ಬ್ಲಾಕ್ ಫಂಗಸ್ ಗೆ ಬಲಿಯಾದ ಜಿಲ್ಲಾ ಪಂಚಾಯತ ಸದಸ್ಯ – ಯುವ ಉತ್ಸಾಹಿ ಗಣಿ ಉಧ್ಯಮಿ ಮಹಾಂತೇಶ್ ಉಡಪುಡಿ ಇನ್ನೂ ನೆನಪು ಮಾತ್ರ…..

Suddi Sante Desk

Bgk

ಬ್ಲ್ಯಾಕ್ ಫಂಗಸ್ ನಿಂದ ಜಿಪಂ ಮಾಜಿ ಸದಸ್ಯ ರೊಬ್ಬರು ಮೃತರಾಗಿದ್ದಾರೆ.ಹೌದು ಮಹಾಂತೇಶ್ ಉದಪುಡಿ(೪೨) ಮೃತರಾಗಿರುವ ನಾಯಕರಾಗಿ ದ್ದಾರೆ‌‌‌.ಗಣಿ ಉದ್ಯಮಿಯಾಗಿದ್ದು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡನಾಗಿದ್ದರು ಮಹಾಂತೇಶ್ ಉದ ಪುಡಿ ಅವರು‌.ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಲೋಕಾಪುರ ಕ್ಷೇತ್ರದ ಜಿಪಂ ಮಾಜಿ ಸದಸ್ಯರಾಗಿದ್ದಾರೆ.


ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿ ದ್ದಾರೆ‌.ಕಳೆದ ೨೦ ದಿನದಿಂದ ಜೈಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಚಿಕಿತ್ಸೆ ಫಲಿಸದೆ ಇಂದು ಅವರು ನಿಧನರಾದರು.ಮೊದಲು ಕೊರೊನಾ ಕಾಣಿಸಿ ಕೊಂಡಿತ್ತು.ಮುದೋಳ ನಗರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಮಾಂತೇಶ್ ಉದಪುಡಿ ಜಿಲ್ಲಾ ಪಂಚಾಯತ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದರು.
ಬ್ಲ್ಯಾಕ್ ಫಂಗಸ್ ನಿಂದ ಕಣ್ಣಿಗೆ ತೀವ್ರ ಗಾಯವಾ ಗಿತ್ತು. ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.ಚಿಕಿತ್ಸೆಗೆ ಸ್ಪಂದಿ ಸದೇ ಇಂದು ಮೃತರಾದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.