ಪ್ರೀತಿ ನಿರಾಕರಿಸದ ಯುವತಿಯ ಮೇಲಿನ ಸಿಟ್ಟಿಗೆ ಹೀಗೆ ಮಾಡೊದಾ……

Suddi Sante Desk

ಬೆಂಗಳೂರು –

ಮಾಜಿ ಪ್ರಿಯಕರನಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮಾಜಿ ಪ್ರಿಯತಮ ವಿದ್ಯಾರ್ಥಿನಿಯ ಸ್ಕೂಟಿಯನ್ನು ಸುಟ್ಟು ಹಾಕಿದ್ದಾನೆ .ಖಾಸಗಿ ಕಂಪನಿ ಉದ್ಯೋಗಿ ಸಂಜಯ್ ಮೂರ್ತಿ ದೂರುದಾರ ವಿದ್ಯಾರ್ಥಿನಿಯನ್ನ ಪ್ರೀತಿಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆ ಯುವತಿ ತನ್ನ ತಾಯಿ ಮದುವೆಗೆ ಒಪ್ಪುತ್ತಿಲ್ಲ ಎಂಬ ಕಾರಣ ನೀಡಿ ಬ್ರೇಕಪ್ ಮಾಡಿಕೊಂಡಿದ್ದಳು.

ಆದರೆ ಪ್ರೀತಿಯನ್ನ ಕೊನೆಗಾಣಿಸುವ ನಿರ್ಧಾರಕ್ಕೆ ಸಂಜಯ್ ಸುತಾರಾಂ ಒಪ್ಪಿರಲಿಲ್ಲ. ವಿದ್ಯಾರಣ್ಯ ಪುರದಲ್ಲಿರುವ ಮಾಜಿ ಗೆಳತಿಯ ನಿವಾಸಕ್ಕೆ ಜನವರಿ 12 ರಂದು ಬಂದ ಸಂಜಯ್, ಆಕೆ ಹಾಗೂ ಆಕೆಯ ತಾಯಿಗೆ ಜೀವ ಬೆದರಿಕೆಯನ್ನೊಡ್ಡಿದ. ಆದರೆ ಯುವತಿ ನಿನ್ನೊಂದಿಗೆ ಮಾತನಾಡಲೂ ನನಗೆ ಇಷ್ಟವಿಲ್ಲವೆಂದು ಹೇಳಿದ್ದಳು ಎನ್ನಲಾಗಿದೆ.

ಫೆಬ್ರವರಿ 2ನೇ ತಾರೀಖಿನಂದು ಯಾರೋ ದುಷ್ಕರ್ಮಿಗಳು ಆಕೆಯ ಸ್ಕೂಟಿಯನ್ನ ಸುಟ್ಟು ಹಾಕಿದ್ದಾರೆ. ಈ ಸಂಬಂಧ ಸಿಸಿ ಟಿವಿ ಪರಿಶೀಲಿಸಿದ ವೇಳೆ ಅದು ಸಂಜಯ್​ದೇ ಕೆಲಸ ಅನ್ನೋದು ತಿಳಿದು ಬಂದಿದೆ. ಹೀಗಾಗಿ ಯುವತಿ ಮಾಜಿ ಪ್ರಿಯಕರನ ವಿರುದ್ಧ ದೂರು ದಾಖಲಿಸಿದ್ದಾಳೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.