ಬೆಂಗಳೂರು –
ಡಿಸೆಂಬರ್ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಎಷ್ಟು ದಿನ ಗೊತ್ತಾ – ವರ್ಷದ ಕೊನೆಯ ತಿಂಗಳಲ್ಲಿ 8 ದಿನ ಶಾಲಾ ಕಾಲೇಜುಗಳಿಗೆ ರಜೆ
ವರ್ಷದ ಕೊನೆಯ ದಿನ ಡಿಸೆಂಬರ್ ತಿಂಗಳಲ್ಲಿ ಶಾಲಾ ಕಾಲೇಜುಗಳಿಗೆ 8 ದಿನ ರಜೆ ಸಿಗಲಿದೆ ಹೌದು ಮಕ್ಕಳಿಗೆ ರಜೆಯ ಮಜಾ ಸಿಗಲಿದ್ದು ಕರ್ನಾಟಕದಲ್ಲಿ 8 ದಿನಗಳ ಕಾಲ ಶಾಲೆಗಳಿಗೆ ರಜೆ ಸಿಗಲಿದೆ ಶಾಲಾ ಮಕ್ಕಳು ಪ್ರತಿ ವಾರವೂ ಯಾವ ದಿನ ರಜೆ ಸಿಗುತ್ತದೆ ಎಂಬುದಕ್ಕೆ ಕಾಯುತ್ತಿರುತ್ತಾರೆ.
ನವೆಂಬರ್ ತಿಂಗಳಲ್ಲಿ ಹಲವು ರಜೆಗಳಿವೆ. ಅದಾದ ಬಳಿಕ ಬರುವ ವರ್ಷದ ಕೊನೆಯ ತಿಂಗಳು ಡಿಸೆಂಬರ್ ನಲ್ಲಿಯೂ ತಿಂಗಳ ಉದ್ದಕ್ಕೂ ಕರ್ನಾಟಕದಲ್ಲಿ ಬರೋಬ್ಬರಿ 8 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಸಿಗಲಿದೆ.ಡಿಸೆಂಬರ್ ತಿಂಗಳಲ್ಲಿ ಒಟ್ಟು 31 ದಿನ ಗಳಿದ್ದು ಇದರಲ್ಲಿ 8 ದಿನಗಳ ಕಾಲ ಶಾಲೆಗಳಿಗೆ ರಜೆ ಸಿಗಲಿದೆ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸರ್ಕಾರಿ ರಜೆ ಇದೆ. 25ರಂದು ಹಬ್ಬದ ಹಿನ್ನೆಲೆಯಲ್ಲಿ 24ರಂದು ಐಚ್ಛಿಕ ಅಥವಾ ಸ್ಥಳೀಯ ರಜೆ ನೀಡಬಹುದಾಗಿದೆ.
ಕೆಲವು ಶಾಲೆಗಳಲ್ಲಿ 26ರಂದು ರಜೆ ಘೋಷಿಸಲಾಗು ತ್ತದೆ.ಡಿಸೆಂಬರ್ ತಿಂಗಳಲ್ಲಿ 5 ಭಾನುವಾರಗಳಿವೆ. ಡಿಸೆಂಬರ್ 1,8,15,22 ಮತ್ತು 29ರಂದು ಭಾನುವಾರ ಆಗಿರುವುದರಿಂದ ಸಹಜವಾಗಿ ಶಾಲಾ ಕಾಲೇಜುಗಳಿಗೆ ರಜೆ ಇದೆ. ಉಳಿದಂತೆ ಡಿಸೆಂಬರ್ 14ರಂದು ಹುತ್ತರಿ ಹಬ್ಬ ಇರುವುದರಿಂದ ಸ್ಥಳೀಯ ರಜೆ ಘೋಷಿಸುವ ಅವಕಾಶವಿದೆ.
ಕೊಡಗು ಜಿಲ್ಲೆಯಲ್ಲಿ ಹುತ್ತರಿ ಹಬ್ಬದ ಸಂಭ್ರಮ ಹೆಚ್ಚಿರುವುದರಿಂದ ಈ ಜಿಲ್ಲೆಯಲ್ಲಿ ಸ್ಥಳೀಯ ರಜೆಯಾಗಿ ಘೋಷಿಸಲಾಗುತ್ತದೆ. ಹೀಗಾಗಿ ಈ ದಿನವೂ ಶಾಲೆಗಳಿಗೆ ರಜೆ ಇರಲಿದೆ. ಹೀಗಾಗಿ ಇಡೀ ಡಿಸೆಂಬರ್ ತಿಂಗಳಲ್ಲಿ ಒಟ್ಟು 8 ದಿನಗಳ ರಜೆ ಇದೆ.ಡಿಸೆಂಬರ್ 1, 8, 14, 15, 22, 24, 25, ಮತ್ತು 29ರಂದು ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ.
ಅಂದರೆ ಒಂದೇ ತಿಂಗಳಲ್ಲಿ 8 ರಜೆ. ಈ ವರ್ಷ ಕರ್ನಾಕಟದ ಶಾಲಾ ಮಕ್ಕಳಿಗೆ ಸುದೀರ್ಘ ಅವಧಿಯ ರಜೆ ಸಿಕ್ಕಿವೆ. ಏಪ್ರಿಲ್-ಮೇ ತಿಂಗಳಲ್ಲಿ ಬೇಸಿಗೆ ರಜೆ ಬಳಿಕ, ನವರಾತ್ರಿ ಮತ್ತು ದೀಪಾವಳಿ ರಜೆಯನ್ನು ಮಕ್ಕಳು ಸವಿದಿದ್ದಾರೆ. ದೀಪಾವಳಿಗೆ ಮೂರು ದಿನಗಳ ರಜೆ ಇದ್ದವು.ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಮಳೆ ಸಂದರ್ಭದಲ್ಲಿ ಹಲವು ದಿನಗಳ ಕಾಲ ರಜೆ ಘೋಷಣೆ ಯಾಗಿದ್ದವು.
ಹೀಗಾಗಿ ಶನಿವಾರ ಮಧ್ಯಾಹ್ನದ ಬಳಿಕ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ.ರಜೆಯ ಸಮಯದಲ್ಲಿ ಮಕ್ಕಳು ಆಟೋಟ ಸೇರಿದಂತೆ ವಿವಿಧ ಚಟುವಟಿಕೆಗ ಳಲ್ಲಿ ಭಾಗವಹಿಸಲು ಅವಕಾಶ ದೊರಕಲಿದೆ ಪ್ರತಿ ಯೊಬ್ಬರೂ ತಮ್ಮ ಚಟುವಟಿಕೆಗಳನ್ನು ಯೋಜಿಸಿ ಕೊಂಡು, ಮುಂದಿನ ತರಗತಿಗಳಿಗೆ ಸಿದ್ಧತೆ ನಡೆಸಬಹುದು
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..