ಕಾರವಾರ –
ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಳ್ಳಲು ನಿಂತುಕೊಂಡಿದ್ದ ಬೈಕ್ ಗಳಿಗೆ ಕಾರೊಂದು ಗುದ್ದಿದ ಘಟನೆ ಕಾರವಾರದಲ್ಲಿ ನಡೆದಿದೆ.
ಮಹಿಳೆಯೋರ್ವಳು ಬೇಜವಾಬ್ದಾರಿಯಾಗಿ ಪೆಟ್ರೋಲ್ ಬಂಕ್ ಒಳಗೆ ಕಾರು ಚಲಾಯಿಸಿ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿದ್ದಾರೆ
ಉತ್ತರಕನ್ನಡ ಜಿಲ್ಲೆಯ ಶಿರಸಿ ನಗರದ ಟಿ.ಎಸ್.ಎಸ್. ಪೆಟ್ರೋಲ್ ಬಂಕ್ ಬಳಿ ಈ ಒಂದು ಘಟನೆ ನಡೆದಿದೆ. ಮಹಿಳೆಯೋರ್ವಳು ತನ್ನ ಮಾರುತಿ 800 ಕಾರ್ ನಲ್ಲಿ ಪೆಟ್ರೋಲ್ ತುಂಬಿಸಲು ಟಿ.ಎಸ್.ಎಸ್. ಪೆಟ್ರೋಲ್ ಬಂಕ್ ಗೆ ಬಂದಿದ್ದಾರೆ
ಕಾರು ಮಹಿಳೆಯ ನಿಯಂತ್ರಣಕ್ಕೆ ಸಿಗದೆ ಪೆಟ್ರೋಲ್ ಹಾಕಿಸುತ್ತಿದ್ದ ಬೈಕ್ ಸವಾರರ ಮೇಲೆ ಹಾಯ್ದಿದೆ. ಬೈಕ್ ಸವಾರರಿಗೆ ಗಾಯವಾಗಿದ್ದು, ಪ್ರಾಣಾಪಾಯ ದಿಂದ ಪಾರಾಗಿದ್ದಾರೆ.ಈ ದೃಶ್ಯ ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾಗಿದೆ.