ತುರುವೇಕೆರೆ –
ಬಹು ನಿರೀಕ್ಷಿತ ರಾಜ್ಯ ಸರ್ಕಾರಿ ನೌಕರರಿಗೆ ನವೆಂಬರ್-ಡಿಸೆಂಬರ್ ಅಂತ್ಯದೊಳಗೆ 7ನೇ ವೇತನ ಆಯೋಗ ನೀಡುವ ಸಂಬಂಧ ಒಂದು ಸಮಿತಿ ಮಾಡುವುದಾಗಿ ಮುಖ್ಯಮಂತ್ರಿಗಳು ಆಶ್ವಾಸನೆ ನೀಡಿದ್ದಾರೆಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ನರಸಿಂಹರಾಜು ತಿಳಿಸಿದರು.
ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿನ ತಾಲೂಕು ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಪ್ರಮಾಣ ಪತ್ರ ಸ್ವೀಕಾರ ಹಾಗೂ ಕಾರ್ಯಕಾರಿಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಒಂದು ವೇಳೆ 7ನೇ ವೇತನ ಆಯೋಗ ನೀಡದಿ ದ್ದಲ್ಲಿ ರಾಜ್ಯದಲ್ಲಿ ಹೋರಾಟ ತೀವ್ರಗೊಳಿಸಲಾಗು ವುದು ಎಂದರು
ರಾಜ್ಯ ಸಂಘವು ಸುಮಾರು 24 ಕೋಟಿ ಲಾಭ ದಲ್ಲಿದ್ದು ಎಲ್ಲ ಇಲಾಖೆಯ ನೌಕರ ಬಂಧುಗಳಿಗೆ ಎಲ್ಲ ರೀತಿಯ ಸೌಲಭ್ಯ ಸಿಗುವಂತೆ ಮಾಡುವ ದಿಸೆ ಯಲ್ಲಿ ರಾಜ್ಯಾಧ್ಯಕ್ಷರು ಕಾರ್ಯೋನ್ಮುಖರಾ ಗಲಿದ್ದಾರೆ. ಸರ್ಕಾರ ಹೊರಡಿಸುವ ಎಲ್ಲಾ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕೆಲಸದಲ್ಲಿ ನೌಕರರು ಬದ್ಧತೆ ತೋರುವುದರ ಜೊತೆಗೆ ಸಾರ್ವಜನಿಕರ ಸೇವೆಯನ್ನು ಪ್ರಾಮಾಣಿ ಕವಾಗಿ ಮಾಡುವಂತೆ ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಂರಾಜು ಮುನಿಯೂರು ಮಾತನಾಡಿ, ರಾಜ್ಯದ ಲ್ಲಿನ ಲಕ್ಷಾಂತರ ಸರ್ಕಾರಿ ನೌಕರರು ಹಳೆ ಪಿಂಚಣಿ ಯಿಂದ ವಂಚಿತರಾಗಿದ್ದು ಈ ನೌಕರರನ್ನು ಅವಲಂಬಿಸಿರುವ ಕುಟುಂಬದ ಭದ್ರತೆಗಾಗಿ ಒಪಿಎಸ್ ಮರು ಜಾರಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದರು
ಆರೋಗ್ಯ ಇಲಾಖೆಯಲ್ಲಿ ಕೊರತೆಯಾಗಿರುವ ಅನುದಾನಗಳಿಗೆ ವಿಶೇಷ ಗಮನ ನೀಡುವುದು, ತಾಂತ್ರಿಕ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಎಂಜಿನಿಯರ್, ಲೋಕೋಪ ಯೋಗಿ ಮತ್ತು ಹೇಮಾವತಿ ಇಲಾಖೆಗಳಲ್ಲಿ ಆಗಿರುವ ಮುಂಬಡ್ತಿಯ ತಾಂತ್ರಿಕ ಸಮಸ್ಯೆ ಗಳನ್ನು ಸರಿಪಡಿಸುವಂತೆ ವೀರಪ್ರಸನ್ನ ಜಿಲ್ಲಾ ಅಧ್ಯಕ್ಷರ ಬಳಿ ಮನವಿ ಮಾಡಿದರು.