This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

ವಿಜಯನಗರ

ಮಹಾ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಷಡಾಕ್ಷರಿಯವರ ಶಕ್ತಿ ಬಲಪಡಿಸಿ ವಿಜಯನಗರ ಜಿಲ್ಲಾ ಸಂಘಟನೆ ಕರೆ – ಜಿಲ್ಲಾಧ್ಯಕ್ಷರಾದ ಜಿ, ಮಲ್ಲಿಕಾರ್ಜುನ ಗೌಡ.ಪ್ರಧಾನ ಕಾರ್ಯದರ್ಶಿ ಕಡ್ಲಿ, ವೀರಭದ್ರೇಶ, ಸೇರಿದಂತೆ ಸರ್ವ ಸದಸ್ಯರ ಕರೆ…..

ಮಹಾ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಷಡಾಕ್ಷರಿಯವರ ಶಕ್ತಿ ಬಲಪಡಿಸಿ ವಿಜಯನಗರ ಜಿಲ್ಲಾ ಸಂಘಟನೆ ಕರೆ – ಜಿಲ್ಲಾಧ್ಯಕ್ಷರಾದ ಜಿ, ಮಲ್ಲಿಕಾರ್ಜುನ ಗೌಡ.ಪ್ರಧಾನ ಕಾರ್ಯದರ್ಶಿ ಕಡ್ಲಿ, ವೀರಭದ್ರೇಶ, ಸೇರಿದಂತೆ ಸರ್ವ ಸದಸ್ಯರ ಕರೆ…..
WhatsApp Group Join Now
Telegram Group Join Now

ವಿಜಯನಗರ

ಫೆಬ್ರುವರಿ 27 ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ವತಿ ಯಿಂದ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನವನ್ನು ಆಯೋಜನೆ ಮಾಡಲಾಗಿದ್ದು ನೌಕರರ ಬೇಕು ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗುವುದು,

ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಗಳಾದ ಡಿ ಕೆ ಶಿವಕುಮಾರ್ ಆಶಯ ನುಡಿಗ ಳನ್ನು ಆಡಲಿದ್ದಾರೆ ಮತ್ತು ಸರ್ಕಾರದ ಗೌರವಾ ನ್ವಿತ ಎಲ್ಲಾ ಸಚಿವರು ಭಾಗ ವಹಿಸುತ್ತಾರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ IAS, ಅಪರ ಮುಖ್ಯ ಕಾರ್ಯದರ್ಶಿ ಗಳಾದ ಶ್ರೀಮತಿ ಶಾಲಿನಿ ರಜನೀಶ್ IAS, ಹಾಗೂ ಶ್ರೀ ಎಲ್ ಎ ಅತೀಕ್ IAS ಅಪರ ಮುಖ್ಯ ಕಾರ್ಯದರ್ಶಿ ಗಳು ಕರ್ನಾಟಕ ಸರ್ಕಾರ ಇವರುಗಳು ಭಾಗವಹಿಸಲಿದ್ದಾರೆ

ಸಂಘದ ಕ್ರಿಯಾಶೀಲ ರಾಜ್ಯಾಧ್ಯಕ್ಷರಾದ ಸಿ, ಎಸ್ ಷಡಾಕ್ಷರಿ ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ನೌಕರರ ಪ್ರಮುಖ ಬೇಡಿಕೆಗಳಾದ‌ ರಾಜ್ಯದ ಎಲ್ಲಾ ಸರ್ಕಾರಿ ನೌಕರರಿಗೆ NPS ರದ್ದು ಮಾಡಿ OPS ಜಾರಿಗೊಳಿಸಿ ತಕ್ಷಣದಿಂದಲೇ ನೌಕರರ ವೇತನದಲ್ಲಿ ಕಟಾವಣೆ ಆಗುತ್ತಿರುವ NPS ವಂತಿಗೆಯನ್ನು ನಿಲ್ಲಿಸುವುದು.

ಈಗಾಗಲೇ ರಚನೆ ಆಗಿ ಎರಡು ಬಾರಿ ಅವಧಿ ವಿಸ್ತರಣೆ ಆಗಿರುವ ಏಳನೇ ವೇತನ ಆಯೋಗ ದಿಂದ ಸಿದ್ದವಾಗಿರುವ ವರದಿಯನ್ನು ತಕ್ಷಣವೇ ಸ್ವೀಕರಿಸಿ ಜಾರಿಗೊಳಿಸುವುದು

ಈಗಾಗಲೇ ಹಿಂದಿನ ಸರ್ಕಾರದ ಅವಧಿಯಲ್ಲಿ ಲೋಕಾರ್ಪಣೆ ಗೊಂಡು ಜಾರಿಯಾಗದಿರುವ ನೌಕರರ ಆರೋಗ್ಯ ಸಂಜೀವಿನಿ ಯೋಜನೆ ಯನ್ನು ಜಾರಿಗೆ ತರುವುದು

ಈ ಎಲ್ಲಾ ಅಂಶಗಳನ್ನು ಸರ್ಕಾರದ ಮುಂದೆ ಸಮ್ಮೇಳನದಲ್ಲಿ ನೆರೆದ ಲಕ್ಷಾಂತರ ಸರ್ಕಾರಿ ನೌಕರರ ಮುಂದೆಯೇ ಮಂಡಿಸಲಾಗುವುದು, ಸರ್ಕಾರದಿಂದಲೂ ಸಹ ಸಕಾರಾತ್ಮಕ ಪ್ರತಿಕ್ರಿಯೆ ಇರುವುದರಿಂದ ವಿಜಯನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಭಾಗವ ಹಿಸುವ ಮೂಲಕ

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ರಾದ ಸಿ ಎಸ್ ಷಡಾಕ್ಷರಿ ಯವರಿಗೆ ಶಕ್ತಿಯನ್ನು ತುಂಬುವ ಕೆಲಸವನ್ನು ಮಾಡುವ ಮೂಲಕ ಸರ್ಕಾರಿ ನೌಕರರ ಬೇಕು ಬೇಡಿಕೆಗಳನ್ನು ಈಡೇರಿ ಸಿಕೊಳ್ಳಲು ಸಿಕ್ಕಿರುವ ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು

ಸಮ್ಮೇಳನದಲ್ಲಿ ವಿಶೇಷ ಉಪನ್ಯಾಸವನ್ನು ಸಹ ಏರ್ಪಡಿಸಲಾಗಿದ್ದು ರಾಜ್ಯದ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ಮುಖ್ಯಸ್ಥರಾದ ಡಾ! ಮಂಜುನಾಥ ಅವರನ್ನು ಒಳಗೊಂಡಂತೆ ರಾಜ್ಯ ಸರ್ಕಾರದ ಹಲವು ಹಿರಿಯ ಅಧಿಕಾರಿ ಗಳು,

ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷರುಗಳು, ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ರಾಜ್ಯದ ಸಮಸ್ತ ನಿವೃತ್ತ ಸರ್ಕಾರಿ ನೌಕರರು ಸಹ ಭಾಗವಹಿಸಲಿದ್ದಾರೆ

ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಹಾಗೂ ಜಿಲ್ಲಾ ಕೇಂದ್ರ ಹೊಸಪೇಟೆ ಯಿಂದ ಬೆಂಗಳೂರು ಸಮ್ಮೇಳನಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆ ಯನ್ನು ಸರ್ಕಾರಿ ನೌಕರರ ಸಂಘದ ವತಿಯಿಂದ ಸಾರಿಗೆ ವ್ಯವಸ್ಥೆ ಯನ್ನು ಸಹ ಮಾಡಲಾಗುತ್ತದೆ.

ಭಾಗವಹಿಸುವ ನೌಕರರಿಗೆ ಎರೆಡು ದಿನ ಅನ್ಯ ಕಾರ್ಯ ನಿಮಿತ್ತ ರಜೆ OOD ಯನ್ನು ಸಹ ಸರ್ಕಾರ ಮಂಜೂರು ಮಾಡಿದೆ, ಈ ಸೌಲಭ್ಯ ಗಳನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದೆ*

ವಿಜಯನಗರ ಜಿಲ್ಲಾ ಸರ್ಕಾರಿ ನೌಕರರ ಸಂಘಟನೆಯ ಜಿಲ್ಲಾಧ್ಯಕ್ಷರಾದ ಜಿ, ಮಲ್ಲಿಕಾರ್ಜುನ ಗೌಡ.ಪ್ರಧಾನ ಕಾರ್ಯದರ್ಶಿ ಕಡ್ಲಿ, ವೀರಭದ್ರೇಶ,ರಾಘವೇಂದ್ರ ಹೆಗಡಿಯಾಳ ಎಸ್ ಬಸವರಾಜ,ವಿಜಯನಗರ ಜಿಲ್ಲಾ ಶಾಖೆಯ ಸರ್ವ ಪದಾಧಿಕಾರಿಗಳು ಸರ್ವ ವೃಂದ ಸಂಘಗಳ ಅಧ್ಯಕ್ಷರು, ಮತ್ತು ಪದಾಧಿಕಾರಿಗಳು ಕೊಟ್ಟೂರು, ಕೂಡ್ಲಿಗಿ, ಹಗರಿ ಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿ ತಾಲೂಕಿನ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು

ಸುದ್ದಿ ಸಂತೆ ನ್ಯೂಸ್ ವಿಜಯನಗರ…..


Google News

 

 

WhatsApp Group Join Now
Telegram Group Join Now
Suddi Sante Desk