನ ಹುಟ್ಟುಹಾಕಿದ ಡಿಹೆಚ್‌ಓ ವ್ಯಾಕ್ಸಿನ್ ವಿಡಿಯೋ ಈಗ ವೈರಲ್ ಆಗಿದ್ದು ಎಲ್ಲೇಡೆ ಇಬ್ಬರು ಅಧಿಕಾರಿಗಳ ವಿರುದ್ದ ಆಕ್ರೋಶ ಕಂಡು ಬರುತ್ತಿದೆ.ಇವರೇ ಹೀಗಾದರೆ ಇನ್ನೂ ಸಾರ್ವಜನಿಕರು ಇದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಅನುಮಾನ ಕಾಡುತ್ತಿದೆ.