PSI ನೇಮಕಾತಿ ಆದೇಶ ಕೈ ಸೇರುವುದಕ್ಕೂ ಮುನ್ನವೇ ಹುಟ್ಟೂರಲ್ಲಿ ಸಮವಸ್ತ್ರ ಧರಿಸಿ ಸಂಭ್ರಮಿಸಿದ ಬಸನಗೌಡರು ಹೇಗಿತ್ತು ಗೊತ್ತಾ ಮುಂದೇ‌ನಾಗಿದೆ ಗೊತ್ತಾ…..

Suddi Sante Desk

ಹಾವೇರಿ –

PSI ಪರೀಕ್ಷೆ ಯಲ್ಲಿ ಅಕ್ರಮ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿಯ ಸಹಾಯಕ ತನಿಖಾಧಿಕಾರಿಗಳು ಏಪ್ರಿಲ್ 20, 2022ರಂದು ತನಿಖೆಗೆ ಹಾಜರಾಗುವಂತೆ ಈಗಾಗಲೇ ಹಲವರಿಗೆ ನೊಟೀಸ್ ನೀಡಿದ್ದರು.50 ಜನರಿಗೆ ನೀಡಿದ್ದ ನೊಟೀಸ್ ಪಟ್ಟಿಯಲ್ಲಿ ಹಾವೇರಿಯ ಬಸನಗೌಡ ಕರೇಗೌಡ್ರ ಹೆಸರು ಇದೆ.ಅಕ್ಟೋಬರ್ 3, 2021ರಂದು ಬಸನಗೌಡ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿದ್ದರು.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನೇಮಕಾತಿ ವೇಳೆ ನಡೆದಿರುವ ಅಗಾಧ ಅಕ್ರಮ ದಲ್ಲಿ ಸದ್ಯಕ್ಕೆ ಕಿಂಗ್ ಪಿನ್ ಎನ್ನಲಾಗಿರುವ ರುದ್ರಗೌಡ ಪಾಟೀಲ್ ಬಂಧನವಾಗುತ್ತಿದ್ದಂತೆ ಅನೇಕರಿಗೆ ನಡುಕ ಶುರುವಾಗಿದೆ.

ಥರಹೇವಾರಿ,ರಂಗುರಂಗಿನ ಬೆಳವಣಿಗೆಗಳೂ, ಅಕ್ರಮ ಗಳು ಈ ಒಂದು ಪರೀಕ್ಷೆ ಯಲ್ಲಿ ಕಂಡು ಬರುತ್ತಾ ಕಣ್ಣಿಗೆ ರಾಚುತ್ತಿವೆ.ಈ ಮಧ್ಯೆ, ಪರಮ ಶಿಸ್ತಿನ ಪೊಲೀಸ್ ಇಲಾಖೆ ಗೆ ಸೇರುವ ಮುನ್ನ ವಸ್ತ್ರ ಸಂಹಿತೆಯನ್ನು ಕಡೆಗಣಿಸಿ ಇನ್ನೂ ನೇಮಕಾತಿಯೇ ಇನ್ನೂ ಪೈನಲ್ ಆಗದಿದ್ದರೂ ಆಯ್ಕೆ ಗೊಂಡಿರುವ ಅಭ್ಯರ್ಥಿಯೊಬ್ಬರು ತಮ್ಮೂರಿನ ಜನತೆಯ ಮುಂದೆ ಪಿಎಸ್‌ಐ ಸಮವಸ್ತ್ರ ಧರಿಸಿ ಭಾಷಣ ಮಾಡಿರುವ ಪ್ರಸಂಗ ನಡೆದಿದೆ.ಇದು ಸ್ವಲ್ಪ ಅತಿರೇಕದ್ದೇ ಅನಿಸಿದ್ದರೂ ಸದರಿ ಅಭ್ಯರ್ಥಿ ನಿಜಕ್ಕೂ ಪ್ರಾಮಾಣಿಕವಾಗಿ 27ನೇ ರ್ಯಾಂಕ್ ಗಳಿಸಿ ಆಯ್ಕೆಯಾಗಿದ್ದರೆ ಅತ್ಯುತ್ಸಾಹದಲ್ಲಿ ಡ್ರೆಸ್ ಹಾಕಿಕೊಂಡು ಸ್ವಲ್ಪ ಯಡವಟ್ಟು ಮಾಡಿಕೊಂಡಿ ದ್ದಾರೆ.ಹೌದು ಪಿಎಸ್‌ಐ ಆಗಿ ಆಯ್ಕೆಯಾಗಿರುವ ಹಾವೇರಿ ಯ ಬಸನಗೌಡ ಕರೇಗೌಡ ಅವರು 27ನೇ ರ್ಯಾಂಕ್ ಪಡೆದಿದ್ದಾರೆ.ಇವರು ಮೂಲತಃ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದ ನಿವಾಸಿ.ಸದ್ಯಕ್ಕೆ ಕಾನ್ಸ್‌ಟೇಬಲ್ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ಮಧ್ಯೆ ಪಿಎಸ್‌ಐ ಪರೀಕ್ಷೆ ಬರೆದು ಅತ್ಯುತ್ತಮ ಎನ್ನಬ ಹುದಾದ 27ನೇ ರ್ಯಾಂಕ್ ಪಡೆದು ಆಯ್ಕೆಯೂ ಆಗಿದ್ದಾರೆ.ಆದರೆ ಪಿಎಸ್‌ಐ ಸೆಲೆಕ್ಷನ್ ಆಗಿದ್ದಕ್ಕೆ ಇವರು ತಮ್ಮ ಹುಟ್ಟೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‌ಐ ಡ್ರೆಸ್ ಹಾಕ್ಕೊಂಡು ಮಿಂಚಿದ್ದಾರೆ ಹೀಗೆ ಬಿಲ್ಡ್ ಅಪ್ ಕೊಟ್ಟ ಬಸನಗೌಡ ಕರೇಗೌಡ ಅವರು ಜನವರಿ 19, 2022ರಂದು ಬಿಡುಗಡೆಯಾಗಿದ್ದ ಪಿಎಸ್‌ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ 27ನೇ ಶ್ರೇಣಿ ಪಡೆದಿದ್ದಾರೆ.ಒಟ್ಟು 545 ಪಿಎಸ್‌ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿಯಲ್ಲಿ ಬಸನ ಗೌಡ ಸಹ ಸೆಲೆಕ್ಟ್ ಆಗಿದ್ದಾರೆ.ಸದರಿ ಬಸನಗೌಡಕರೇಗೌಡ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನಸ್ಟೇಬಲ್ ಆಗಿದ್ದಾರೆ.ಪಿಎಸ್‌ಐ ಸೆಲೆಕ್ಷನ್ ಆಗಿದ್ದಕ್ಕೆ ಕೆಲವು ದಿನಗಳ ಹಿಂದೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‌ಐ ಡ್ರೆಸ್ ಹಾಕ್ಕೊಂಡು ಭಾಗವಹಿಸಿ ಮಿಂಚಿದ್ದರು.ಪಿಎಸ್‌ಐ ಡ್ರೆಸ್ ಹಾಕ್ಕೊಂಡು ಭಾಷಣ ಸಹ ಬಿಗಿದಿದ್ದಾರೆ ಬಸನಗೌಡ ಸಾಹೇಬರು.
ಇನ್ನೂ ಇತ್ತ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿಐಡಿ ಯ ಸಹಾಯಕ ತನಿಖಾಧಿಕಾರಿಗಳು ಏಪ್ರಿಲ್ 20- 2022 ರಂದು ತನಿಖೆಗೆ ಹಾಜರಾಗುವಂತೆ ನೊಟೀಸ್ ನೀಡಿದ್ದರು. 50 ಜನರಿಗೆ ನೀಡಿದ್ದ ನೊಟೀಸ್ ಪಟ್ಟಿಯಲ್ಲಿ ಬಸನಗೌಡ ಕರೇಗೌಡ್ರ ಹೆಸರು ಸಹ ಇತ್ತು.ಅಕ್ಟೋಬರ್ 3, 2021 ರಂದು ಬಸನಗೌಡ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿ ದ್ದರು.ಕೊನೆಯಲ್ಲಿ ಕರ್ನಾಟಕ ಪೊಲೀಸ್ ಇಲಾಖೆಗೆ ಅತ್ಯುತ್ತಮ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳನ್ನು ಆಯ್ಕೆ ಮಾಡಬೇಕು ಎಂಬ ಸದುದ್ದೇಶದಿಂದ ಹಿರಿಯ ಐಪಿಎಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಅವರು ಇಡೀ ದೇಶಕ್ಕೆ ಮಾದರಿಯಾದ ಅತ್ಯುತ್ತಮ ಆಯ್ಕೆ ವ್ಯವಸ್ಥೆ ಯನ್ನು ತಂದಿದ್ದರು.ಆದರೆ ಅವರ ಆಶಯಕ್ಕೆ ಎಳ್ಳುನೀರು ಬಿಡುವಂತೆ,ಪೊಲೀಸ್ ವ್ಯವಸ್ಥೆಗೇ ಸಡ್ಡು ಹೊಡೆಯು ವಂತೆ ಕಳ್ಳರ ಕೂಟವು ರಂಗೋಲಿ ಕೆಳಗೆ ನುಗ್ಗಿದೆ.ಇಡೀ ವ್ಯವಸ್ಥೆಯನ್ನು ದೂಷಿಸುವಂತೆ ಅನುಮಾನದ ದೃಷ್ಟಿ ಯಿಂದ ನೋಡುವಂತೆ ಮಾಡಿಟ್ಟಿದೆ.ಅಂತಹುದರಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿ ಆಯ್ಕೆಗೊಂಡಿರುವ ಅರ್ಹ ಅಭ್ಯರ್ಥಿಗಳನ್ನೂ ಅನುಮಾನದ ದೃಷ್ಟಿಯಿಂದ ನೋಡು ವಂತಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.