ಬೆಂಗಳೂರು –
ಇಲ್ಲೊಬ್ಬ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಜ್ಞಾನ ದೇಗುಲದಲ್ಲಿ ಮಾಡಬಾರದ ಕೆಲಸವನ್ನು ಮಾಡಿ ಈಗ ಇಲಾಖೆಯೆ ತಲೆ ತಗ್ಗಿಸುವಂತೆ ಮಾಡಿ ದ್ದಾರೆ.ಹೌದು ಮಗನನ್ನು ಅಡ್ಮಿಷನ್ ಮಾಡಲು ಬಂದು ಮಹಿಳೆಯೊಬ್ಬರ ಬಳಿ ಮುಖ್ಯ ಶಿಕ್ಷಕ ಶಾಲೆ ಯಲ್ಲೇ ಶರ್ಟ್ ಬಿಚ್ಚಿ ಮಸಾಜ್ ಮಾಡಿಸಿಕೊಂಡಿ ರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರಿನ ಕೋದಂಡರಾಮಪುರದ ಬಿಬಿಎಂಪಿ ಶಾಲೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ ವಿದ್ಯಾ ಮಹಿಳೆಯೊಬ್ಬರು ಮಗನ್ನು ಶಾಲೆಗೆ ಸೇರಿಸಲು ಬಂದಿದ್ದರು.ಈ ವೇಳೆ ನೀವು ಏನು ಕೆಲ್ಸ ಮಾಡ್ತಿ ರೋದು ಎಂದು ಶಿಕ್ಷಕ ಕೇಳಿದ್ದು ಬ್ಯೂಟಿ ಪಾರ್ಲರ್ ನಡೆಸುತ್ತಿರುವುದಾಗಿ ಬಾಲಕನ ತಾಯಿ ತಿಳಿಸಿದ್ದಾರೆ. ಹಾಗಾದ್ರೆ ನನಗೂ ಮಸಾಜ್ ಮಾಡಿ ಎಂದು ಮುಖ್ಯಶಿಕ್ಷಕ ಲೋಕೇಶಪ್ಪ ಕೇಳಿದ್ದಾರೆ. ಮುಜುಗರ ಕ್ಕೀಡಾಗಿ ಮಹಿಳೆ ನಿರಾಕರಿಸಿದ್ದಾರೆ.ಆದರೂ ಒತ್ತಾಯ ಮಾಡಿದ ಮುಖ್ಯ ಶಿಕ್ಷಕ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಶಾಲೆಯ ಕೋಣೆಯೊಂದರಲ್ಲಿ ಶರ್ಟ್ ಬಿಚ್ಚಿ ಮಲಗಿದ್ದಾನೆ.ಅನಿವಾರ್ಯವಾಗಿ ಆ ಮಹಿಳೆ ಮಸಾಜ್ ಮಾಡಿ ಮುಜುಗರದಿಂದಲೇ ಹೊರ ಹೋಗಿದ್ದಾರೆ.
ಮಸಾಜ್ ಮಾಡಿಸಿಕೊಳ್ಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ವೈರಲ್ ಆಗಿದೆ. ಮುಖ್ಯಶಿಕ್ಷಕನ ಅನುಚಿತ ವರ್ತನೆ ವಿರುದ್ಧ ಸಿಬ್ಬಂದಿ ಮೌನ ವಹಿಸಿ ದ್ದಾರೆ.ಈ ಶಾಲೆಯಲ್ಲಿ ಬಹುತೇಕ ಹೊರಗುತ್ತಿಗೆ ಶಿಕ್ಷಕರೇ ಇದ್ದಾರೆ.ಮುಖ್ಯ ಶಿಕ್ಷಕನ ನಡೆಯನ್ನು ಪ್ರಶ್ನಿಸಿದ್ರೆ ಕೆಲಸಕ್ಕೆ ಕುತ್ತು ಬಂದೀತು ಎಂಬ ಭಯಕ್ಕೆ ಸುಮ್ಮನಾಗಿದ್ದಾರೆ ಎಂದು ತಿಳಿದು ಬಂದಿದೆ.