ಬೆಂಗಳೂರು –
ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರಕ್ಕೆ ಸಂಬಂಧಿಸಿ ದಂತೆ ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಡ್ವಕೇಟ್(ಎಜಿ) ಜನರಲ್ ಪ್ರಭುಲಿಂಗ ನಾವದಗಿ ಅವರಿಂದ ಕಾನೂನು ಸಲಹೆ ಪಡೆದಿ ದ್ದಾರೆ.ರಾಜ್ಯದಲ್ಲಿ ಬಿಬಿಎಂಪಿ,ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಗಳು ಸೇರಿದಂತೆ ಚುನಾವಣೆ ಬಾಕಿ ಇರುವ ಸ್ಥಳೀಯ ಸಂಸ್ಥೆಗಳಿಗೆ ಸದ್ಯದಲ್ಲೇ ಚುನಾ ವಣೆ ನಡೆಯುವ ನಿರೀಕ್ಷೆ ಇದೆ.ಮಧ್ಯಪ್ರದೇಶದ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವೇಳೆ ಇದು ಎಲ್ಲಾ ರಾಜ್ಯ ಗಳಿಗೂ ಅನ್ವಯವಾಗಲಿದೆ ಎಂದು ಸುಪ್ರೀಂ ಕೊರ್ಟ್ ಹೇಳಿತ್ತು.ಇದೇ ಕಾರಣಕ್ಕೆ ದೆಹಲಿಯಿಂದ ವಾಪಸ್ಸಾಗುತ್ತಿ ದ್ದಂತೆ ಸಿಎಂ ಬೊಮ್ಮಾಯಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಸಂಬಂಧಿಸಿದಂತೆ ಎಜಿ ಅವರ ಸಲಹೆ ಪಡೆದಿ ದ್ದಾರೆ.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ,ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುತ್ತೇವೆ.ಸುಪ್ರೀಂ ಕೋರ್ಟ್ ನ ಎರಡೂ ತೀರ್ಪುಗಳ ಬಗ್ಗೆಯೂ ಚರ್ಚಿಸುತ್ತೇವೆ.ಒಬಿಸಿ ಮೀಸಲಾತಿ ಇಟ್ಟುಕೊಂಡೇ ಚುನಾವಣೆ ಮಾಡಬೇಕು. ಸುಪ್ರೀಂ ಕೋರ್ಟ್‌ನ ಎರಡು ತೀರ್ಪಿನ ಬಗ್ಗೆ ವಿಶ್ಲೇಷಣೆ ಮಾಡುತ್ತೇವೆ ಎಂದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಂಬಂಧ ಈಗಾಗಲೇ ಸಮಿತಿ ಕೂಡ ನೇಮಿಸಿದ್ದೇವೆ.ಅದರ ಬಗ್ಗೆಯೂ ಹಾಗೂ ವಿಪಕ್ಷ ನಾಯಕರ ಪತ್ರದ ಬಗ್ಗೆ ಚರ್ಚೆ ಮಾಡುತ್ತೇವೆ ಮುಂದೆ ಯಾವ ನಿಲುವನ್ನು ತೆಗೆದುಕೊಳ್ಳಬೇಕು ಎಂದು ಕಾನೂನು ತಜ್ಞರ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಇದುವರೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸಂವಿಧಾನದ ಪ್ರಕಾರವೇ ಓಬಿಸಿಯವರಿಗೆ ಪ್ರಾತಿನಿಧ್ಯ ಕೊಡುತ್ತಾ ಬಂದಿದ್ದೇವೆ.ಈಗ ಒಬಿಸಿ ಇಟ್ಟುಕೊಂಡೇ ಚುನಾವಣೆ ಮಾಡಬೇಕೆಂಬುದು ನಮ್ಮ ಉದ್ದೇಶ ಆಗಿದೆ. ಹೀಗಾಗಿ ಒಬಿಸಿ ಇಟ್ಟುಕೊಂಡು ಯಾವ ರೀತಿ ಚುನಾವಣಾ ಪ್ರಕ್ರಿಯೆ ಮಾಡಬಹುದು ಎಂಬುದರ ಬಗ್ಗೆ ಚಿಂತನೆ ನಡೆ ದಿದೆ ಎಂದು ಹೇಳಿದರು.ಮಧ್ಯಪ್ರದೇಶ ಪುನರ್ ಪರಿಶೀಲನೆ ಅರ್ಜಿ ಬಗ್ಗೆಯೂ ಚರ್ಚಿಸಲಾಗುವುದು.ಇದರಲ್ಲಿ ಬಹ ಳಷ್ಟು ವಿಷಯಗಳು ಇವೆ.ಒಟ್ಟಾರೆ ಚುನಾವಣೆ ಹಾಗೂ ಒಬಿಸಿ ಮೀಸಲಾತಿ ಆಗುವುದಕ್ಕೆ ಏನೆಲ್ಲ ಕ್ರಮಗಳನ್ನು, ಪ್ರಯತ್ನಗಳನ್ನು ಮಾಡಬೇಕೋ ಅದೆಲ್ಲವನ್ನೂ ಕಾನೂನಾ ತ್ಮಕವಾಗಿ ಮಾಡುತ್ತೇವೆ ಎಂದರು.