ನಿವೇನಾದರೂ ಸರ್ಕಾರಿ ನೌಕರರಾಗಿದ್ದರೆ ಮೊದಲು ಈ ಕೆಲಸ ಮಾಡಿ…….

Suddi Sante Desk

ಬೆಂಗಳೂರು –

ನಿವೇನಾದರೂ ರಾಜ್ಯ ಸರ್ಕಾರಿ ನೌಕರರಾಗಿದ್ದರೆ ಮೊದಲು ಆಸ್ತಿ ವಿವರ ಸಲ್ಲಿಸಿ.ಹೌದು ರಾಜ್ಯದ ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಆಸ್ತಿ ಹೊಣೆಗಾರಿಕೆ ವಿವರಗಳನ್ನು ಡಿಸೆಂಬರ್ 31 ರೊಳಗೆ ಸಲ್ಲಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಆದೇಶ ಹೊರಡಿಸಿದೆ.ಆರ್ಥಿಕ ವರ್ಷದ ಬದಲಿಗೆ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಆಸ್ತಿ ಹೊಣೆಗಾರಿಕೆ ವಿವರಗಳನ್ನು ಸಲ್ಲಿಸುವಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರಿ ನೌಕರರು ಯಾವುದೇ ಸೇವೆ ಅಥವಾ ಹುದ್ದೆಗೆ ನೇಮಕವಾದ 3 ತಿಂಗಳೊಳಗೆ ತಮ್ಮ ಹೆಸರಿನಲ್ಲಿರುವ ಮತ್ತು ಕುಟುಂಬ ಸದಸ್ಯರಿಂದ ಬಂದ ಸ್ಥಿರಾಸ್ತಿ ಕುರಿತಾಗಿ ಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಪ್ರತಿ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಮಾರ್ಚ್ 31 ರೊಳಗೆ ಆಸ್ತಿಗಳ ಹೊಣೆಗಾರಿಕೆ ಪಟ್ಟಿ ಸಲ್ಲಿಸಬೇಕಿತ್ತು. ಆದರೆ, ಆರ್ಥಿಕ ವರ್ಷದ ಬದಲಿಗೆ ಕ್ಯಾಲೆಂಡರ್ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 31 ರೊಳಗೆ ಮಾಹಿತಿ ನೀಡಲು ತಿಳಿಸಿ ಹೊಸ ಆದೇಶವನ್ನು ಹೊರಡಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.