ಪರೀಕ್ಷಾ ದಿನ ಶಾಲೆಗೆ ಕಾವಲಿದ್ದ ದಿವ್ಯಾ ಹಾಗರಗಿ – ಪರೀಕ್ಷಾ ಅಕ್ರಮದ ಕುರಿತಂತೆ ದಿನಕ್ಕೊಂದು ಹೊರಬೀಳುತ್ತಿವೆ ಸ್ಟೋಟಕಗಳು

Suddi Sante Desk

ಬೆಂಗಳೂರು –

ಪಿಎಸ್ ಐ ಪರೀಕ್ಷೆಯಲ್ಲಿನ ಅಕ್ರಮ ಕುರಿತಂತೆ ದಿನಕ್ಕೊಂ ದು ಸ್ಟೋಟಕ ವಿಚಾರಗಳು ಹೋರಗೆ ಬರುತ್ತಿದ್ದು ಪರೀಕ್ಷಾ ದಿನ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಶಾಲೆಗೆ ಕಾವಲಿದ್ದರು ಎಂಬ ಸ್ಟೋಟಕ ವಿಚಾರ ಬೆಳಕಿಗೆ ಬಂದಿದೆ.ಹೌದು 545 ಪಿಎಸ್ಐ ಹುದ್ದೆಗಳ ನೇಮಕಾತಿ ಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪರೀಕ್ಷೆ ನಡೆದ ದಿನ ನಗರದ ಗೋಕುಲ ನಗರದಲ್ಲಿರುವ ಜ್ಞಾನಜೋತಿ ಇಂಗ್ಲಿಷ್ ಶಾಲೆಯ ಹೊರಗೆ ಇದ್ದರು ಈ ಕುರಿತಂತೆ ಕಲಬುರಗಿಯ ಹಲವು ಅಧಿಕಾರಿಗಳ ಜೊತೆ ಸಂಪರ್ಕ ಹೊಂದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ದಿವ್ಯಾ ಹಾಗರಗಿ ಬಂಧನಕ್ಕೆಂದು ಸಿಐಡಿ ಅಧಿಕಾರಿಗಳು ಮೂರು ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿತ್ತು. ಮಹಾರಾಷ್ಟ್ರದ ಪುಣೆಯಲ್ಲಿ ಈಗಾಗಲೇ ಸಿಐಡಿ ತಂಡದ ಬಲೆಗೆ ದಿವ್ಯಾ ಹಾಗರಗಿ ಮತ್ತು ಗ್ಯಾಂಗ್ ಬಿದ್ದಿದ್ದು ಜ್ಞಾನ ಜ್ಯೋತಿ ಇಂಗ್ಲಿಷ್ ಶಾಲೆಯ ಮುಖ್ಯಶಿಕ್ಷಕ ಕಾಶಿನಾಥ್, ಪರೀಕ್ಷೆ ವೇಳೆ ಕೊಠಡಿ ಮೇಲ್ವಿಚಾರಕರಾಗಿದ್ದ ಶಾಲೆಯ ಸಿಬ್ಬಂದಿ ಸುನಂದಾ,ಅರ್ಚನಾ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದ ದಿವ್ಯಾ ಮತ್ತು ಗ್ಯಾಂಗ್ ತಲೆಮರೆಸಿಕೊಂಡಿತ್ತು.ಸಿಐಡಿ ಎಸ್ಪಿ ರಾಘವೇಂದ್ರ ಹೆಗಡೆ ನೇತೃತ್ವದ ತಂಡವು ಪುಣೆಯಲ್ಲಿ ಇವರನ್ನು ಬಂಧಿಸಿದೆ.ಈ ಎಲ್ಲ ಅಕ್ರಮಗಳಿಗೆ ದಿವ್ಯಾ ಹಾಗರಗಿ ಒಡೆತನ ಜ್ಞಾನಜ್ಯೋತಿ ಇಂಗ್ಲಿಷ್ ಶಾಲೆಯೇ ಕೇಂದ್ರ ಸ್ಥಾನವಾಗಿದೆ

ದಿವ್ಯಾ ಹಾಗರಗಿ ತನ್ನ ಪ್ರಭಾವವನ್ನು ಬೀರಿ ತನ್ನ ಶಾಲೆಗೆ ಪರೀಕ್ಷಾ ಕೇಂದ್ರವನ್ನು ಮಜೂರು ಮಾಡಿಸಿಕೊಂಡಿದ್ದರು. ತನ್ನ ಶಾಲೆಯ ಸಿಬ್ಬಂದಿಯನ್ನೇ ಅಕ್ರಮ ಚಟುವಟಿಕೆಗ ಳಿಗೂ ಬಳಸಿಕೊಂಡಿದ್ದರು.ಪ್ರಶ್ನೆಪತ್ರಿಕೆಯನ್ನು ಕಿಂಗ್ ಪಿನ್ ಗಳಿಗೆ ಕಳಿಸಿದ್ದ ಇವರುಪರೀಕ್ಷೆ ಮುಗಿದ ನಂತರ ಒಎಂಆರ್ ಶೀಟ್ ಗಳಲ್ಲಿ ಅಭ್ಯರ್ಥಿಗಳ ಪರವಾಗಿ ಉತ್ತರಗಳನ್ನು ತುಂಬಿದ್ದರು.

ಪೋಲಿಸರ ತನಿಖೆ ವೇಳೆ ಪಿಎಸ್ಐ ನೇಮಕಾತಿ ಅಕ್ರಮ ಹೇಗೆ ನಡೆಯಿತು ಎಂಬ ಮಾಹಿತಿ ಬಹಿರಂಗವಾಗಿದೆ. ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೇ ಪಿಎಸ್‌ಐ ಅಕ್ರಮ ಪರೀಕ್ಷೆಯಲ್ಲಿ ಭಾಗಿಯಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಪರೀಕ್ಷಾರ್ಥಿಗಳಿಗೆ ಪರೀಕ್ಷೆ ವೇಳೆ ನೀಡುತ್ತಿದ್ದ OMR ನಕಲು ಪ್ರತಿಗಳನ್ನು ಸಿಬ್ಬಂದಿ ಪಡೆಯುತ್ತಿದ್ದರು.ಇದೇ ಅನುಮಾ ನದ ಹಿನ್ನಲೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದ್ದವರು ಪೊಲೀ ಸರಿಗೆ ಮಾಹಿತಿ ನೀಡಿದ್ದರು.ಇದೇ ಮಾಹಿತಿ ಆಧರಿಸಿ ಆರೋಪಿಗಳನ್ನು ಸಿಐಡಿ ವಿಸ್ತೃತ ವಿಚಾರಣೆಗೆ ಒಳಪಡಿ ಸಿತ್ತು.ಲಕ್ಷ-ಲಕ್ಷ ಹಣ ನೀಡಿದವರಿಗೆ ಪರೀಕ್ಷೆ ಪ್ರಾರಂಭವಾಗು ವುದಕ್ಕೆ 15-20 ನಿಮಿಷ ಮೊದಲು ಉತ್ತರಗಳು ಲಭ್ಯವಾ ಗುತ್ತಿದ್ದವು.ಪೊಲೀಸ್ ಸಿಬ್ಬಂದಿಯ ಮಗನೊಬ್ಬನ ಚಲನ ವಲನ ಗಮನಿಸಿದ್ದ ಸ್ಥಳೀಯ ವ್ಯಕ್ತಿ ಅನುಮಾನಗೊಂಡು ದೂರು ನೀಡಿದ್ದ.ಅವನ ವಿಚಾರಣೆ ವೇಳೆ ಹಲವು ಸಂಗತಿ ಗಳು ಬೆಳಕಿಗೆ ಬಂದಿದ್ದವು.ಅಕ್ರಮದಲ್ಲಿ ಭಾಗಿಯಾಗಿರುವ ಮೇಲ್ವಿಚಾರಕರು ಪರೀಕ್ಷಾರ್ಥಿಗಳಿಂದ OMR ಶೀಟ್ ಗಳನ್ನು ಸಂಗ್ರಹಿಸುತ್ತಿದ್ದರು.ಬಳಿಕ‌ ಮೇಲ್ವಿಚಾರಕರೇ ಉತ್ತರಗಳನ್ನು ಒಎಂಆರ್ ಶೀಟ್ ಗೆ ಎಂಟ್ರಿ ಮಾಡುತ್ತಿ ದ್ದರು ಎಂಬ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿತ್ತು.
ಮಹಾರಾಷ್ಟ್ರದ ಪುಣೆಯಲ್ಲಿ ಸಿಐಡಿ ಪೊಲೀಸರಿಗೆ ಸೆರೆ ಸಿಕ್ಕಿರುವ ಪಿಎಸ್ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಮತ್ತು ಸಹಚರರು ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯು ಇಂದು ಕಲಬುರಗಿ ಜಿಲ್ಲಾ ಹೆಚ್ಚುವರಿ 1ನೇ ಕೋರ್ಟ್ ನಲ್ಲಿ ನಡೆಯಲಿದೆ.ಎರಡು ದಿನಗಳ ಹಿಂದೆಯಷ್ಟೇ ಇವರ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಯಾಗಿತ್ತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.