ದಟ್ಟ ಕಾಡಿನ ನಡುವೆ ಸುಂದರ ಸರ್ಕಾರಿ ಶಾಲೆ – ಹೇಗಿದೆ ಗೊತ್ತಾ ಸುಂದರ ಪರಿಸರದ ಈ ಒಂದು ಸರ್ಕಾರಿ ಶಾಲೆ…..

Suddi Sante Desk

ಕಾರವಾರ –

ಅದೊಂದು ದಟ್ಟ ಅರಣ್ಯದ ನಡುವೆ ಇರುವ ಪುಟ್ಟದಾದ ಸುಂದರ ಶಾಲೆ.ಶಾಲಾ ಆವರಣದಲ್ಲಿ ಹತ್ತಾರು ಬಗೆಯ ಹಣ್ಣಿನ ಹೂವಿನ ಗಿಡಗಳು ರಾರಾಜಿಸುತ್ತಿವೆ.ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆ ಮಾತಿನಂತೆ ಆ ಶಾಲೆ ಯಲ್ಲಿ ವಿದ್ಯಾಭ್ಯಾಸದ ಮಾಡುವ ಮಕ್ಕಳಿಗೆ ಪಾಠದ ಜೊತೆಗೆ ಪರಿಸರ ಜ್ಞಾನ,ಪ್ರೇಮವನ್ನು ತುಂಬಲಾಗುತ್ತಿದೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕುಂಬಾರ ವಾಡ ಪಂಚಾಯತ್ ವ್ಯಾಪ್ತಿಯ ಡೇರಿಯಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬಗೆಗಿನ ಕಾಳಜಿಯ ಬಗ್ಗೆ ಜಾಗೃತಿ ನೀಡುತ್ತಿದೆ.ಈ ಶಾಲೆಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಪರಿಸರ ಜ್ಞಾನವನ್ನೂ ಸಹ ನೀಡಲಾಗುತ್ತಿದೆ.ಇಡೀ ಶಾಲಾ ಆವರಣವೇ ತೋಟದ ರೀತಿಯಲ್ಲಿ ವಿವಿಧ ಬಗೆಯ ಗಿಡ-ಮರಗಳಿಂದ ತುಂಬಿದ್ದು ಇವುಗಳ ಪೋಷಣೆಯ ಜವಾಬ್ದಾರಿಯನ್ನು ಮಕ್ಕಳಿಗೆ ನೀಡಲಾಗಿದೆ.

ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಇದ್ದು ಒಟ್ಟು 18 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.ಇನ್ನು ವಿಶೇಷ ಅಂದರೆ ಶಾಲೆಗೆ ಪ್ರವೇಶ ಪಡೆಯುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಗಿಡವನ್ನು ನೆಟ್ಟು ಪೋಷಣೆ ಮಾಡಬೇಕಾಗಿದೆ. ಶಾಲೆಯ ವ್ಯಾಪ್ತಿಯಲ್ಲಿರುವ ಒಂದೂವರೆ ಎಕರೆ ಪ್ರದೇಶ ದಲ್ಲಿ ಕಳೆದ 14 ವರ್ಷದಲ್ಲಿ ಇಲ್ಲಿ ಕಲಿತ ವಿದ್ಯಾರ್ಥಿಗಳು ನೆಟ್ಟ ಮಾವು,ಹಲಸು, ತೆಂಗಿನ ಮರಗಳು ಇಂದು ಫಲ ನೀಡುತ್ತಿದ್ದು ಶಾಲೆಯ ಅಂದವನ್ನು ಹೆಚ್ಚಿಸಿವೆ.

ತೋಟಗಾರಿಕೆ ಬೆಳೆ ಬೆಳೆದು ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಕುಂಬಾರವಾಡ ಪಂಚಾಯತ್ ವ್ಯಾಪ್ತಿಯ ಡೇರಿಯಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಬಗೆಗಿನ ಕಾಳಜಿಯ ಬಗ್ಗೆ ಜಾಗೃತಿ ನೀಡುತ್ತಿದೆ ಈ ಶಾಲೆಯಲ್ಲಿ ಮಕ್ಕಳಿಗೆ ಪಾಠದ ಜೊತೆಗೆ ಪರಿಸರ ಜ್ಞಾನವನ್ನೂ ಸಹ ನೀಡಲಾಗುತ್ತಿದೆ.ಇಡೀ ಶಾಲಾ ಆವರಣವೇ ತೋಟದ ರೀತಿಯಲ್ಲಿ ವಿವಿಧ ಬಗೆಯ ಗಿಡ ಮರಗಳಿಂದ ತುಂಬಿದ್ದು ಇವುಗಳ ಪೋಷಣೆಯ ಜವಾ ಬ್ದಾರಿಯನ್ನು ಮಕ್ಕಳಿಗೆ ನೀಡಲಾಗಿದೆ.

ಈ ಶಾಲೆಯಲ್ಲಿ ಜೇನುಸಾಕಾಣಿಕೆ ಕೂಡ ನಡೆಸಲಾಗುತ್ತದೆ. ಮಕ್ಕಳು ಯಾವುದೇ ಭಯವಿಲ್ಲದೆ ಜೇನು ಪೆಟ್ಟಿಗೆ ತೆಗೆದು ಹುಳುಗಳ ಕಾರ್ಯ ವೈಖರಿಯನ್ನು ಗಮನಿಸುತ್ತಾರೆ. ಮಾತ್ರ ವಲ್ಲದೆ ಶಾಲಾ ಆವರಣದಲ್ಲಿ ಗೆಡ್ಡೆ ಗೆಣಸು ಹಾಗೂ ತೋಟಗಾರಿಕಾ ಬೆಳೆಗಳನ್ನು ಸಹ ಬೆಳೆಯಲಾಗುತ್ತಿದ್ದು ಮಕ್ಕಳೇ ಗಿಡವನ್ನು ನೆಟ್ಟು ಪೋಷಣೆ ಮಾಡುತ್ತಾರೆ. ಜೊತೆಗೆ ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಆರೈಕೆ ಹೇಗೆ ಮಾಡಬೇಕು ಎಂಬುದನ್ನು ತೋರಿಸಿಕೊಡುತ್ತಾರೆ

ಮಾದರಿ ಶಾಲೆ ಶಾಲಾ ಮಕ್ಕಳೇ ಬೆಳೆದ ತರಕಾರಿಗಳನ್ನ ಬಿಸಿಯೂಟಕ್ಕೆ ಬಳಸಲಾಗುತ್ತದೆ. ಅಲ್ಲದೇ ಶಾಲಾ ಆವರ ಣದಲ್ಲಿ ಬೆಳೆದ ಹಣ್ಣುಗಳನ್ನ ಮಕ್ಕಳಿಗೆ ನೀಡಿ ಉಳಿದದ್ದನ್ನು ಮಾರಾಟ ಮಾಡಿ ಬಂದ ಹಣವನ್ನು ಮಕ್ಕಳಿಗಾಗಿ, ಶಾಲೆ ಯ ಅಭಿವೃದ್ದಿಗಾಗಿ ಬಳಸಲಾಗುತ್ತಿದೆ.ಇನ್ನು ಈ ಶಾಲೆಗೆ ಹಸಿರು ಶಾಲೆ ಎಂಬ ರಾಜ್ಯ ಪ್ರಶಸ್ತಿಯೂ ಕೂಡ ದೊರೆತಿ ದ್ದು ರಾಜ್ಯದ ಇತರೆ ಶಾಲೆಗಳಿಗೂ ಮಾದರಿಯಾಗಿ ನಿಂತಿದೆ.

ಖಾಯಂ ಶಿಕ್ಷಕರಿಲ್ಲ ಲೀಲಾದರ್ ಮೊಗೇರ್ ವರ್ಗಾವಣೆ ಗೊಂಡು 3 ವರ್ಷಗಳಾಗಿವೆ.ಆದರೂ ಕೂಡ ಇದುವರೆಗೂ ಯಾವುದೇ ಖಾಯಂ ಶಿಕ್ಷಕರನ್ನು ನೇಮಿಸಿಲ್ಲ.ಓರ್ವ ಅತಿಥಿ ಶಿಕ್ಷಕರನ್ನು ನೇಮಕ ಮಾಡಿದ್ದು, ಸದ್ಯ ಅವರಿಂದಲೇ ಶಾಲೆ ನಡೆಯುತ್ತಿದೆ.ಸರ್ಕಾರ ಕೂಡ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡುವುದರ ಜೊತೆಗೆ ಶಾಲೆಯನ್ನು ಅಭಿವೃದ್ದಿಪ ಡಿಸಲು ಇನ್ನಷ್ಟು ಸಹಕಾರ ನೀಡಬೇಕು ಎಂಬುದು ಎಸ್‌ಡಿ ಎಂಸಿ ಸದಸ್ಯರಾದ ಯೋಗೇಶ ಡೇರೇಕರ್ ಒತ್ತಾಯಿಸಿ ದ್ದಾರೆ.

ಒಟ್ಟಾರೆ ಶಾಲೆ ಎಂದಾಕ್ಷಣ ಶಿಕ್ಷಕರ ಪಾಠಕ್ಕೆ ಮಾತ್ರ ಸೀಮಿ ತವಾಗಿರುವ ಇಂದಿನ ದಿನದಲ್ಲಿ ಮಕ್ಕಳಿಗೆ ಕೃಷಿ ಹಾಗೂ ಪರಿಸರದ ಕುರಿತು ಪ್ರಾಯೋಗಿಕವಾಗಿಯೇ ಜ್ಞಾನ ನೀಡುತ್ತಿ ರುವುದು ನಿಜಕ್ಕೂ ಶ್ಲಾಘನೀಯ.ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆ ಇಡೀ ರಾಜ್ಯಕ್ಕೇ ಮಾದರಿ ಯಾಗಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.